Viral Video: ಜಿಪ್‌ಲೈನ್‌ ವೇಳೆ 40 ಅಡಿ ಆಳಕ್ಕೆ ಬಿದ್ದ ಬಾಲಕ; ವಿಡಿಯೋ ಇಲ್ಲಿದೆ ನೋಡಿ

|

Updated on: Jul 01, 2023 | 11:12 AM

6 ವರ್ಷದ ಪುಟ್ಟ ಹುಡುಗನೊಬ್ಬ ಜಿಪ್‌ಲೈನ್‌ನಿಂದ ಸುಮಾರು 40 ಅಡಿ ಎತ್ತರದಿಂದ ಬಿದ್ದಿದ್ದು ಈ ಬೆಚ್ಚಿಬೀಳಿಸುವ ದೃಶ್ಯಾವಳಿಗಳು ಇದೀಗಾ ಸೋಶೀಯಲ್​​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

Viral Video: ಜಿಪ್‌ಲೈನ್‌ ವೇಳೆ 40 ಅಡಿ ಆಳಕ್ಕೆ ಬಿದ್ದ ಬಾಲಕ; ವಿಡಿಯೋ ಇಲ್ಲಿದೆ ನೋಡಿ
ಜಿಪ್‌ಲೈನ್‌ ವೇಳೆ 40 ಅಡಿ ಆಳಕ್ಕೆ ಬಿದ್ದ ಬಾಲಕ
Image Credit source: twitter
Follow us on

ಇತ್ತೀಚಿನ ದಿನಗಳಲ್ಲಿ ವೀಕೆಂಡ್​​ ಬಂತೆದರೆ ಸಾಕು, ಟ್ರೆಕ್ಕಿಂಗ್​​, ಬಂಗೀ ಜಂಪಿಂಗ್​​​​ ಹೀಗೆ ಸಾಹಸಮಯ ಕ್ರೀಡೆಗಳಲ್ಲಿ ಒಲವು ತೋರಿಸುವವರೇ ಹೆಚ್ಚು. ಆದರೆ ಇಂತಹ ಸಾಹಸಕ್ಕೆ ಇಳಿಯುವ ಮೊದಲು ಅಲ್ಲಿನ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ನಿಮ್ಮ ಪ್ರಾಣಕ್ಕೆ ಕಂಟಕವಾಗುವ ಅಪಾಯ ಹೆಚ್ಚಿದೆ. ಇದ್ದಂತೆ ಘಟನೆಯೊಂದು ಇತ್ತೀಚೆಗಷ್ಟೇ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. 6 ವರ್ಷದ ಪುಟ್ಟ ಹುಡುಗನೊಬ್ಬ ಜಿಪ್‌ಲೈನ್‌ನಿಂದ ಸುಮಾರು 40 ಅಡಿ ಎತ್ತರದಿಂದ ಬಿದ್ದಿದ್ದು ಈ ಬೆಚ್ಚಿಬೀಳಿಸುವ ದೃಶ್ಯಾವಳಿಗಳು ಇದೀಗಾ ಸೋಶೀಯಲ್​​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಮೆಕ್ಸಿಕೋದ ಮಾಂಟೆರ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಆರು ವರ್ಷದ ಬಾಲಕ ಜಿಪ್‌ಲೈನ್‌ನ ಸಾಹಸ ಆಡಲು ಹೋಗಿದ್ದಾನೆ. ಈ ವೇಳೆ ಪೋಷಕರು ದೂರದಿಂದಲೇ ನಿಂತು ವಿಡಿಯೋ ಮಾಡಿದ್ದಾರೆ. ಇನ್ನೇನು 40 ಅಡಿ ಎತ್ತರದ ಸಾಹಸ ಕ್ರೀಡೆಯಲ್ಲಿ ಈ ತುದಿಯಿಂದ ಆ ತುದಿಗೆ ತಲುಪುವ ಹೊತ್ತಿಗಾಗಲೇ ಬಾಲಕನ ಸುರಕ್ಷತೆಗೆಂದು ಕಟ್ಟಿರುವ ರೋಪ್​​ ತುಂಡಾಗಿ ಬಾಲಕ 40 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದಿದ್ದಾನೆ. ಈ ದೃಶ್ಯ ಎದೆ ನಡುಕ ಹುಟ್ಟಿಸುವುದಂತೂ ಖಂಡಿತಾ. ಪವಾಡ ಸದೃಶ ರೀತಿಯಲ್ಲಿ ಬಾಲಕ ಬದುಕುಳಿದಿದ್ದು, ಸಣ್ಣಪುಟ್ಟ ಗಾಯಗಳಾಗಿ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ಇದನ್ನೂ ಓದಿ: 500ರೂಗಳ ಕಂತೆ ಕಂತೆ ನೋಟಿನ ಜೊತೆ ಪೊಲೀಸ್​​​​​​​ ಅಧಿಕಾರಿಯ ಹೆಂಡತಿ ಮಕ್ಕಳ ಸೆಲ್ಫಿ

ಸುಮಾರು 40 ಅಡಿ ಎತ್ತರದಿಂದ ಬಾಲಕ ನೇರವಾಗಿ ಕೊಳಕ್ಕೆ ಬಿದ್ದಿದ್ದಾನೆ . ತಕ್ಷಣ ಸಮೀಪದಲ್ಲಿದ್ದ ಪ್ರವಾಸಿಗರೊಬ್ಬರು ಕೊಳಕ್ಕೆ ಹಾರಿ ಬಾಲಕನನ್ನು ರಕ್ಷಿಸಿದ್ದಾರೆ. ಸಣ್ಣಪುಟ್ಟ ಗಾಯಗಳ ಹೊರತಾಗಿ ಬಾಲಕ ಮಾನಸಿಕವಾಗಿ ಕುಗ್ಗಿದ್ದಾನೆ. ಈಗಲೂ ಕೂಡ ಆಗಾಗ ನಿದ್ದೆಯಿಂದ ಎಚ್ಚೆತ್ತು ಭಯಪಡುತ್ತಿರುತ್ತಾನೆ ಎಂದು ಅವನ ಸಹೋದರ ಜೆ ಸೀಸರ್ ಸೌಸೆಡಾ ತಿಳಿಸಿದ್ದಾನೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಘಟನೆಯ ನಂತರ ಸವಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಥಳೀಯ ಸರ್ಕಾರ ತನಿಖೆ ಆರಂಭಿಸಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: