Viral Wedding Invitation: ವೈರಲ್ ಆಯಿತು ಯೋಧ-ಡಾಕ್ಟರ್ ಜೋಡಿಯ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ 

ವಿವಾಹ ಆಮಂತ್ರಣ ಪತ್ರಿಕೆಗಳು ವಿಭಿನ್ನವಾಗಿದ್ದಾಗ, ಅಂತಹ ಆಮಂತ್ರಣ ಪತ್ರಿಕೆಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಈ ಹಿಂದೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮಾತ್ರೆ ಕವರ್ ಇತ್ಯಾದಿ ವಿಭಿನ್ನ ರೀತಿಯ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್​​ಗಳ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು, ಇಗ ಅದೇ ರೀತಿ ಯೋಧ-ಡಾಕ್ಟರ್ ಜೋಡಿಯ ಕ್ಯೂಟೆಸ್ಟ್ ವಿವಾಹ ಆಮಂತ್ರಣ ಪತ್ರಿಕೆಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. 

Viral Wedding Invitation: ವೈರಲ್ ಆಯಿತು ಯೋಧ-ಡಾಕ್ಟರ್ ಜೋಡಿಯ ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ 
Edited By:

Updated on: Jan 25, 2024 | 5:06 PM

ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳನ್ನು ವಿಭಿನ್ನ ಥೀಮ್​​​ಗಳಲ್ಲಿ ಅದ್ಧೂರಿಯಾಗಿ ಆಯೋಜಿಸುವಂತಹ ಟ್ರೆಂಡ್ ಇದೆ. ಜೊತೆಗೆ ವಿವಾಹ ಆಮಂತ್ರಣ ಪತ್ರಿಕೆಯನ್ನು ಬಹಳ ವಿಭಿನ್ನವಾಗಿ ಪ್ರಿಂಟ್ ಮಾಡಿಸುತ್ತಾರೆ. ಸಿರಿವಂತರು  ಅದ್ಧೂರಿಯಾಗಿರುವಂತಹ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದರೆ, ಇನ್ನೂ ಕೆಲವರಂತೂ ಪರಿಸರ ಪ್ರೇಮ, ಮತದಾನದ ಪ್ರಾಮುಖ್ಯತೆ, ಇತ್ಯಾದಿ ಜನಜಾಗೃತಿಯ ಅಂಶಗಳನ್ನು ಕೂಡಾ ಮುದ್ರಿಸಿ ವಿಶಿಷ್ಟ ಶೈಲಿಯಲ್ಲಿ ವಿವಾಹ ಆಮಂತ್ರಣ ಪತ್ರಿಕೆಗಳನ್ನು ಸಿದ್ಧಪಡಿಸುತ್ತಾರೆ. ಹೀಗೆ  ಪಾಸ್-ಪೋರ್ಟ್, ರೇಷನ್ ಕಾರ್ಡ್, ದಿನ ಪತ್ರಿಕೆ, ಮಾತ್ರೆಯ ಕವರ್, ಮೊಬೈಲ್ ಆಪ್ಲೀಕೇಶನ್ ಮುಂತಾದ  ಕೆಲವಾರು ವಿಶಿಷ್ಟ ಮದುವೆ ಆಮಂತ್ರಣ ಪತ್ರಿಕೆಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈಗ ಅದೇ ರೀತಿಯ ಬಹಳ ಸಿಂಪಲ್ ಹಾಗೇನೇ ವಿಶಿಷ್ಟವಾದ ವಿವಾಹ ಆಮಂತ್ರಣ ಪತ್ರಿಕೆಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೈನಿಕ-ಡಾಕ್ಟರ್ ಜೋಡಿಯ ಕ್ಯೂಟ್ ವೆಡ್ಡಿಂಗ್ ಇನ್ವಿಟೇಷನ್ ಕಾರ್ಡ್ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಈ ವಿಶಿಷ್ಟ ಆಮಂತ್ರಣ ಪತ್ರಿಕೆಯ ಫೋಟೋವನ್ನು ಮೊಹಮ್ಮದ್ ಶೋಬ್ (@Muhammad Shoaib)  ಎಂಬವರು ತಮ್ಮ  X ಖಾತೆಯಲ್ಲಿ ಹಂಚಿಕೊಂಡಿದ್ದು, ʼಕ್ಯೂಟೆಸ್ಟ್ ಸಿಂಪಲ್ ಶಾದಿ ಕಾರ್ಡ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಈ ವೈರಲ್ ಫೋಟೋದಲ್ಲಿ ಸೈನಿಕ-ಡಾಕ್ಟರ್ ಜೋಡಿಯ ವಿಶೇಷ ಆಮಂತ್ರಣ ಪತ್ರಿಕೆಯನ್ನು ಕಾಣಬಹುದು. ಮದುವೆ ಇನ್ವಿಟೇಷನ್  ಕಾರ್ಡ್ ಅನ್ನು ಬಹಳ ವಿಶಿಷ್ಟವಾಗಿ ಪ್ರಿಂಟ್ ಮಾಡಿಸಲಾಗಿದೆ. ಆಮಂತ್ರಣ ಪತ್ರಿಕೆಯ ಕವರ್ ಅಲ್ಲಿ ಒಂದು ಬದಿಯಲ್ಲಿ ಸೈನಿಕರ ಸಮವಸ್ತ್ರ ಮತ್ತು ಇನ್ನೊಂದು ಬದಿಯಲ್ಲಿ ಡಾಕ್ಟರ್ ಕೋಟ್ ಚಿತ್ರವನ್ನು ಪ್ರಿಂಟ್ ಮಾಡಿ, ಮಧ್ಯದಲ್ಲಿ ಗುಂಡಿಯನ್ನು ಕೂಡಾ ಅಂಟಿಸಲಾಗಿದೆ. ಬಹಳ ಸುಂದರವಾಗಿರುವ ಮದುವೆ ಇನ್ವಿಟೇಷನ್ ಕಾರ್ಡ್ ಕಂಡು ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಇದಪ್ಪಾ ಕ್ರಿಯೇಟಿವಿಟಿ ಅಂದ್ರೆ; ಮೊಟ್ಟೆ ಚಿಪ್ಪಿನಲ್ಲಿ ಕೋಳಿ ಮತ್ತು ಅದರ ಮರಿಗಳು

ವೈರಲ್​​ ವಿಡಿಯೋ ಇಲ್ಲಿದೆ: 

ಜನವರಿ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವ್ಹಾವ್ ಇದು ತುಂಬಾ ಕೂಲ್ ಆಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವಿವಾಹ ಆಮಂತ್ರಣ ಪತ್ರಿಕೆ ತುಂಬಾನೇ ಕ್ರೀಯೆಟಿವ್ ಆಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿವಾಹ ಆಮಂತ್ರಣ ಪತ್ರಿಕೆ ಸಿಂಪಲ್ ಆಗಿದ್ರೂ ಬಹಳನೇ ವಿಶಿಷ್ಟವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ