ಮನೆಯವರೊಂದಿನ ಊಟದ ಸಮಯ ಇಂದು, ಮೊಬೈಲ್ನೊಂದಿಗಿನ ಊಟದ ಸಮಯವಾಗಿ ಬದಲಾಗಿದೆ. ಆದ್ದರಿಂದ ಊಟದ ಸಮಯವನ್ನು ಮೊಬೈಲ್ ಬಳಸದೇ ನಿಮ್ಮ ಮನೆಯವರೊಂದಿಗೆ ಸುಂದರ ಸಮಯವನ್ನು ಕಳೆಯಲು ಏನು ಮಾಡಬೇಕು ಎಂಬ ವಿಡಿಯೋ ಇದೀಗಾ ಎಲ್ಲೆಡೆ ಭಾರೀ ವೈರಲ್ ಆಗಿದೆ. ಆದ್ದರಿಂದ ನಿಮ್ಮ ಮಕ್ಕಳಯ ಊಟದ ಸಮಯದಲ್ಲಿ ಮೊಬೈಲ್ನಲ್ಲೇ ಸಮಯ ಕಳೆಯುತ್ತಿದ್ದರೆ, ಈ ಸಮಸ್ಯೆಗೆ ಈ ಟ್ರಿಕ್ಸ್ ಫಾಲೋ ಮಾಡಿ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಈ ವಿಡಿಯೋಗೆ ಇದೀಗಾ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ನಿಮ್ಮ ಮಕ್ಕಳಿಗೆ ಈಗಿನಿಂದಲೇ ಊಟದ ಸಮಯದಲ್ಲಿ ಮೊಬೈಲ್ ಬಳಸದೇ ಊಟ ಮಾಡುವ ಅಭ್ಯಾಸವನ್ನು ಬೆಳೆಸಿ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ನೀವು ನಿಮ್ಮ ಮಕ್ಕಳಿಗೆ ಪ್ರಾರಂಭದಿಂದಲೇ ಒಳ್ಳೆಯ ಅಭ್ಯಾಸವನ್ನು ಕಲಿಸುವುದು ಮುಖ್ಯವಾಗಿದೆ. ಇದೀಗಾ ಇಂತದ್ದೇ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯೊಬ್ಬಳು ಊಟದ ಸಮಯದಲ್ಲಿ ಊಟ ಬೇಕಾದರೆ ನಿಮ್ಮ ಪೋನ್, ಲ್ಯಾಪ್ಟಾಪ್ ಟೇಬಲ್ ಮೇಲೆ ಇಡಿ,ಇಲ್ಲದಿದ್ದರೆ ಊಟ ಇಲ್ಲ. ಅದಕ್ಕಾಗಿ ಮಕ್ಕಳು ಮತ್ತು ಆಕೆಯ ಗಂಡ ಮೊಬೈಲ್ ಫೋನ್, ಲ್ಯಾಪ್ಟಾಪ್ಗಳನ್ನು ಟೇಬಲ್ ಮೇಲೆ ಇಟ್ಟು ಊಟ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಂಡುಬರುತ್ತಿದೆ. ಜೊತೆಗೆ ಊಟ ಎಂಬುದು ನಿಮ್ಮ ಕುಟುಂಬದೊಂದಿಗೆ ಕಳೆಯುವ ಸುಂದರ ಕ್ಷಣ ಎಂಬ ಸಂದೇಶವನ್ನು ಬರೆಯಲಾಗಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಸಾರುವ ಈ ವಿಡಿಯೋಗೆ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.
Dinner ka Naya rule ?? pic.twitter.com/Sssl3RL3gk
— Kungfu Pande ?? (Parody) (@pb3060) May 17, 2023
ಇದನ್ನೂ ಓದಿ:ಮದುವೆಯಾಗಲು ಬಯಸುತ್ತೇನೆ ಆದರೆ ಹುಡುಗಿಯ ಬಳಿ ಅವೆಲ್ಲ ಇರಬೇಕು ಎಂದ ವರ, ವಿಷಯ ತಿಳಿದರೆ ನೀವು ಬೆಚ್ಚಿ ಬೀಳುತ್ತೀರಿ!
ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಸಂಬಂಧಗಳ ಬೆಲೆಯು ಕಡಿಮೆಯಾಗುತ್ತಿದೆ. ಜೊತೆಗೆ ಒತ್ತಡ ಜೀವನದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುವವರು ತೀರಾ ಕಡಿಮೆ. ಆದ್ದರಿಂದ ಊಟದ ಸಮಯದಲ್ಲದರೂ ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:43 am, Thu, 18 May 23