ನ್ಯೂಯಾರ್ಕ್ ನಗರದ ಒಬ್ಬ ವ್ಯಕ್ತಿಯ ವಿರುದ್ಧ ಟಿಕ್ಟಾಕ್ನಲ್ಲಿ ಎಚ್ಚರಿಕೆಯ ಪ್ರವಾಹವನ್ನೇ ಹರಿಸಲಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನು ಅಂತೀರಾ? ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ಗೆ ಹೋಗಿದ್ದು! ‘ಕ್ಯಾಲೆಬ್’ ಎಂಬ ಅಡ್ಡ ಹೆಸರಿರುವ ವ್ಯಕ್ತಿ ನ್ಯೂಯಾರ್ಕ್ನ ಪೀಠೋಪಕರಣಗಳ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಆತನ ವಿರುದ್ಧ ಹಲವು ಯುವತಿಯರು ಆರೋಪ ಮಾಡಿದ್ದಾರೆ. ಡೇಟಿಂಗ್ಗೆ ಅವರ ಜತೆ ತೆರಳುತ್ತಿದ್ದ ವ್ಯಕ್ತಿ, ಕೆಲ ಕಾಲದ ನಂತರ ನಾಪತ್ತೆಯಾಗುತ್ತಿದ್ದ. ಇದಕ್ಕೆ ಇಂಟರ್ನೆಟ್ ಪರಿಭಾಷೆಯಲ್ಲಿ ‘ಘೋಸ್ಟೆಡ್’ ಎನ್ನುತ್ತಾರೆ. ಅಂದರೆ ಹೇಳದೆ ಕೇಳದೆ ಎಲ್ಲೆಡೆಯಿಂದ ಸಂಬಂಧ ಕಡಿದುಕೊಂಡು (ಬ್ಲಾಕ್ ಮಾಡಿಕೊಂಡು ಎನ್ನಬಹುದು) ನಾಪತ್ತೆಯಾಗುವುದು. ದಿ ಇಂಡಿಪೆಂಡೆಂಡ್ ವರದಿಯ ಪ್ರಕಾರ, ಕ್ಯಾಲೆಬ್ನ ಕಹಾನಿ ಹೊರಬೀಳಲು ಪ್ರಾರಂಭವಾಗಿರುವುದು ಕಳೆದ ಗುರುವಾರದಿಂದ. ಮೊದಲಿಗೆ ಟಿಕ್ಟಾಕ್ ಬಳಕೆದಾರರಾದ ಮಿಮಿ ಶೌ ಎನ್ನುವವರು ಕ್ಯಾಲೆಬ್ ಎಂಬ ವ್ಯಕ್ತಿಯಿಂದ ‘ಘೋಸ್ಟೆಡ್’ (Ghosted) ಆಗಿದ್ದೆ ಎನ್ನುವುದನ್ನು ಹಂಚಿಕೊಂಡಿದ್ದರು. ಅದಕ್ಕೆ ಕಾಮೆಂಟ್ ಸೆಕ್ಷನ್ನನಲ್ಲಿ ‘‘ನೀವು ‘ವೆಸ್ಟ್ ಎಲ್ಮ್ ಕ್ಯಾಲೆಬ್’ (West Elm Caleb) ಕುರಿತು ಮಾತನಾಡುತ್ತಿದ್ದೀರಾ?’’ ಎಂದು ಹಲವು ಕಾಮೆಂಟ್ಗಳು ಬಂದಿದ್ದವು. ಇಲ್ಲಿಂದ ಆತನ ನಿಜ ಬಣ್ಣ ಬಯಲಾಗಲು ಆರಂಭವಾಗಿದೆ.
ಪ್ರಕರಣದಲ್ಲೊಂದು ಟ್ವಿಸ್ಟ್:
ಅಸಲಿಗೆ ಮೊದಲಿಗೆ ಕ್ಯಾಲೆಬ್ ಎಂಬಾತನ ಕುರಿತು ಮಾಹಿತಿ ಹಂಚಿಕೊಂಡಿದ್ದ ಮಿಮಿ ಶೌ ಹೇಳಿದ್ದು, ‘ವೆಸ್ಟ್ ಎಲ್ಮ್ ಕ್ಯಾಲೆಬ್’ ಕುರಿತಾಗಿರಲಿಲ್ಲ. ಅದು ಕೇವಲ ಕಾಕತಾಳೀಯವಾಗಿತ್ತಷ್ಟೆ. ಆದರೆ ಅವರು ಹಂಚಿಕೊಂಡ ಪೋಸ್ಟ್ನಲ್ಲಿ ಎಲ್ಲರೂ ಕ್ಯಾಲೆಬ್ ಕುರಿತು ಮಾತನಾಡಿದ್ದರು. ನಂತರ ಯುವತಿಯರಿಗೆ ಕ್ಯಾಲೆಬ್ ಎಂಬಾತ ಏಕಕಾಲದಲ್ಲಿ ಹಲವು ಮಹಿಳೆಯರೊಂದಿಗೆ ಡೇಟ್ ಮಾಡಿದ್ದು, ನಂತರ ಹೇಳದೆ ಕೇಳದೆ ನಾಪತ್ತೆಯಾಗಿದ್ದು, ಎಲ್ಲವೂ ಡೇಟಿಂಗ್ ಆಪ್ ಒಂದರ ಮೂಲಕ ಗೊತ್ತಾಗಿದೆ. ಆದ್ದರಿಂದ ಆತನ ವಿರುದ್ಧ ಎಚ್ಚರಿಕೆಯಿಂದಿರುವಂತೆ ಯುವತಿಯರು ಪೋಸ್ಟ್ ಮಾಡಿದ್ದಾರೆ.
ಮತ್ತೋರ್ವ ಟಿಕ್ಟಾಕ್ ಬಳಕೆದಾರರಾದ ಕೇಟ್ ಗ್ಲೇವನ್ ಮಿಮಿ ಶೌ ಅವರ ವಿಡಿಯೋಕ್ಕೆ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಅವರು ‘ಟಿಕ್ಟಾಕ್ ಇಲ್ಲದೇ ಇದ್ದರೆ ನಾನು ಡೇಟ್ಗೆ ಹೋಗಿದ್ದ ವ್ಯಕ್ತಿ ಕ್ಯಾಲೆಬ್ ಎಂದು ತಿಳಿಯುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೇ ಆತನ ಕುರಿತು ಹಲವರು ಎಚ್ಚರಿಕೆ ನೀಡಿದ್ದನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ಕ್ಯಾಲೆಬ್ ಶನಿವಾರ ಬೆಳಗ್ಗೆ ಅವರೊಂದಿಗೆ ಡೇಟ್ಗೆ ಹೋಗುವ ಸ್ವಲ್ಪ ಹೊತ್ತಿನ ಮೊದಲು ಮತ್ತೋರ್ವರೊಂದಿಗೆ ಡೇಟ್ ಹೋಗಿದ್ದನ್ನು ಗಮನಿಸಿದ್ದನ್ನೂ ಹೇಳಿಕೊಂಡಿದ್ದಾರೆ. ಕೆಲ್ಲಿ ಎಂಬುವವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಕ್ಯಾಲೆಬ್ ಡೇಟಿಂಗ್ ಆಪ್ ಒಂದರಲ್ಲಿ ಭೇಟಿಯಾಗಿದ್ದ. ಆರು ವಾರ ಜತೆಯಲ್ಲಿ ಸುತ್ತಾಡಿದ ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾದ ಎಂದಿದ್ದಾರೆ.
I don’t think I’ve seen anything unite as many 20-something women in nyc like the exposing of West Elm Caleb… the chokehold he has on my TikTok timeline right now is wiiiiild pic.twitter.com/A92k44wmpY
— Jenna Amatulli (@ohheyjenna) January 19, 2022
In the event you’ve somehow avoided West Elm Caleb TikTok, this is a good starting point: pic.twitter.com/SUiE22nA2w
— Jenna Amatulli (@ohheyjenna) January 19, 2022
ಟ್ವಿಟರ್ನಲ್ಲಿ ವೆಸ್ಟ್ ಎಲ್ಮ್ ಕ್ಯಾಲೆಬ್ ಹ್ಯಾಶ್ಟ್ಯಾಗ್ ಪ್ರಸ್ತುತ ಜನಪ್ರಿಯವಾಗಿದ್ದು, ಹಲವು ಮಹಿಳೆಯರು ಕ್ಯಾಲೆಬ್ ಕುರಿತು ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ಇದುವರೆಗೆ ಒಟ್ಟು ಆ ಹ್ಯಾಶ್ಟ್ಯಾಗ್ನಲ್ಲಿ ಅಪ್ಲೋಡ್ ಆದ ವಿಡಿಯೋಗಳನ್ನು 5.4 ಮಿಲಿಯನ್ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಇಷ್ಟಲ್ಲಾ ಸುದ್ದಿಯಾಗಿದ್ದರೂ ಕೂಡ ವೆಸ್ಟ್ ಎಲ್ಮ್ ಕ್ಯಾಲೆಬ್ ಈ ಕುರಿತು ತುಟಿಕ್ ಪಿಟಿಕ್ ಎಂದಿಲ್ಲ. ಹಲವು ಮಾಧ್ಯಮಗಳು ಅವರ ಭೇಟಿಗೆ ಪ್ರಯತ್ನ ಪಟ್ಟರೂ ಆತ ಕೈಗೆ ಸಿಕ್ಕೇ ಇಲ್ಲ ಎಂದಿವೆ ವರದಿಗಳು.
ಇದನ್ನೂ ಓದಿ:
Cyber crime: ಲಿಂಕ್ ಕಳುಹಿಸಿ ವೈದ್ಯನಿಗೆ ಲಕ್ಷ ರೂಪಾಯಿ ವಂಚನೆ: ಸೈಬರ್ ಠಾಣೆಯಲ್ಲಿ ದಾಖಲಾಯ್ತು ದೂರು
Army Dogs: ಸೇನೆಯ ಶ್ವಾನಗಳು ಏನೆಲ್ಲಾ ಕೆಲಸ ಮಾಡುತ್ತವೆ? ಅವುಗಳ ವಿಶೇಷತೆ ಏನು? ಇಲ್ಲಿದೆ ಕುತೂಹಲಕಾರಿ ಮಾಹಿತಿ