ಆಟಿಕೆಗಾಡಿ ತಗೊಂಡು ಹೋದಂಗೆ ಹೋಗ್ತಿಲ್ವಾ ಈ ಡ್ರೈವರ್?

| Updated By: ಶ್ರೀದೇವಿ ಕಳಸದ

Updated on: Nov 25, 2022 | 6:09 PM

Parking Skill : ಕೆಲವರು ಈತನ ಪಾರ್ಕಿಂಗ್​ ಕೌಶಲ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ದಟ್ಟಣೆ ಇರುವಲ್ಲಿ ಹೀಗೆ ಪಾರ್ಕಿಂಗ್​ ಮಾಡಿ ನೋಡೋಣ ಎನ್ನುತ್ತಿದ್ದಾರೆ. ಇನ್ನೂ ಕೆಲವರು ದ್ವಂದ್ವಾರ್ಥ ಕಲ್ಪಿಸಿಕೊಂಡು ನಗುತ್ತಿದ್ದಾರೆ.

ಆಟಿಕೆಗಾಡಿ ತಗೊಂಡು ಹೋದಂಗೆ ಹೋಗ್ತಿಲ್ವಾ ಈ ಡ್ರೈವರ್?
ನಿರಾಯಾಸವಾಗಿ ಗಾಡಿಯ ಸ್ಟಿಯರಿಂಗ್ ಹ್ಯಾಂಡಲ್​ ಮಾಡುತ್ತಿರುವ ಡ್ರೈವರ್
Follow us on

Viral Video : ಕಾರಿನಲ್ಲಿ ಕುಳಿತು ಪಾರ್ಕಿಂಗ್​ ಮಾಡುವ ಹೊತ್ತಿಗೆ ಎಷ್ಟೋ ಜನರಿಗೆ ಬೆವರಿಳಿದು ಹೋಗಿರುತ್ತದೆ. ಆದರೆ ಇಲ್ಲಿ ಇಷ್ಟು ದೊಡ್ಡ ಭಾರೀಗಾತ್ರದ ವಾಹನವನ್ನು ಈ ಮನುಷ್ಯ ಎಷ್ಟೊಂದು ನಿರಾಯಾಸವಾಗಿ ಹಿಂಬರಿಕೆಯಲ್ಲಿ ನಿಭಾಯಿಸಿದ್ದಾನೆ ನೋಡಿ. ಇವನ ಪಾರ್ಕಿಂಗ್​ ಕೌಶಲವನ್ನು ನೋಡಿದ ಜನ ಕ್ಯಾ ಬಾತ್​ ಹೈ ಎನ್ನುತ್ತಿದ್ದಾರೆ. ಎಂಥಾ ಮನುಷ್ಯ ಇವನೂ ಎಂದು ಅಚ್ಚರಿಪಡುತ್ತಿದ್ದಾರೆ. ಕಣ್ಣುಮುಚ್ಚಿಯೂ ಡ್ರೈವಿಂಗ್​ ಮಾಡಬಲ್ಲ ಬಿಡಿ ಎಂದು ಕೊಂಡಾಡುತ್ತಿದ್ದಾರೆ.

 

ಎರಡು ದಿನಗಳ ಹಿಂದೆ ಈ ವಿಡಿಯೋ ಅನ್ನು ಟ್ವೀಟ್ ಮಾಡಲಾಗಿದೆ. 4.5 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಿಂದ ತಾವು ಪ್ರಭಾವಿತಗೊಂಡ ಬಗೆಯನ್ನು ಚರ್ಚಿಸಿದ್ದಾರೆ. ಪ್ಯಾರಲಲ್ ಪಾರ್ಕಿಂಗ್​ ಬಗ್ಗೆ ಸಾಕಷ್ಟು ಜನ ವಿಮರ್ಶಿಸಿದ್ದಾರೆ.

ಖಾಲಿ ಪಾರ್ಕಿಂಗ್​ನಲ್ಲಿ ಇದು ಸುಲಭವೆನ್ನಿಸಿದೆ. ದಟ್ಟಣೆ ಇರುವ ಜಾಗದಲ್ಲಿ ಇದು ಮಾಡಲು ಸಾಧ್ಯವಿತ್ತೆ? ಎಂದು ಒಬ್ಬರು ಪ್ರಶ್ನಿಸಿದ್ದಾರೆ. ನೀವೆಲ್ಲ ಎಷ್ಟು ಮೂರ್ಖತನದಿಂದ ನೋಡುತ್ತಿದ್ದೀರಿ ಈ ವಿಡಿಯೋ, ಅವನು ಜಾಹೀರಾತಿಗಾಗಿ ಈ ಟ್ರಿಕ್ ಮಾಡುತ್ತಿರುವುದು ಎಂದಿದ್ದಾರೆ ಮತ್ತೊಬ್ಬರು. ಹಲವಾರು ಜನ ಪಾರ್ಕಿಂಗ್​ ಅನ್ನು ದ್ವಂದ್ವಾರ್ಥದಲ್ಲಿ ಚರ್ಚಿಸಿದ್ದಾರೆ ಕೂಡ. ಜನಸಾಗರವೆಂದ ಮೇಲೆ ನೂರಾರು ದೃಷ್ಟಿಗಳು ಒಂದೇ ಥರ ಇರಲು ಸಾಧ್ಯವೇ?

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ