AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ

Baby Hedgehogs : ಪುಟ್ಟ ಪುಟ್ಟ ಮುಳ್ಳುಹೆಗ್ಗಣಗಳನ್ನು ನೋಡಿದ ಒಬ್ಬರು ಇವು ಎರೇಸರ್​ನಂತಿವೆಯಲ್ಲ, ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ಮರಿಗಳನ್ನು ನೋಡಿದಾಗ ನಿಮಗೇನು ಅನ್ನಿಸುತ್ತದೆ? ತಿಳಿಸಿ.

ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡಿದ್ದೀರಾ? ಮಿಲಿಯನ್​ಗಟ್ಟಲೆ ಜನರನ್ನು ಸೆಳೆದಿದೆ ಈ ವಿಡಿಯೋ
ತನ್ನ ಮರಿಗಳೊಂದಿಗೆ ತಾಯಿಮುಳ್ಳುಹೆಗ್ಗಣ
TV9 Web
| Edited By: ಶ್ರೀದೇವಿ ಕಳಸದ|

Updated on:Nov 26, 2022 | 10:38 AM

Share

Viral Video : ಇಲಿಮರಿಯಾದರೇನು ಕೋಳಿಮರಿಯಾದರೇನು ಹಂದಿಮರಿಯಾದರೇನು ಮುಳ್ಳಹಂದಿಮರಿಯಾದರೇನು ಮರಿಗಳು ಯಾವತ್ತೂ ಮುದ್ದುಮುದ್ದು. ಆಗಷ್ಟೇ ಹುಟ್ಟಿದ ಮರಿಗಳಂತೂ ಮೃದುಮೃದು. ನೀವು ಈ ಮುಳ್ಳುಹೆಗ್ಗಣದ ಮರಿಗಳನ್ನು ನೋಡಿದ್ದೀರಾ? ನೋಡಿಲ್ಲವಾದರೆ ಈ ವಿಡಿಯೋದಲ್ಲಿ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಜನ ಈ ಅಮ್ಮ ಮತ್ತು ಮರಿಗಳನ್ನು ಬೆರಗಿನಿಂದ ನೋಡುತ್ತಿದ್ದಾರೆ.

ಇವುಗಳನ್ನು ನೋಡಿದ ಹಲವರು, ಮೊದಲಸಲ ಮುಳ್ಳುಹೆಗ್ಗಣಗಳ ಮರಿಗಳನ್ನು ನೋಡುತ್ತಿರುವುದು, ಹೀಗಿರುತ್ತವೆ ಎಂಬ ಅಂದಾಜೇ ಇರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ತಿಳಿಗುಲಾಬಿ ಬಣ್ಣದ ಮರಿಗಳು ಔಡಲಕಾಯಿಗಳನ್ನು ಹೋಲುವ ವಿನ್ಯಾಸದಲ್ಲಿವೆಯಲ್ಲ? ಈತನಕ ಈ ವಿಡಿಯೋ ಅನ್ನು 4.7 ಮಿಲಿಯನ್​ ಜನರು ನೋಡಿದ್ದಾರೆ. 1,93,400 ಜನರು ಇಷ್ಟಪಟ್ಟಿದ್ದಾರೆ. 17,800 ಜನರು ರೀಟ್ವೀಟ್​ ಮಾಡಿದ್ದಾರೆ. 1,700 ಜನರು ಪ್ರತಿಕ್ರಿಯಿಸಿದ್ದಾರೆ.

ಓಹ್​ ದೇವರೇ ಇವು ಪುಟ್ಟ ಎರೇಸರ್​ನಂತೆ ಕಂಡವು ನನಗೆ ಎಂದಿದ್ದಾರೆ ಒಬ್ಬರು. ಎಂಥ ಮುದ್ದಾಗಿವೆ ಅದರ ಎಳೇಮುಳ್ಳುಗಳು, ಆ ತಿಳಿಗುಲಾಬಿ, ಮಕ್ಕಳ ಕೈಗೆ ಸಿಕ್ಕರೆ ಆಟವಾಡಲು ಶುರುಮಾಡುತ್ತಾರಷ್ಟೇ ಎಂದಿದ್ದಾರೆ ಇನ್ನೂ ಒಬ್ಬರು. ನಾನು ಮೊದಲ ಸಲ ಈ ಮುಳ್ಳುಹೆಗ್ಗಣಗಳನ್ನು ನೋಡುತ್ತಿದ್ದೇನೆ ಮುಟ್ಟಬೇಕು ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು.

ನೀವು ಈ ಮೊದಲು ನೋಡಿದ್ದೀರಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:38 am, Sat, 26 November 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್