
ಬದುಕೇ (life) ಹಾಗೆ, ಮೂರು ಹೊತ್ತಿನ ತುತ್ತಿಗಾಗಿ ಒಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸಿದರೆ, ಇನ್ನು ಕೆಲವರು ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡು ಅದರಲ್ಲಿ ಬರುವ ಹಣವನ್ನು ಜೀವನಕ್ಕಾಗಿ ನೆಚ್ಚಿಕೊಳ್ಳುತ್ತಾರೆ. ಆದರೆ ಈ ಯುವಕ (young boy) ತನ್ನ ಬುದ್ದಿವಂತಿಕೆಯನ್ನು ಬಳಸಿಕೊಂಡಿದ್ದಾನೆ. ಗೂಡಂಗಡಿ ಇಟ್ಟುಕೊಳ್ಳದೇ, ನಡೆದುಕೊಂಡು ಹೋಗಿಯೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡುವ ಮೂಲಕ ತನ್ನ ಅಲ್ಪ ದುಡಿಮೆಯಲ್ಲಿ ಖುಷಿ ಕಾಣುತ್ತಿದ್ದಾನೆ. ಈ ಯುವಕನ ವಿಡಿಯೋ ವೈರಲ್ ಆಗುತ್ತಿದ್ದಂತೆ ಸರಳವಾದ ಉಪಾಯವನ್ನು ಮೆಚ್ಚಿಕೊಂಡಿದ್ದಾರೆ.
Sourceofkhaddo ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನು ಲೈಫ್ ಜಾಕೆಟ್ ಮಾದರಿಯ ಜಾಕೆಟ್ ಧರಿಸಿದ್ದಾನೆ. ಈ ಜಾಕೆಟ್‌ನಲ್ಲಿ ಕಾಫಿ ಮಾಡಲು ಬೇಕಾದ ಕಾಫಿ ಪುಡಿ, ಸಕ್ಕರೆ, ಹಾಲು ಸೇರಿದಂತೆ ಪೇಪರ್ ಗ್ಲಾಸ್‌ನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. ಓಡಾಡಿಕೊಂಡೇ ಕಾಫಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಕೋವಿಡ್ ತಂದ ಸಂಕಷ್ಟ; ರ‍್ಯಾಪಿಡೋ ಚಾಲಕನಾಗಿ ಬದುಕು ಕಟ್ಟಿಕೊಂಡ ಉದ್ಯಮಿ
ಈ ವಿಡಿಯೋ 6.4 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕೆಲಸ ಇಲ್ಲವೆಂದು ಕೂರುವ ಬದಲು, ಈ ಸ್ವಂತ ದುಡಿಮೆ ಬದುಕಿಗೆ ನೆರವಾಗುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಕಾಫಿ ತಯಾರಿಸುವ ರೀತಿ ನೋಡಿದ್ರೆ ಕಾಫಿ ಕುಡಿಯಬೇಕೆನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನಿಜಕ್ಕೂ ಒಳ್ಳೆಯ ಐಡಿಯಾ, ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ