ನಿದ್ದೆಯಲ್ಲಿ ಆನ್​ಲೈನ್​ ಶಾಪಿಂಗ್​ ಮಾಡಿ 3 ಲಕ್ಷ ರೂ. ಸಾಲದಲ್ಲಿ ಸಿಲುಕಿದ ಮಹಿಳೆ

ಮಹಿಳೆಯೊಬ್ಬರು ನಿದ್ರೆಯಲ್ಲಿರುವಾಗ ಆನ್​ಲೈನ್​ ಶಾಪಿಂಗ್​ ಮಾಡಿ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಆಕೆ ಒಂದು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದು ವೈದ್ಯರಿಂದ ತಿಳಿದುಬಂದಿದೆ.

ನಿದ್ದೆಯಲ್ಲಿ ಆನ್​ಲೈನ್​ ಶಾಪಿಂಗ್​ ಮಾಡಿ 3 ಲಕ್ಷ ರೂ. ಸಾಲದಲ್ಲಿ ಸಿಲುಕಿದ ಮಹಿಳೆ
Follow us
|

Updated on: May 30, 2024 | 10:05 AM

ಶಾಪಿಂಗ್​ ಎಂದರೆ ಹೆಣ್ಣುಮಕ್ಕಳು ನಿದ್ದೆಗಣ್ಣಲ್ಲೂ ಎದ್ದು ಬರ್ತಾರೆ ಎಂಬ ಮಾತು ಸುಮ್ಮನೆ ಹೇಳಿಲ್ಲ, ಮಹಿಳೆಯೊಬ್ಬರು ನಿದ್ದೆಯಲ್ಲೇ ಆನ್​ಲೈನ್ ಶಾಪಿಂಗ್ ಮಾಡಿ ಬರೋಬ್ಬರಿ 3 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.

ಬ್ರಿಟನ್​ನಲ್ಲಿ ಈ ಘಟನೆ ನಡೆದಿದೆ, ಆಕೆ ನಿದ್ದೆಗಣ್ಣಲ್ಲಿ ಅಲ್ಲ ಬದಲಾಗಿ ನಿದ್ರೆಯಲ್ಲೇ ಕಳೆದುಕೊಂಡಿದ್ದಾರೆ, ನಿದ್ದೆಗಣ್ಣು ಎಂದರೆ ಅರೆಪ್ರಜ್ಞಾವಸ್ಥೆ ಇರುತ್ತದೆ, ಆದರೆ ಈಕೆಗೆ ಪ್ರಜ್ಞೆ ಇಲ್ಲದಿದ್ದರೂ ಹಣ ಕಳೆದುಕೊಂಡಿದ್ದಾಳೆ.

ಮಹಿಳೆಯೊಬ್ಬಳು ರಾತ್ರಿ ಮಲಗಿದ್ದಾಗ 3 ಲಕ್ಷ ರೂ. ಮೌಲ್ಯದ ಆನ್​ಲೈನ್ ಶಾಪಿಂಗ್ ಮಾಡಿದ್ದಾರೆ. ಬೆಳಗ್ಗೆ ಈ ವಿಚಾರ ತಿಳಿದ ಆಕೆ ತಕ್ಷಣವೇ ವೈದ್ಯರ ಬಳಿ ಹೋಗಿದ್ದಾಳೆ. ಆದರೆ ಆಕೆಗಿದ್ದಿದ್ದು ಪ್ಯಾರಾಸೋಮ್ನಿಯಾ ಎಂಬ ಅಪರೂಪದ ಕಾಯಿಲೆ. ಇಬೇನಿಂದ ಬಾಸ್ಕೆಟ್​ ಬಾಲ್​ ಬೇಕಾದ ವಸ್ತುಗಳು, ಸಿಹಿ ತಿಂಡಿಗಳು, ಪುಸ್ತಕಗಳು, ಮನೆಗೆ ಬೇಕಾದ ಸಾಕಷ್ಟು ವಸ್ತುಗಳನ್ನು ತನಗರಿವಿಲ್ಲದಂತೆಯೇ ಖರೀದಿಸಿದ್ದಳು.

ಆದರೆ ಅದನ್ನು ಹಿಂದಿರುಗಿಸುವಂತಿರಲಿಲ್ಲ ಯಾಕೆಂದರೆ ಮಕ್ಕಳು ಅದನ್ನು ತೆಗೆದುಕೊಂಡು ಆಗಲೇ ಆಟ ಶುರು ಮಾಡಿದ್ದರು. ಅವೆಲ್ಲವೂ ಮಕ್ಕಳ ಮಹುದಿನಗಳ ಬೇಡಿಕೆಯೂ ಆಗಿತ್ತು.

ಮತ್ತಷ್ಟು ಓದಿ: Video: ಅಯ್ಯೋ ಗರ್ಲ್‌ಫ್ರೆಂಡ್‌ ಅಲ್ಲ ಕ್ರಶ್‌ ಅಷ್ಟೆ; ತನ್ನ ಅಜ್ಜಿಗೆ ಕ್ರಶ್‌ ಪದದ ಅರ್ಥದ ಬಗ್ಗೆ ಮುದ್ದಾಗಿ ವಿವರಿಸಿದ ಬಾಲಕ

ಇದಿಷ್ಟಕ್ಕೇ ಮುಗಿದಿಲ್ಲ, ಮಹಿಳೆ ಕೆಲ್ಲಿ ಒಂದು ದಿನ ಸ್ಪ್ಯಾಮ್​ ಸಂದೇಶವನ್ನು ಸ್ವೀಕರಿಸಿದ್ದರು, ಈ ಫಾರ್ಮ್​ ಭರ್ತಿ ಮಾಡಿ ಕಳುಹಿಸಿದರೆ ಸರ್ಕಾರ ನಿಮಗೆ 40 ಸಾವಿರ ರೂ. ಕೊಡುತ್ತೆ ಎಂದು ಅದರಲ್ಲಿ ಬರೆದಿತ್ತು, ಆಕೆ ಬೇರೇನೂ ಯೋಚನೆ ಮಾಡದೆ ಅದನ್ನು ಫಿಲ್ ಮಾಡಿ ಕಳುಹಿಸಿದ ಕೂಡಲೇ ಸೈಬರ್ ಕ್ರಿಮಿನಲ್​ಗಳು ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿದ್ದರು. ಇದೆಲ್ಲವೂ ಆಕೆ ಮಲಗಿರುವ ಸಮಯದಲ್ಲೇ ಆಗಿತ್ತು.

ತಕ್ಷಣವೇ ಸೈಬರ್​ ಕ್ರೈಂ ಅಧಿಕಾರಿಗಳನ್ನು ಭೇಟಿಯಾಗಿ ಅಂತೂ ಆಕೆಯ ಹಣ ಮರಳಿ ಬಂದಿತ್ತು. ಆಕೆಗಿರುವುದು ಪ್ಯಾರಾಸೋಮ್ನಿಯಾ ಕಾಯಿಲೆ, ಆಕೆಯ ಮಲಗಿರುವಾಗಲೂ ಮೆದುಳು ಭಾಗಶಃ ಎಚ್ಚರದಲ್ಲೇ ಇರುತ್ತದೆ. ಆಕೆಗೆ ಹೆರಿಗೆಯಾದ ಸ್ವಲ್ಪ ಸಮಯದ ಬಳಿಕ ಆಕೆ ನಿದ್ದೆಗಣ್ಣಲ್ಲಿ ಓಡಾಡಲು ಆರಂಭಿಸಿದ್ದಳು ಇದು ಸಾಮಾನ್ಯವೆಂದುಕೊಂಡರು ಆದರೆ ದಿನದಿಂದ ದಿನಕ್ಕೆ ಕಾಯಿಲೆ ಹೆಚ್ಚಾಗಿ ಈಗ ಈ ಹಂತಕ್ಕೆ ಬಂದು ತಲುಪಿದೆ. ಮಹಿಳೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ