Video: ಅಯ್ಯೋ ಗರ್ಲ್‌ಫ್ರೆಂಡ್‌ ಅಲ್ಲ ಕ್ರಶ್‌ ಅಷ್ಟೆ; ತನ್ನ ಅಜ್ಜಿಗೆ ಕ್ರಶ್‌ ಪದದ ಅರ್ಥದ ಬಗ್ಗೆ ಮುದ್ದಾಗಿ ವಿವರಿಸಿದ ಬಾಲಕ

ಪುಟ್ಟ ಮಕ್ಕಳ ಜೊತೆ ಮಾತನಾಡುತ್ತಾ, ಅವರನ್ನು ಕಾಲೆಯುತ್ತಾ ತರ್ಲೆ ಮಾಡುವುದೇ ಒಂದು ಚೆಂದ. ಅದೇ ರೀತಿ ಇಲ್ಲೊಂದು ಕುಟುಂಬಸ್ಥರು ಪುಟ್ಟ ಬಾಲಕನ್ನು ಕಾಲೆಯುತ್ತಾ ನಿನ್ನ ಕ್ರಶ್‌ ಯಾರು, ಕ್ರಶ್‌ ಎಂದರೆ ಏನು ಎಂದು ತಮಾಷೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಸಂದರ್ಭದಲ್ಲಿ 8 ವರ್ಷ ವಯಸ್ಸಿನ ಬಾಲಕ ಮುದ್ದುಮುದ್ದಾಗಿ ಕ್ರಶ್‌ ಪದದ ಅರ್ಥವನ್ನು ವಿವರಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Video: ಅಯ್ಯೋ ಗರ್ಲ್‌ಫ್ರೆಂಡ್‌ ಅಲ್ಲ ಕ್ರಶ್‌ ಅಷ್ಟೆ; ತನ್ನ ಅಜ್ಜಿಗೆ ಕ್ರಶ್‌ ಪದದ ಅರ್ಥದ ಬಗ್ಗೆ ಮುದ್ದಾಗಿ ವಿವರಿಸಿದ ಬಾಲಕ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 29, 2024 | 5:31 PM

ಪುಟ್ಟ ಮಕ್ಕಳು ಏನು ಮಾಡಿದರೂ ಅದನ್ನು ನೋಡಲು ಚೆಂದ… ಅದರಲ್ಲೂ ಅವರ ತರ್ಲೆ ಮಾತುಗಳು, ತುಂಟಾಟಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 8 ವರ್ಷ ವಯಸ್ಸಿನ ಬಾಲಕ ಆತನ ಅಜ್ಜಿಗೆ ಕ್ರಶ್ ಪದದ ಅರ್ಥವನ್ನು ವಿವರಿಸುವ ಶೈಲಿ ಹಾಗೂ ಆತನ ಮುದ್ದು ಮಾತುಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಈ ಕುರಿತ ವಿಡಿಯೋವೊಂದನ್ನು ನೀಲಮ್ ಜೈನ್ (@go.food. yourself) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ತನ್ನ ಅಜ್ಜಿಗೆ ಕ್ರಶ್ ಪದದ ಅರ್ಥವನ್ನು ವಿವರಿಸುವ ಮುದ್ದಾದ ದೃಶ್ಯವನ್ನು ಕಾಣಬಹುದು. ಬಾಲಕನ ಅಮ್ಮ ಕ್ರಶ್ ಅಂದ್ರೆ ಫ್ರೆಂಡ್ ಅಲ್ವಾ ಎಂದು ಕೇಳುತ್ತಾರೆ. ಇಲ್ಲ ಇಲ್ಲ ನೀವು ಗೂಗಲ್ ಮಾಡಿ ಆಗ ಉತ್ತರ ಸಿಗುತ್ತೆ ಎಂದು ಬಾಲಕ ಹೇಳುತ್ತಾನೆ. ನೀನೇ ಹೇಳು ಆ ಪದದ ಅರ್ಥ ಎಂದು ಬಾಲಕನ ಬಳಿ ಮತ್ತೊಮ್ಮೆ ಕೇಳಿದಾಗ ಆತ ಕ್ರಶ್ ಅಂದ್ರೆ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ತರಾನೇ ಎಂದು ಹೇಳುತ್ತಾನೆ. ಆಗ ಮನೆಯವರೆಲ್ಲರೂ ಜೋರಾಗಿ ನಕ್ಕಾಗ ಇಲ್ಲ ಇಲ್ಲ ಅದೂ ಆ ರೀತಿನೂ ಅಲ್ಲ, ನನಗೆ ಗರ್ಲ್ ಫ್ರೆಂಡ್ ಇಲ್ಲ ಕ್ರಶ್ ಮಾತ್ರ ಇರೋದು ಎಂದು ಹೇಳುತ್ತಾನೆ.

ಇದನ್ನೂ ಓದಿ: ಚರಂಡಿ ಹೊಂಡಕ್ಕೆ ಬಿದ್ದ ನವಿಲು, ಜೀವದ ಹಂಗು ತೊರೆದು ರಾಷ್ಟ್ರ ಪಕ್ಷಿಯನ್ನು ರಕ್ಷಿಸಿದ ರಜನಿ ಶೆಟ್ಟಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಾಲಕನ ಮಾತನ್ನು ಕೇಳಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ