ಪ್ರೀತಿ ಯಾವಾಗ ಎಲ್ಲಿ ಯಾರ ಮೇಲೆ ಹೇಗೆ ಹುಟ್ಟುವುದು ಯಾರಿಗೂ ತಿಳಿಯುವುದಿಲ್ಲ. ಪ್ರೀತಿ ಕುರುಡು ಎಂಬ ಮಾತಿನಂತೆ ಬ್ರೆಜಿಲ್ ಮೂಲದ ಮಹಿಳೆಯೊಬ್ಬಳು ತನ್ನ ಫೋನ್ ಕದ್ದ ಕಳ್ಳನ ಪ್ರೀತಿಯ ಬಲೆಗೆ ಬಿದ್ದಿದ್ದಾಳೆ. ಪೋನ್ ಜೊತೆಗೆ ಮನಸ್ಸು ಕದ್ದ ಈ ವಿಚಿತ್ರ ಲವ್ಸ್ಟೋರಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿಯ ವಿಚಾರವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗಾಗಲೇ ಈ ವಿಡಿಯೋ 38ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದ್ದು, ಜೊತೆಗೆ ಸಾಕಷ್ಟು ಹಾಸ್ಯಸ್ಪದ ಕಾಮೆಂಟ್ಗಳನ್ನು ಕಾಣಬಹುದು.
ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ದುರದೃಷ್ಟವಶಾತ್ ನನ್ನ ಪೋನ್ ಯಾರೋ ಕಸಿದುಕೊಂಡು ಹೋಗಿದ್ದರು. ಮತ್ತೊಂದೆಡೆ, ಕಳ್ಳನು ತಾನು ಕದ್ದಿರುವ ಫೋನ್‌ನಲ್ಲಿ ಅವಳ ಫೋಟೋವನ್ನು ನೋಡಿದ ನಂತರ ಮಹಿಳೆಯ ಬಗ್ಗೆ ತನ್ನ ಭಾವನೆಗಳು ಬದಲಾಗಿದೆ. ಜೊತೆಗೆ ಪೋನ್ ಕದ್ದಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟೆ ಎಂದು ತಮ್ಮ ಡೇಟೀಂಗ್ ವೇಳೆ ತಮ್ಮ ಪ್ರೀತಿ ಹೇಗೆ ಹುಟ್ಟಿಕೊಂಡಿತು ಎಂದು ತಿಳಿಸಿದ್ದಾರೆ.
Calma Milton , nossa sociedade é muito sadia mentalmente ainda ? pic.twitter.com/PkaMQkLK54
— Bender B. Rodríguez ?? (@BenderEyes) July 21, 2023
ಇದನ್ನೂ ಓದಿ: ಉತ್ತರ ಪ್ರದೇಶ; ಪೆಟ್ರೋಲ್ನಿಂದ ತನ್ನ ಬೈಕ್ ತೊಳೆದುಕೊಂಡ ಭೂಪನೀಗ ಜೈಲಿನಲ್ಲಿ
ಹೀಗಾಗಿ ಕದ್ದಿರುವ ಪೋನ್ ಅನ್ನು ಆಕೆಗೆ ಹಿಂದಿರುಗಿಸಿ ಕೊಡುವ ವೇಳೆ ತನ್ನ ಪ್ರೀತಿಯನ್ನು ಪ್ರಸ್ತಾಪಿಸಿದ್ದಾನೆ. ಇದೀಗಾ ಈ ಜೋಡಿ ಹಕ್ಕಿಗಳು 2ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವುದಾಗಿ ಬ್ರೆಜಿಲ್ನ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:50 am, Tue, 1 August 23