
ಹಳ್ಳಿ ಬದುಕು (Village life) ನಿಜಕ್ಕೂ ಸುಂದರ. ನೆಮ್ಮದಿಯ ನಿದ್ರೆಗಾಗಿ ಒಂದು ಪುಟ್ಟ ಮನೆ. ಬದುಕಿಗಾಗಿ ಕೃಷಿ ಕಾಯಕ. ಬೀಜ ಬಿತ್ತಿ ಪೈರು ಬರುತ್ತಿದ್ದಂತೆ, ಕಟಾವು ಕೆಲಸ ಶುರುವಾಗುತ್ತದೆ. ಕಟಾವು ಬಳಿಕ ತೆನೆಯಿಂದ ಭತ್ತವನ್ನು ಬೇರ್ಪಡಿಸುವವರೆಗೂ ಹಳ್ಳಿ ಜನರು ಕೃಷಿ ಕಾಯಕದಲ್ಲಿ ಬ್ಯುಸಿಯಾಗಿರುತ್ತಾರೆ. ಒಬ್ಬರಿಗೊಬ್ಬರು ನೆರವಾಗುತ್ತಾ ಹಳ್ಳಿ ಮಂದಿ ಜೊತೆ ಸೇರಿ ಕೃಷಿ (agriculture) ಕಾಯಕದಲ್ಲಿ ತೊಡಗುವ ರೀತಿಯನ್ನು ನೋಡಿದ್ರೆ ಖುಷಿಯಾಗುತ್ತದೆ. ಇದೀಗ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಹಳ್ಳಿ ಜನರು ಈ ಕೆಲಸವನ್ನೂ ಎಷ್ಟು ಆನಂದಿಸುತ್ತಾರೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಕೃಷಿ ಕೆಲಸದ ನಡುವೆ ಮಹಿಳೆ, ಕೆಲಸದ ನಡುವೆ ತನ್ನದೇ ದಾಟಿಯಲ್ಲಿ ಸ್ಟೆಪ್ ಹಾಕುತ್ತ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ranjith_s_shetty ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಳ್ಳಿ ಬದುಕಿನ ಚಿತ್ರಣವನ್ನು ತೆರೆದಿಡಲಾಗಿದೆ. ಮನೆಯಂಗಳದಲ್ಲಿ ಹಳ್ಳಿ ಜನರು ಕೃಷಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ,ಮನೆಯಂಗಳದಲ್ಲಿ ಪೈರಿನಿಂದ ಭತ್ತವನ್ನು ಬೆರ್ಪಡಿಸುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಉಳಿದ ಮಹಿಳೆಯರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಒಬ್ಬ ಮಹಿಳೆಯೂ ಡ್ಯಾನ್ಸ್ ಮಾಡುತ್ತಾ ಈ ಹಳ್ಳಿ ಬದುಕನ್ನು ಆಸ್ವಾದಿಸುವುದನ್ನು ನೋಡಬಹುದು.
ಇದನ್ನೂ ಓದಿ:ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ
ಈ ವಿಡಿಯೋ ಮೂವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಜವಾಗಿಯೂ ಈ ಹಾಡಿಗೆ ಕಲೆ ಬಂತು ಎಂದಿದ್ದಾರೆ. ಇನ್ನೊಬ್ಬರು, ನವಲತ್ತು ವರ್ಷದ ಹಿಂದಿನ ನೆನಪು ಆಯ್ತು. ನೃತ್ಯ ಮಾಡುವ ಅಕ್ಕನನ್ನು ನೋಡಿ ಖುಷಿ ಆಯ್ತು. ಜೈ ತುಳುನಾಡ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನಮ್ಮ ತುಳುನಾಡ್ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Wed, 19 November 25