Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಾಣವನ್ನು ಲೆಕ್ಕಿಸದೆ ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ; ಹುಚ್ಚು ಸಾಹಸವೆಂದ ನೆಟ್ಟಿಗರು

ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸುಮಾರು 94,000 ವೀಕ್ಷಣೆ ಪಡೆದಿದ್ದು, ಸುಮಾರು 3,300 ಲೈಕ್‌ಗಳೊಂದಿಗೆ ವೈರಲ್ ಆಗುತ್ತಿದೆ.

ಪ್ರಾಣವನ್ನು ಲೆಕ್ಕಿಸದೆ ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ; ಹುಚ್ಚು ಸಾಹಸವೆಂದ ನೆಟ್ಟಿಗರು
ರೈಲ್ವೇ ಹಳಿಗಳ ಮಧ್ಯೆ ಮಲಗಿದ ಮಹಿಳೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 14, 2022 | 8:38 PM

ಹರಿಯಾಣ: ನಾವು ನೀವು ರೈಲ್ವೆ ಹಳಿಯನ್ನು ದಾಟುತ್ತಿರುವಾಗ ಒಂದು ವೇಳೆ ಅದೇ ಮಾರ್ಗದಲ್ಲಿ ರೈಲು (Train) ಬಂದರೇ ನಾವೇನು ಮಾಡುತ್ತೇವೆ? ಸುರಕ್ಷಿತವಾಗಿ ಬದಿಗೆ ಓಡಿ ಹೋಗಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬಳು ಮಹಿಳೆ ರೈಲು ಬರುತ್ತಿರುವುದು ಗೊತ್ತಿದ್ದರೂ ರೈಲಿನ ಕೆಳಗೆ ಮಲಗಿರುವಂತಹ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ಇದು ಹುಚ್ಚು ಸಾಹಸವೆನ್ನುತ್ತಿದ್ದಾರೆ. ಇದು ಹರಿಯಾಣದ ರೋಹ್ಟಕ್‌ ವಿಡಿಯೋ ಎನ್ನಲಾಗುತ್ತಿದ್ದು, ಏಪ್ರಿಲ್ 12 ರಂದು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದು ಸುಮಾರು 94,000 ವೀಕ್ಷಣೆ ಪಡೆದಿದ್ದು, ಸುಮಾರು 3,300 ಲೈಕ್‌ಗಳೊಂದಿಗೆ ವೈರಲ್ ಆಗುತ್ತಿದೆ.

ಮಹಿಳೆಯೊಂದಿಗೆ ಮಾತನಾಡುತ್ತಿರುವುದನ್ನು ಆಲಿಸಿದ ಪುರುಷನೊಬ್ಬ ನಿಲ್ದಾಣದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿರುವಂತೆ ಕಾಣುತ್ತದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಗೂಡ್ಸ್ ರೈಲು ವೇಗದಲ್ಲಿ ಹಾದುಹೋಗುವುದನ್ನು ನಾವು ನೋಡುತ್ತೇವೆ. ರೈಲು ಹೋದ ನಂತರ, ಕೆಂಪು ಕುರ್ತಾ ಮತ್ತು ಮುಖಕ್ಕೆ ಸ್ಕಾರ್ಫ್ ಧರಿಸಿರುವ ಮಹಿಳೆಯನ್ನು ನಾವು ನೋಡುತ್ತೇವೆ. ರೈಲು ತನ್ನ ಮೇಲೆ ಹಾದು ಹೋಗುತ್ತಿರುವುದನ್ನು ಕಂಡು ಯಾವುದೇ ಭಯವಿಲ್ಲದೆ ಮಹಿಳೆ ರೈಲ್ವೆ ಹಳಿಗಳ ಮೇಲೆ ಮಲಗಿದ್ದಾಳೆ. ರೈಲು ಹೊರಟ ತಕ್ಷಣ, ಮಹಿಳೆ ಹಳಿಗಳ ಮೇಲೆ ಎದ್ದು ಕುಳಿತುಕೊಳ್ಳುತ್ತಾಳೆ. ಸಾಮಾನ್ಯವಾಗಿ ಏನೂ ಆಗಿಲ್ಲ ಎಂಬಂತೆ ಯಾರೊಂದಿಗೊ ಫೋನ್​ನಲ್ಲಿ ಮಾತನಾಡುತ್ತ ಟ್ರ್ಯಾಕ್‌ಗಳಿಂದ ನಡೆದು ಪ್ಲಾಟ್‌ಫಾರ್ಮ್‌ಗೆ ಬರುತ್ತಾಳೆ.

ಫೋನ್​ನಲ್ಲಿ ಹರಟೆ ಹೊಡೆಯುವುದು ಹೆಚ್ಚು ಮುಖ್ಯ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವೀಟ್ ಮಾಡಲಾಗಿದೆ. ಇದು ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಅವರಲ್ಲಿ ಹಲವರು ವಿಡಿಯೋವನ್ನು ಉಲ್ಲಾಸಕರವಾಗಿ ನೋಡಿದರೆ, ಮತ್ತೆ ಕೆಲ ಟ್ವಿಟ್ಟರ್ ಬಳಕೆದಾರರು ಮಹಿಳೆ ಪ್ರತಿದಿನ ಹೀಗೆಯೇ ವರ್ತಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

Viral Video: ವಧುವಿನ ವೇಷದಲ್ಲಿ ಕಚಾ ಬಾದಮ್ ಹಾಡು ಹಾಡಿದ ಇಂಟರ್ನೆಟ್ ಸೆನ್ಸೇಷನ್ ರಾಣು ಮಂಡಲ್

ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ