ನೀರಿನೊಳಗಿನ ಸುರಂಗ ಮಾರ್ಗ: ಅದರಲ್ಲಿ ಮಹಿಳೆಯ ಫ್ರೀ ಡೈವಿಂಗ್, ಇದು ಭಯಂಕರ ಎಂದ ನೆಟ್ಟಿಗರು

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 18, 2023 | 1:15 PM

ಫ್ರೀ ಡೈವಿಂಗ್ ಸಾಹಸಕ್ಕೆ ಹೆಸರುವಾಸಿಯಾಗಿರುವ ವಿದೇಶಿ ಮಹಿಳೆಯೊಬ್ಬರು ತಾನು ನೀರಿನೊಳಗಿನ ಕಿರಿದಾದ ಗುಹೆಯಲ್ಲಿ ಫ್ರೀ ಡೈವಿಂಗ್ ಮಾಡುವ  ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋವನ್ನು ನೋಡಿದ ಅನೇಕರು ಈಕೆಯ ಸಾಹಸಕ್ಕೆ ಬೆರಗಾಗಿದ್ದಾರೆ. 

ನೀರಿನೊಳಗಿನ ಸುರಂಗ ಮಾರ್ಗ: ಅದರಲ್ಲಿ ಮಹಿಳೆಯ ಫ್ರೀ ಡೈವಿಂಗ್, ಇದು ಭಯಂಕರ ಎಂದ ನೆಟ್ಟಿಗರು
ವೈರಲ್​​ ವಿಡಿಯೋ
Follow us on

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಗೆಯ  ಡೈವಿಂಗ್ ವೀಡಿಯೋಗಳು ಸಾಕಷ್ಟು ವೈರಲ್ ಆಗುತ್ತಿವೆ.  ಸ್ಕೂಬಾ ಡೈವಿಂಗ್, ಕೇವ್ ಡೈವಿಂಗ್, ಫ್ರೀ ಡೈವಿಂಗ್ ಇತ್ಯಾದಿ ಹಲವು ಬಗೆಯ ಡೈವಿಂಗ್ ಸಾಹಸಗಳಿವೆ. ಇನ್ನೂ ಈ ಫ್ರೀ ಡೈವಿಂಗ್ ವಿಚಾರಕ್ಕೆ ಬರುವುದಾದರೆ ಇದಲ್ಲಿ ಆಕ್ಸಿಜನ್ ಸಹಾಯವಿಲ್ಲದೆ ನೀರಿನೊಳಗೆ ಡೈವ್ ಮಾಡಬೇಕಾಗುತ್ತದೆ. ಇಂತಹ  ಕುತೂಹಲಕಾರಿ ಫ್ರೀ ಡೈವಿಂಗ್ ವೀಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತವೆ. ಅದೇ ರೀತಿ ಇತ್ತೀಚಿಗೆ ಫ್ರೀ ಡೈವಿಂಗ್ ಸಾಹಸಕ್ಕೆ ಹೆಸರುವಾಸಿಯಾಗಿರುವ ಕೆಂಡ್ರ ನಿಕೋಲ್ ಎಂಬ ಹೆಸರಿನ  ಮಹಿಳೆಯೊಬ್ಬರು, ನೀರಿನೊಳಗೆ  ಅತೀ ಕಿರಿದಾದ ಸುರಂಗದಲ್ಲಿ ಫ್ರೀ ಡೈವ್ ಮಾಡುವ ಮೂಲಕ ನೋಡುಗರನ್ನು ಅಚ್ಚರಿಗೊಳಿಸಿದ್ದಾರೆ.

ವೈರಲ್ ಆಗಿರುವ ವೀಡಿಯೋದಲ್ಲಿ ನಿಕೋಲ್  ಈಜುಡುಗೆಯನ್ನು ಧರಿಸಿ ಕೈಯಲ್ಲಿ ಸೆಲ್ಫಿಸ್ಟಿಕ್ ಹಿಡಿದು ವೀಡಿಯೋ ಮಾಡುತ್ತಾ ನೀರಿನ ಆಳದಲ್ಲಿ ಈಜಾಡುತ್ತಾ, ಒಂದು ಕಿರಿದಾದ ಸುರಂಗದ ಒಳಗೆ ಡೈವ್ ಮಾಡುತ್ತಾ ಪ್ರವೇಶಿಸುವುದನ್ನು ಕಾಣಬಹುದು. ಹಾಗೂ  ಆ ಕಿರಿದಾದ ಸುರಂಗದ ಒಳಗೆ ನಿಧಾನವಾಗಿ ಡೈವ್ ಮಾಡುತ್ತಾ  ಹೊರ ಬರುತ್ತಾಳೆ.  ಒಂದು ಹಂತದಲ್ಲಿ ಆಕೆ ಆ ಸುರಂಗದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆಯೇ ಎಂದು ಭಾಸವಾಗುತ್ತದೆ. ಈಕೆಯ ಸಾಹಸವನ್ನು ಕಂಡ ಅನೇಕರು ನಮಗೆ ಒಮ್ಮೆಗೆ ಉಸಿರುಗಟ್ಟಿದಂತಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮನೆ ಮುಂದೆ ಬರ್ತಾಳೆ ಸ್ಟೈಲಿಶ್ ಲುಕ್​​ನ ಝೊಮೆಟೋ ಡೆಲಿವರಿ ಗರ್ಲ್​​, ಹೌದ ಇದು ನಿಜಾನಾ?

ವೈರಲ್​​ ವಿಡಿಯೋ ಇಲ್ಲಿದೆ:

ನಿಕೋಲಾ  ಫ್ರೀ  ಡೈವಿಂಗ್ ಅನುಭವವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು,  ಈ ವಿಡಿಯೋ 429K ವೀಕ್ಷಣೆಗಳನ್ನು ಹಾಗೂ 10.2K ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಹಾಗೂ ಈಕೆಯ ಸಾಹಸಕ್ಕೆ ಹಲವಾರು ಕಮೆಂಟ್ಸ್​​ಗಳು ಬಂದಿದೆ. ಒಬ್ಬ ಬಳಕೆದಾದರರು ಆಕೆ ಆ ಸುರಂಗದ ಒಳಗೆ ಸಿಕ್ಕಿಹಾಕಿಕೊಳ್ಳುತ್ತಾಳೆಯೇ ಎಂದು ನಾನು ಭಯಭೀತನಾಗಿದ್ದೆ”  ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು  ಇದನ್ನು ಕಂಡು ನನಗೆ ತುಂಬಾ ಆತಂಕದ ಭಾವನೆ ಉಂಟಾಯಿತು” ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಯಾವುದೇ ಭಯವಿಲ್ಲದೆ ಆತ್ಮವಿಶ್ವಾಸದಿಂದ ಇಂತಹ ಸಾಹಸವನ್ನು ಮಾಡುವ ನಿಮಗೆ ನನ್ನನೊಂದು ಸಲಾಂ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ