Viral Video: ಮನೆ ಮುಂದೆ ಬರ್ತಾಳೆ ಸ್ಟೈಲಿಶ್ ಲುಕ್ನ ಝೊಮೆಟೋ ಡೆಲಿವರಿ ಗರ್ಲ್, ಹೌದ ಇದು ನಿಜಾನಾ?
ಇತ್ತೀಚಿಗಷ್ಟೇ ಝೊಮಾಟೊ ಡೆಲಿವರಿ ಬಾಯ್ ಡ್ರೆಸ್ ಕೋಡ್ ನಲ್ಲಿ ಯುವತಿಯೊಬ್ಬಳು ಸ್ಟೈಲಿಶ್ ಲುಕ್ ನಲ್ಲಿ ಹೆಲ್ಮೆಟ್ ರಹಿತ ಬೈಕ್ ಚಾಲನೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದಕ್ಕಾಗಿ ನೆಟ್ಟಿಗರು ಗರಂ ಆಗಿದ್ದಾರೆ ಅಲ್ಲದೆ ಫುಡ್ ಡೆಲಿವರಿ ಮಾಡುವವರ ಸುರಕ್ಷತೆಯ ಬಗ್ಗೆ ಝೊಮಟೊ ಕಾಳಜಿ ವಹಿಸುವುದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸದ್ಯ ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ವೀಡಿಯೋಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಝೊಮೆಟೊ ಸಿ.ಇ.ಒ ದೀಪಿಂದರ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುವ ಸಲುವಾಗಿ ಜನರು ಚಿತ್ರವಿಚಿತ್ರ ವೀಡಿಯೋಗಳನ್ನು ಹರಿಬಿಡುತ್ತಾರೆ. ಅದರಲ್ಲಿ ಕೆಲವು ವಿಡಿಯೋಗಳು ಜನರ ಮನಸ್ಸು ಗೆದ್ದರೆ, ಇನ್ನೂ ಕೆಲವು ವೀಡಿಯೋಗಳು ಜನರ ಕೆಂಗಣ್ಣಿಗೆ ಗುರಿಯಾಗುತ್ತದೆ. ಇತ್ತೀಚಿಗೆ ಇಂತಹದ್ದೇ ಘಟನೆಯೊಂದು ನಡೆದಿದ್ದು, ಇಂದೋರ್ ನಗರದ ಬೀದಿಗಳಲ್ಲಿ ಸುಂದರ ಯುವತಿಯೊಬ್ಬಳು ಝೊಮಾಟೊ ಡೆಲಿವರಿ ಗರ್ಲ್ ವೇಷದಲ್ಲಿ ಯಮಹಾ ಆರ್ 15 ಬೈಕ್ ನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆಕೆ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡಿದ್ದಕ್ಕೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇದು ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹಲವರು ಹೇಳಿದ್ದಾರೆ.
ಅಕ್ಟೋಬರ್ 16 ರಂದು ಈ ವಿಡಿಯೋವನ್ನು ರಾಜೀವ್ ಮೆಹ್ತಾ (@rajivmehta19) ಎಂಬವವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ಇಂದೋರ್ ನಲ್ಲಿ ಝೊಮಾಟೊ ಮಾರ್ಕೆಟಿಂಗ್ ಮುಖ್ಯಸ್ಥರು ಪ್ರಚಾರಕ್ಕಾಗಿ ಮಹಿಳಾ ಮಾಡೆಲ್ ಅನ್ನು ನೇವಿಸಿಕೊಂಡಿದ್ದಾರೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ನೋಡಿದ ಹಲವರು ನಿಜವಾಗಿಯೂ ಈಕೆ ಝೊಮೆಟೊ ಕಂಪೆನಿ ಮಾಡೆಲ್ ಎಂದು ಭಾವಿಸಿದ್ದಾರೆ. ಹಾಗೂ ಅನೇಕರು ಫುಡ್ ಡೆಲಿವರಿ ಮಾಡುವವರ ಸುರಕ್ಷತೆಯ ಬಗ್ಗೆ ಝೊಮಟೊ ಕಾಳಜಿ ವಹಿಸುವುದಿಲ್ಲ, ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಲು ಮೊಡೆಲ್ ಅನ್ನು ಒತ್ತಯಿಸಲಾಗಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಸ್ ಸೀಟ್ನಲ್ಲಿದ್ದ ದೂಳು ಕಂಡು ನೆಟ್ಟಿಗರು ದಿಗ್ಭ್ರಾಂತ
ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ಬಗ್ಗೆ ಇದೀಗ ಝೊಮಾಟೊ ಕಂಪೆನಿಯ ಸಿ.ಇ.ಒ ದೀಪಿಂದರ್ ಗೋಯಲ್ ಸ್ಪಷ್ಟನೆ ನೀಡಿದ್ದು, ಈ ವೀಡಿಯೋಗೂ ನಮಗೂ ಯಾವುದೇ ಸಂಬಂಧವಿಲ್ಲ, ಮುಖ್ಯವಾಗಿ ನಾವು ಹೆಲ್ಮೆಟ್ ರಹಿತ ಬೈಕ್ ಚಾಲನೆಯನ್ನು ಅನುಮೋದಿಸುವುದಿಲ್ಲ. ಅಷ್ಟೇ ಅಲ್ಲ ನಾವು ಇಂದೋರ್ನಲ್ಲಿ ಯಾವುದೇ ಮಾರ್ಕೆಟಿಂಗ್ ಹೆಡ್ನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
Hey! We had absolutely nothing to do with this.
We don’t endorse helmet-less biking. Also, we don’t have a “Indore Marketing Head”.
This seems to be someone just “free-riding” on our brand. Having said that, there’s nothing wrong with women delivering food – we have hundreds… https://t.co/xxNPU7vU8L
— Deepinder Goyal (@deepigoyal) October 17, 2023
ಮಹಿಳೆಯರು ಫುಡ್ ಡೆಲಿವರಿ ಕಾರ್ಯದಲ್ಲಿ ತೊಡಗಿದರೆ ತಪ್ಪೇನಿಲ್ಲ. ತಮ್ಮ ಜೀವನೋಪಾಯಕ್ಕಾಗಿ ಪ್ರತಿದಿನ ಫುಡ್ ಡೆಲಿವರಿ ಕಾರ್ಯದಲ್ಲಿ ತೊಡಗಿರುವ ನೂರಾರು ಮಹಿಳೆಯರು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಅವರ ಕಾರ್ಯಕ್ಕೆ ನಮಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋದ ಬಗ್ಗೆ ಸ್ಪಷ್ಟನೆ ನೀಡಿದ್ದಕ್ಕಾಗಿ ಹಲವರು ದೀಪಿಂದರ್ ಗೋಯಲ್ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ