Balancing : ಸಣ್ಣ ಸ್ಟೂಲ್, ಅದರ ಮೇಲೆ ಡಬ್ಬು ಹಾಕಿದ ಎರಡು ಸ್ಟೀಲ್ ಲೋಟಗಳು, ಅದರ ಮೇಲೆ ಎರಡು ಪ್ಲೇಟುಗಳು, ಅದರ ಮೇಲೆ ನೇರ ಇಟ್ಟ ಮತ್ತೆರಡು ಲೋಟಗಳು, ಅವುಗಳ ಮೇಲೆ ಪಾದವನ್ನೂರಿ ನಿಂತ ಯುವಕ, ಅವನ ತಲೆಯ ಮೇಲೆ ಒಂದು ಗಾಜಿನ ಬಾಟಲಿ (ಅಥವಾ ಎರಡು ಗಾಜಿನ ಲೋಟಗಳು?), ಅದರ ಮೇಲೆ ಒಂದು ಸಿಲಿಂಡರ್, ಸಿಲಿಂಡರ್ (Cylinder) ಮೇಲೆ ಮತ್ತೊಂದು ಸಿಲಿಂಡರ್! ಭೌತಶಾಸ್ತ್ರಜ್ಞರೆಲ್ಲಾ ತಲೆಕೆಡಿಸಿಕೊಂಡಿರಲು ಸಾಕು ಈ ವಿಡಿಯೋ ನೋಡಿ. ಕೆಲ ನೆಟ್ಟಿಗರು, ನಿನ್ನ ಸಾಹಸ ಮೆಚ್ಚತಕ್ಕದ್ದು, ಆದರೆ ಇದರಿಂದ ನೀನು ಶಾಶ್ವತವಾಗಿ ಅಂಗಾಂಗಗಳನ್ನು ಊನ ಮಾಡಿಕೊಳ್ಳಬಹುದು, ಅಥವಾ ಜೀವಕ್ಕೇ ಅಪಾಯ ತಂದುಕೊಳ್ಳಬಹುದು. ಬೇಡ ಇದೆಲ್ಲ ಬುದ್ಧಿವಾದ ಹೇಳುತ್ತಿದ್ದಾರೆ. ನೋಡಿ ಈ ಕೆಳಗಿನ ವಿಡಿಯೋ.
5 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಮೆಚ್ಚಿದ್ದು 10 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಪ್ರತಿಕ್ರಿಯಸಿದ್ದಾರೆ. ಹೀಗೆ ನಮ್ಮನ್ನೆಲ್ಲಾ ಹುಚ್ಚರನ್ನಾಗಿಸಬೇಡ, ಇದು ಎಡಿಟೆಡ್ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ಮನೆಯಲ್ಲಿ ಹೇಳಿಬಂದಿಲ್ಲವೆ? ಈ ಯುವಜನರೆಗೆ ಹುಚ್ಚು ಹಿಡಿದಿದೆ. ಸೋಶಿಯಲ್ ಮೀಡಿಯಾ ಐಡೆಂಟಿಟಿಗೋಸ್ಕರ ಇಂಥ ಅಪಾಯಕ್ಕೆ ಒಡ್ಡಿಕೊಳ್ಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ ಈ ಯುವಕನ ಇನ್ಸ್ಟಾಗ್ರಾಂ ಪ್ರೊಫೈಲ್ ಹೊಕ್ಕು ನೋಡಿದಾಗ…
ರಾಜಸ್ಥಾನ (Rajasthan) ಮೂಲದ ಈ ಸಾಹಸಿ ಯುವಕನ ಹೆಸರು ಪ್ರವೀಣ ಪಜಾಪತ್ (Praveen Prajapat). ರಿಯಾಲಿಟಿ ಷೋಗಳಲ್ಲಿಯೂ ಇವನು ತನ್ನ ಸಾಹಸ ಪ್ರದರ್ಶನವನ್ನು ಮಾಡಿದ್ದಾನೆ. ಇವನ ಸಾಹಸಪ್ರಾವೀಣ್ಯಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ತಲೆದೂಗಿದ್ದಾರೆ. ತಲೆಯ ಮೇಲೆ ಮಡಿಕೆಗಳನ್ನು, ಸಿಲಿಂಡರ್ಗಳನ್ನು ಪೇರಿಸಿಟ್ಟುಕೊಂಡು ಈತ ಪ್ರದರ್ಶಿಸುವ ಸಾಹಸವಿದ್ಯೆ ಯಾರನ್ನೂ ಒಂದು ಕ್ಷಣ ನಿಬ್ಬೆರಗಾಗಿಸುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ