
ಮದುವೆ (marriage) ಎಂದರೆ ಸಂಭ್ರಮ. ಮದ್ವೆ ಶಾಸ್ತ್ರಗಳನ್ನು ಮನೆ ಮಂದಿ ಸಂಭ್ರಮಿಸುವುದನ್ನು ನೀವು ನೋಡಿರುತ್ತೀರಿ. ಈಗಂತೂ ಅರಶಿನ ಶಾಸ್ತ್ರಕ್ಕೆ ಮನೆ ಮಂದಿಯೆಲ್ಲರೂ ಎಲ್ಲೋ ಕಲರ್ ಥೀಮ್‌ನಲ್ಲೇ ರೆಡಿ ಆಗ್ತಾರೆ. ಆದರೆ ಇಲ್ಲೊಬ್ಬ ಯುವಕನು ಸ್ನೇಹಿತನ ಹಳದಿ ಶಾಸ್ತ್ರಕ್ಕೆ ಸ್ವಲ್ಪ ಡಿಫರೆಂಟ್ ಆಗಿಯೇ ಬಂದಿದ್ದಾನೆ. ಹಳದಿ ಬಣ್ಣದ ಉಡುಗೆ ಇಲ್ಲವೆಂದು ಬ್ಲಿಂಕಿಟ್ ಸಮವಸ್ತ್ರ ಧರಿಸಿ ಎಂಟ್ರಿ ಕೊಟ್ಟಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಧ್ರುವ್ ಜೈನ್ (Dhruva Jain) ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಹಲ್ದಿಗೆ ಹಳದಿ ಬಣ್ಣವನ್ನು ಧರಿಸಿ ಎಂದು ಅವರು ಹೇಳಿದರು ಎಂಬುವುದರೊಂದಿಗೆ ಈ ವಿಡಿಯೋ ಪ್ರಾರಂಭವಾಗುತ್ತದೆ. ಕೆಲವು ಕ್ಷಣಗಳ ನಂತರ, ಜೈನ್ ಹಳದಿ ಬ್ಲಿಂಕಿಟ್ ಫುಡ್ ಡೆಲಿವರಿ ಏಜೆಂಟ್‌ನ ಟಿ ಶರ್ಟ್ ಧರಿಸಿ ಸ್ಥಳಕ್ಕೆ ಹೋಗುತ್ತಿರುವುದನ್ನು ನೋಡಬಹುದು. ಇತರರು ಸಾಂಪ್ರದಾಯಿಕ ಹಳದಿ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದು. ಈ ಯುವಕ ವಧು ಮತ್ತು ವಧುವಿನ ಬಳಿಗೆ ನಡೆದುಕೊಂಡು ಹೋಗುತ್ತಿದ್ದಂತೆ, ಇಬ್ಬರೂ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದು, ಆ ಬಳಿಕ ಈತನ ಉಡುಗೆ ಕಂಡು ಜೋರಾಗಿ ನಗುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:ಪದೇ ಪದೇ ಬಿಸಿನೀರು ಕೇಳಿದ್ದಕ್ಕೆ ವರನನ್ನು ಹುಚ್ಚ ಎಂದ ವಧು: ರಣರಂಗವಾಯಿತು ಮದುವೆ ಮಂಟಪ
ಈ ವಿಡಿಯೋ ಐದು ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಸ್ಟ್ ಹಳದಿ ಡ್ರೆಸ್ಸಿಂಗ್ ಅವಾರ್ಡ್ ನಿಮಗೆ ಸಲ್ಲುತ್ತದೆ ಎಂದಿದ್ದಾರೆ. ಇನ್ನೊಬ್ಬರು, ಬ್ಲಿಂಕಿಟ್ ಈ ಯುವಕನನ್ನು ಮಾರ್ಕೆಟಿಂಗ್‌ಗೆ ನೇಮಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬರು, ದುಡ್ಡು ಉಳಿತು, ಕಾರ್ಯಕ್ರಮಕ್ಕೆ ಮಿಸ್ ಮಾಡಿದ್ದಂಗೆ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ