ಬಾಗ್ಪತ್: ಹೋಳಿ ಹಬ್ಬ (Holi Festival) ವನ್ನು ನಾವು ಬಣ್ಣಗಳ ಹಬ್ಬವೆಂದು ಕರೆಯುತ್ತೇವೆ. ಜೊತೆಗೆ ರುಚಿಕರವಾದ ತಿನಿಸು ಮತ್ತು ತಮಾಷೆಯ ಕುಚೇಷ್ಟೆಗಳಿಗೆ ಹೆಸರು ವಾಸಿಯಾಗಿದೆ. ಆದರೆ ಕೆಲವೊಮ್ಮೆ ಈ ಕುಚೇಷ್ಟೆಗಳು ತಪ್ಪು ತಿರುವು ಪಡೆದುಕೊಳ್ಳುತ್ತವೆ ಮತ್ತು ಪರಿಸ್ಥಿತಿ ತಮಾಷೆ ಮಾಡುವ ಬದಲು ಕೆಲವು ಕಠೋರ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಅಂತಹದೇ ಒಂದು ವಿಡಿಯೋ ಈಗ ವೈರಲ್ ಆಗಿದೆ. ಹೌದು ಯುಪಿಯ ಬಾಗ್‌ಪತ್‌ನಲ್ಲಿ ಸ್ಥಳೀಯರೋರ್ವರು ಎಸೆದ ನೀರಿನ ಬಲೂನ್ ಇಂದ ವೇಗವಾಗಿ ಬಂದ ಆಟೋ-ರಿಕ್ಷಾ ಅಪಘಾತಕ್ಕೀಡಾದಂತಹ ಘಟನೆ ಸಂಭವಿಸಿದೆ. ದೃಶ್ಯಗಳ ಪ್ರಕಾರ, ಆಟೋ-ರಿಕ್ಷಾವು ಅತೀ ವೇಗದಲ್ಲಿ ಚಲಿಸುತ್ತಿದ್ದು, ಮತ್ತು ಹಲವಾರು ಪ್ರಯಾಣಿಕರು ಅದರಲ್ಲಿ ಕುಳಿತುಕೊಂಡಿದ್ದಾರೆ. ವ್ಯಕ್ತಿಯೋರ್ವ ಆಟೋ ರಿಕ್ಷಾ ಮೇಲೆ ಬಲೂನ್ ಎಸೆದಾಗ ಅದು ನಿಯಂತ್ರಣ ತಪ್ಪಿ ತಕ್ಷಣ ಪಲ್ಟಿ ಹೊಡೆಯುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
#WATCH उत्तर प्रदेश: एक वायरल वीडियो में बागपत में तेज़ रफ़्तार से आ रहा ऑटो पानी से भरा गुब्बारा लगने से पलटता दिख रहा है। pic.twitter.com/GtGT5lQhxv
— ANI_HindiNews (@AHindinews) March 20, 2022
ಹೋಳಿ ಹಬ್ಬದ ದಿನ ತಮಾಷೆ ಮಾಡಲು ಹೋಗಿ ಪರಿಸ್ಥಿತಿ ಗಂಭೀರವಾಗಿ ತಿರುಗಿದೆ. ಬಲೂನ್ ಎಸೆದವರು ಸ್ಥಳದಿಂದ ಪರಾರಿಯಾಗುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಬಾಗ್ಪತ್ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಮನಿಸಿದ್ದಾರೆ. ಅಪಘಾತದಲ್ಲಿ ರಿಕ್ಷಾ ಚಾಲಕ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಾಗ್ಪತ್ ವೃತ್ತ ಅಧಿಕಾರಿ ಅನುಜ್ ಮಿಶ್ರಾ ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ:
ಉಕ್ರೇನ್ ಸೈನಿಕನಿಗೆ ಹಣ ಸಹಾಯ ಮಾಡಿದ ರಾಮ್ ಚರಣ್; ಆ ವ್ಯಕ್ತಿಯ ಜತೆ ಇದೆ ವಿಶೇಷ ನಂಟು