ಬುಡೌನ್: ಉತ್ತರ ಪ್ರದೇಶದ ಬುಡೌನ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ವಿಚಿತ್ರ ಕಾರಣವೊಂದಕ್ಕೆ ಮಗುವಿಗೆ ಪ್ರವೇಶ ನಿರಾಕರಿಸಲಾಗಿದೆ. ಆಕೆಯ ಆಧಾರ್ ಕಾರ್ಡ್‌ನಲ್ಲಿ (Aadhaar Card) ಆಕೆಯ ಮಧು ಕಾ ಪಂಚ್ವಾ ಬಚ್ಚಾ ಅಥವಾ ಮಧುವಿನ ಐದನೇ ಮಗು (Baby Five of Madhu) ಎಂದು ಬರೆಯಲಾಗಿದೆ. ಇದೇ ಕಾರಣಕ್ಕೆ ಆಕೆಗೆ ಶಾಲೆಯಲ್ಲಿ ಅಡ್ಮಿಷನ್ ನಿರಾಕರಿಸಲಾಗಿದೆ ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಧಾರ್ ಕಾರ್ಡ್‌ನಲ್ಲಿ ಆಧಾರ್ ಸಂಖ್ಯೆಯೂ ಇರಲಿಲ್ಲ. ಆಕೆಯ ಹೆಸರೂ ಇರದಿದ್ದ ಹಿನ್ನೆಲೆಯಲ್ಲಿ ಆಕೆಗೆ ಪ್ರವೇಶ ನೀಡಲು ಶಾಲಾ ಆಡಳಿತ ಸಿಬ್ಬಂದಿ ನಿರಾಕರಿಸಿದ್ದಾರೆ.
ಶನಿವಾರ ಬಿಲ್ಸಿ ತಹಸಿಲ್‌ನ ರಾಯ್‌ಪುರ ಗ್ರಾಮದ ನಿವಾಸಿ ದಿನೇಶ್ ತನ್ನ ಮಗಳು ಆರತಿಗೆ ಪ್ರವೇಶ ಪಡೆಯಲು ಪ್ರಾಥಮಿಕ ಶಾಲೆಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಏಕ್ತಾ ವರ್ಷಿಣಿ ಎಂಬ ಶಿಕ್ಷಕಿ ಆಕೆಗೆ ಪ್ರವೇಶ ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಆಧಾರ್ ಕಾರ್ಡ್ ಸರಿಪಡಿಸಿಕೊಡುವಂತೆ ಶಿಕ್ಷಕರು ದಿನೇಶ್‌ಗೆ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ದೀಪಾ ರಂಜನ್ ಮಾತನಾಡಿ, ‘ಅಂಚೆ ಕಚೇರಿ, ಬ್ಯಾಂಕ್ಗಳಲ್ಲಿ ಆಧಾರ್ ಕಾರ್ಡ್ ಸಿದ್ಧಪಡಿಸಲಾಗುತ್ತಿದೆ. ನಿರ್ಲಕ್ಷ್ಯದಿಂದ ಈ ಪ್ರಮಾದ ನಡೆದಿದೆ. ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಆ ಬಾಲಕಿಯ ಆಧಾರ್ ಕಾರ್ಡ್‌ನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧುವಿನ 5ನೇ ಮಗು ಎಂಬ ಹೆಸರಿರುವ ಆ ಆಧಾರ್ ಕಾರ್ಡ್ ನೋಡಿ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video: ದೇವಸ್ಥಾನದ ಹೊರಗೆ ಬೆಂಕಿ ಹೊತ್ತಿಕೊಂಡು ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಸ್ಫೋಟ
PAN-Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗಿಲ್ಲವೆ? ಚಿಂತೆ ಮಾಡಬೇಡಿ, ಇನ್ನೂ ಒಂದು ಅವಕಾಶವಿದೆ