Video Viral: ವಿಸರ್ಜನೆಯ ವೇಳೆ ಗಣಪನ ಅಪ್ಪಿಕೊಂಡು ಕಣ್ಣೀರಿಟ್ಟ ಬಾಲಕ; ವಿಡಿಯೋ ವೈರಲ್​​

|

Updated on: Sep 11, 2024 | 11:00 AM

ವಿಡಿಯೋದಲ್ಲಿ ಗಣಪನ ಅಪ್ಪಿಕೊಂಡು ಕಣ್ಣೀರಿಟ್ಟ ಬಾಲಕನ ಹೆಸರು ಅಭಿನವ್ ಅರೋರಾ. ಅಭಿನವ್ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು, ಇನ್ಸ್ಟಾಗ್ರಾಮ್​​ನಲ್ಲಿ 9.3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾನೆ. ಆಧ್ಯಾತ್ಮಿಕ ವಿಷಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅಭಿನವ್ ಹಿಂದೂ ಹಬ್ಬಗಳನ್ನು ಆಚರಿಸುವುದು, ಹಿಂದೂ ಧರ್ಮಗ್ರಂಥಗಳ ಬಗೆಗಿನ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾನೆ.

Video Viral: ವಿಸರ್ಜನೆಯ ವೇಳೆ ಗಣಪನ ಅಪ್ಪಿಕೊಂಡು ಕಣ್ಣೀರಿಟ್ಟ ಬಾಲಕ;  ವಿಡಿಯೋ ವೈರಲ್​​
Abhinav Arora
Follow us on

ಬಾಲಕನೊಬ್ಬ ಗಣಪತಿ ಮೂರ್ತಿಯ ಮುಂದೆ ಕುಳಿತು ವಿಸರ್ಜನೆ ಮಾಡದಂತೆ ಹೇಳುತ್ತಾ ಅಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕಿತ್ತಳೆ ಬಣ್ಣದ ಕುರ್ತಾ ಧರಿಸಿ ನದಿಯ ದಡದಲ್ಲಿ ಕುಳಿತಿದ್ದ ಬಾಲಕ ಗಣೇಶನ ಮೂರ್ತಿಗೆ ಲಡ್ಡೂ ತಿನ್ನಿಸುತ್ತಾ ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.

abhinavaroraofficial ಎಂಬ ಇನ್ಸ್ಟಾಗ್​ರಾಮ್​ನ್ಲಲಿ ಹಂಚಿಕೊಂಡಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಸೆ.04 ರಂದು ಹಂಚಿಕೊಂಡಿರುವ ವಿಡಿಯೋ ಕೇವಲ 7 ದಿನದಲ್ಲಿ 23.9 ಮಿಲಿಯನ್ ಅಂದರೆ 2ಕೋಟಿಗೂ ಅಧಿಕ​ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ ಬಾಲಕನ ಭಕ್ತಿಗೆ ನೆಟ್ಟಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಭೂಮಿಯತ್ತ ಧಾವಿಸುತ್ತಿದೆ ಬೃಹತ್‌ ಕ್ಷುದ್ರಗ್ರಹ, ಎಚ್ಚರಿಕೆ ನೀಡಿದ ಇಸ್ರೋ

ಅಭಿನವ್ ಅರೋರಾ ಯಾರು?

ವಿಡಿಯೋದಲ್ಲಿ ಗಣಪನ ಅಪ್ಪಿಕೊಂಡು ಕಣ್ಣೀರಿಟ್ಟ ಬಾಲಕನ ಹೆಸರು ಅಭಿನವ್ ಅರೋರಾ. ಅಭಿನವ್ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು, ಇನ್ಸ್ಟಾಗ್ರಾಮ್​​ನಲ್ಲಿ 9.3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾನೆ. ಆಧ್ಯಾತ್ಮಿಕ ವಿಷಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಅಭಿನವ್ ಹಿಂದೂ ಹಬ್ಬಗಳನ್ನು ಆಚರಿಸುವುದು, ಹಿಂದೂ ಧರ್ಮಗ್ರಂಥಗಳನ್ನು ಓದುವುದು ಮತ್ತು ಧಾರ್ಮಿಕ ಗುರುಗಳನ್ನು ಭೇಟಿಯಾಗುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾನೆ. ಇದಲ್ಲದೇ ಈ ಬಾಲಕನನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಅತ್ಯಂತ ಕಿರಿಯ ಆಧ್ಯಾತ್ಮಿಕ ವಾಗ್ಮಿ ಎಂದು ಗೌರವಿಸಿದ್ದರು. ಅಭಿನವ್ ವಾಣಿಜ್ಯೋದ್ಯಮಿ, ಲೇಖಕ ಮತ್ತು TEDx ಸ್ಪೀಕರ್ ತರುಣ್ ರಾಜ್ ಅರೋರಾ ಅವರ ಮಗ .

ವೈರಲ್​ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 am, Wed, 11 September 24