Viral: ಆಂಜನೇಯನ ವೇಷ ತೊಟ್ಟು ಕುಣಿದು ಸಂಭ್ರಮಿಸಿದ ಬಾಲ ಸಂತ ಅಭಿನವ್‌ ಅರೋರಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2024 | 5:00 PM

ಸ್ವಯಂ ಘೋಷಿತ ಆಧ್ಯಾತ್ಮಿಕ ವಾಗ್ಮಿ, ಬಾಲ ಸಂತ ಅಭಿನವ್‌ ಅರೋರಾ ಬಗ್ಗೆ ಹೆಚ್ಚಿನವರಿಗೆ ಗೊತೇ ಇರುತ್ತೆ. 10 ವರ್ಷದ ಈ ಚಿಕ್ಕ ಬಾಲಕ ಆಧ್ಯಾತ್ಮಿಕ ಕಂಟೆಂಟ್‌ಗಳ ಮೂಲಕವೇ ಜನರ ಗಮನ ಸೆಳೆದವ. ಇದೀಗ ಈತ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಆಂಜನೇಯನ ವೇಷ ತೊಟ್ಟು ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

Viral: ಆಂಜನೇಯನ ವೇಷ ತೊಟ್ಟು ಕುಣಿದು ಸಂಭ್ರಮಿಸಿದ ಬಾಲ ಸಂತ ಅಭಿನವ್‌ ಅರೋರಾ
ವೈರಲ್​​ ವಿಡಿಯೋ ( ಬಾಲ ಸಂತ ಅಭಿನವ್‌ ಅರೋರಾ)
Follow us on

ಸ್ವಯಂ ಘೋಷಿತ ಆಧ್ಯಾತ್ಮಿಕ ವಾಗ್ಮಿ, ಬಾಲ ಸಂತ ಅಭಿನವ್‌ ಅರೋರಾ ಬಗ್ಗೆ ಬಹುತೇಕ ನಿಮ್ಮೆಲ್ಲರಿಗೂ ಗೊತ್ತೇ ಇರುತ್ತೆ ಅಲ್ವಾ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ 10 ವರ್ಷ ವಯಸ್ಸಿನ ಈ ಪುಟ್ಟ ಬಾಲಕ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಹೆಚ್ಚಾಗಿ ವಿಡಿಯೋಗಳನ್ನು ಮಾಡುತ್ತಿರುತ್ತಾನೆ. ಈ ವಿಷಯಗಳಿಂದಲೇ ಈ ಬಾಲಕ ಆಗಾಗ್ಗೆ ಟ್ರೋಲ್‌ಗೂ ಕೂಡಾ ಗುರಿಯಾಗುತ್ತಿರುತ್ತಾನೆ. ಇದೀಗ ಈತ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಆಂಜನೇಯನ ವೇಷ ತೊಟ್ಟು ರಾಮ-ಸೀತಾರ ಭಜನೆ ಹಾಡನ್ನು ಪಠಿಸುತ್ತಾ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.

ದೆಹಲಿಯ ಸ್ವಯಂ ಘೋಷಿತ ಆಧ್ಯಾತ್ಮಿಕ ವಾಗ್ಮಿ, 10 ವರ್ಷ ವಯಸ್ಸಿನ ಕಂಟೆಂಟ್‌ ಕ್ರಿಯೇಟರ್‌ ಹನುಮಂತನ ವೇಷ ತೊಟ್ಟು ನೃತ್ಯ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾನೆ. ಹೌದು ಕೆಂಪು ಬಣ್ಣದ ಬಟ್ಟೆ, ತಲೆಗೊಂದು ಕಿರೀಟ ತೊಟ್ಟು ಆಂಜನೇಯನಂತೆ ರೆಡಿಯಾಗಿ ಸೀತಾ ರಾಮರ ಭಜನೆ ಹಾಡನ್ನು ಹಾಡುತ್ತಾ ಭಕ್ತಿ ಪೂರ್ವಕವಾಗಿ ನೃತ್ಯ ಮಾಡಿದ್ದಾನೆ.

ಎಕ್ಸ್​​​​​ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವನ್ನು Incognito_qfs ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅಭಿನವ್‌ ಅರೋರಾನ ಪೋಷಕರು ಇದನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ, ಬಹುಶಃ ಅಭಿನವ್‌ ತಂದೆ ಇಂತಹ ಕಂಟೆಂಟ್‌ಗಳಿಂದ ಸಾಕಷ್ಟು ಹಣವನ್ನು ಗಳಿಸುತ್ತಿರಬಹುದು. ದಯವಿಟ್ಟು ಆ ಹುಡುಗನಿಗಾಗಿ ಒಳ್ಳೆಯ ಡಾನ್ಸ್‌ ಟೀಚರ್‌ ಮತ್ತು ಸಂಗೀತ ಶಿಕ್ಷಕರನ್ನು ನೇಮಿಸಿಕೊಳ್ಳಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಅಭಿನವ್‌ ಕೆಂಪು ಬಣ್ಣದ ಬಟ್ಟೆ, ತಲೆಗೊಂದು ಕಿರೀಟ ತೊಟ್ಟು ಆಂಜನೇಯನಂತೆ ರೆಡಿಯಾಗಿ ಸೀತಾ ರಾಮ ಭಜನೆ ಹಾಡನ್ನು ಪಠಿಸುತ್ತಾ ತನ್ನಿಚ್ಛೆಯಂದೆ ನೃತ್ಯ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ನೆಮ್ಮದಿಯಿಂದ ಮಲಗಿದ್ದ ವೇಳೆ ಯುಟ್ಯೂಬ್‌ ವ್ಲಾಗ್‌ ಮಾಡಿ ಡಿಸ್ಟರ್ಬ್‌ ಮಾಡಿದ ಮಗನಿಗೆ ಹಿಗ್ಗಾಮುಗ್ಗಾ ಜಾಡಿಸಿದ ತಾಯಿ

ಡಿಸೆಂಬರ್‌ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.4 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತನ ಪೋಷಕರೇ ಆತನ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಗುವನ್ನು ಈ ರೀತಿ ಶೋಷಿಸುವುದು ಅಪರಾಧʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ