‘ವಿಶ್ವವೇ ವಿಫಲವಾಗಿದೆ’ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಅಫ್ಘಾನಿಯರ ಜೀವನ ಛಿದ್ರವಾಗುತ್ತಿದ್ದಾಗ ಹುಡುಗಿಯ ಕಣ್ಣೀರಿನ ವಿಡಿಯೋ..

‘ವಿಶ್ವವೇ ವಿಫಲವಾಗಿದೆ ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್
‘ವಿಶ್ವವೇ ವಿಫಲವಾಗಿದೆ' ಕಣ್ಣೀರಿನಲ್ಲಿರುವ ಅಫ್ಘಾನಿ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ
Edited By:

Updated on: Aug 17, 2021 | 11:10 AM

ತಾಲಿಬಾನ್(Taliban) ಅಫ್ಘಾನಿಸ್ತಾನದ (Afghanistan) ಮೇಲೆ ಹಿಡಿತ ಸಾಧಿಸುತ್ತಿದ್ದಂತೆಯೇ ಹಲವಾರು ಹೃದಯ ವಿದ್ರಾವಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಲವು ಮನಕಲಕುವ ಚಿತ್ರಗಳು ಹರಿದಾಡುತ್ತಿದೆ. ಇದರ ನಡುವೆ ಅಫ್ಘಾನಿಸ್ತಾನದ ಹುಡುಗಿಯ ಹೃದಯ ವಿದ್ರಾವಕ ವಿಡಿಯೋ ವೈರಲ್ ಆಗಿದೆ. ಯುದ್ಧದಿಂದ ಹಾನಿಗೊಳಗಾದ ದೇಶವನ್ನು ಬಹುಬೇಗ ಮರೆತುಬಿಡುತ್ತಾರೆ ಎಂದು ಹುಡುಗಿ ಮಾತನಾಡಿದ್ದಾರೆ. ಮನಕಲುಕವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಲಿಬಾನ್​ನ ಕಾಬೂಲ್ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಇರಾನಿನ ಪರ್ತಕರ್ತ ಮಾಸಿಹ್ ಶುಕ್ರವಾರ ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಅಫ್ಘಾನಿಯರ ಜೀವನ ಛಿದ್ರವಾಗುತ್ತಿದ್ದಾಗ ಹುಡುಗಿಯ ಕಣ್ಣೀರಿನ ವಿಡಿಯೋ. ಅಫ್ಘಾನಿಸ್ತಾನದ ಮಹಿಳೆಯರನ್ನು ನೋಡಿ ಮನಕಲುಕುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಹಿಂದಿನ ಆಡಳಿತದಲ್ಲಿ ತಾಲಿಬಾನ್ ಮಹಿಳೆಯರಿಗೆ ಹೊರಗಡೆ ಕೆಲಸಕ್ಕೆ ಹೋಗುವುದನ್ನು ನಿಷೇಧಿಸಿತು. ಮಹಿಳೆಯರು ಬುರ್ಖಾ ಧರಿಸಬೇಕಿತ್ತು. ಮಹಿಳೆಯರು ಹೊರಗೆ ಹೋಗುವಾಗಲೆಲ್ಲಾ ಅವರೊಡನೆ ಪುರುಷರು ಹೋಗಲೇಬೇಕಿತ್ತು. ಅಫ್ಘಾನಿ ಹುಡುಗಿಯ ಹ್ರದಯ ವಿದ್ರಾವಕ ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ:

Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!

ಅಫ್ಘಾನಿಸ್ತಾನದ ಈಗಿನ ಸ್ಥಿತಿ ರಶೀದ್ ಖಾನ್ ಅವರನ್ನು ಚಿಂತಾಕ್ರಾಂತರನ್ನಾಗಿಸಿದೆ: ಕೆವಿನ್ ಪೀಟರ್ಸನ್

Published On - 11:10 am, Tue, 17 August 21