Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ!
Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ತಾಲೀಬಾನಿಗಳ ಹಿಡಿತದಲ್ಲಿ ಕಾಬೂಲ್ ನಗರ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ ಎಂದ ರಷ್ಯಾ!
ಕಾಬೂಲ್: ಮೊದಲೇ ಅರಾಜಕತೆಯಿಂದ ನೆಲ ಕಚ್ಚಿರುವ ಅಫ್ಘಾನಿಸ್ತಾನದ ಮೇಲೆ ಈಗ ಪ್ರಕೃತಿಯೂ ಮುನಿಸಿಕೊಂಡಂತಿದೆ. ಆಫ್ಘನ್ ನೆಲೆಗಳು ಕಂಪಿಸತೊಡಗಿವೆ. ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ (Fayzabad) ಲಘು ಭೂಕಂಪ (earthquake ) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.5ರಷ್ಟು ದಾಖಲಾಗಿದೆ. ತಕ್ಷಣಕ್ಕೆ, ಯಾವುದೇ ಸಾವು ನೋವು ವರದಿಯಾಗಿಲ್ಲ.
Earthquake of Magnitude:4.5, Occurred on 17-08-2021, 06:08:38 IST, Lat: 36.65 & Long: 71.30, Depth: 230 Km ,Location: 83km SE of Fayzabad, Afghanistan for more information download the BhooKamp App https://t.co/L99HrsAFP7@ndmaindia @Indiametdept pic.twitter.com/IpvUqlN9mx
— National Center for Seismology (@NCS_Earthquake) August 17, 2021
ತಾಲೀಬಾನಿಗಳ ಹಿಡಿತದಲ್ಲಿ ಕಾಬೂಲ್ ನಗರ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ: ಅಫ್ಘಾನಿಸ್ತಾನದ ಬಹುತೇಕ ಭೂಭಾಗಗಳಲ್ಲಿ ತಾಲೀಬಾನಿಗಳ ಆಟಾಟೋಪ ಮುಂದುವರಿದಿದೆ. ಬಹುತೇಕ ಜನರು ದಿಕ್ಕಾಪಾಲಗಿದ್ದು, ಮನೆಗಳಲ್ಲೇ ಉಳಿದಿರುವ ಮಂದಿ ರಕ್ಷಣೆಗಾಗಿ ಕಾದುಕುಳಿತಿದ್ದಾರೆ. ಆದರೆ ತಾಲೀಬಾನಿಗಳು ಅಫ್ಘಾನಿಸ್ತಾನವನ್ನು ತನ್ನ ಕಬ್ಜಾಗೆ ತೆಗೆದುಕೊಂಡು ಮೊದಲ 24 ಗಂಟೆಗಳು ಕಳೆದಿವೆ. ಈ ಅವಧಿಯಲ್ಲಿ, ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಕಾಬೂಲ್ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿದೆ.
ತಾಲೀಬಾನಿಗಳು (Taliban ) ಕಾಬೂಲ್ ನಗರವನ್ನು ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿರಿಸಿದ್ದಾರೆ ಎಂದು ಅಫ್ಘಾನಿಸ್ತಾನದ ರಷ್ಯಾ ಅಂಬಾಸಿಡರ್ ಮಿಟ್ರಿ ಝಿರನೋವ್ (Dmitry Zhirnov) ಹೇಳಿದ್ದಾರೆ.
Russia's ambassador to Afghanistan Dmitry Zhirnov said Taliban had made Kabul safer in the first 24 hours than it had been under the previous authorities: Reuters
— ANI (@ANI) August 17, 2021
These guys conquered Afghanistan in two days
— Matt Walsh (@MattWalshBlog) August 17, 2021
ವಿದೇಶಾಂಗ ಸಚಿವ ಜೈಶಂಕರ್ರಿಂದ ಭಾರತೀಯರಿಗೆ ಅಭಯ: ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆ ಮೊದಲ ಆದ್ಯತೆ, ಕಾಬೂಲ್‌ನಲ್ಲಿರುವ ಸಿಖ್ ಮುಖಂಡರು, ಹಿಂದೂ ಮುಖಂಡರ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿ ಅಭಯ ನೀಡಿದ್ದಾರೆ.
Discussed the latest developments in Afghanistan with US Secretary of State Antony Blinken. Underlined the urgency of restoring airport operations in Kabul. Deeply appreciate the American efforts underway in this regard: External Affairs Minister Dr S Jaishankar
(File pic) pic.twitter.com/10Hnkizv8d
— ANI (@ANI) August 16, 2021
ಇನ್ನು ನಿನ್ನೆ ಕಾಬೂಲ್ನಲ್ಲಿ ಅಮೆರಿಕದ ಸೇನಾ ವಿಮಾನವೇರಿ ಪಲಾಯನಗೈಯಲು ಅಫ್ಘಾನಿಸ್ತಾನದ ಜನ ಹರಸಾಹಸ ಪಟ್ಟಿದ್ದಾರೆ. ಆ ವೇಳೆ ಸೇನೆ ವಿಮಾನದ ಒಳಗಿನ ದೃಶ್ಯ ಇಲ್ಲಿದೆ:
???. 640 innocent civilians on one aircraft we rescued from #Afghanistan. I just can’t imagine. These poor people. I pray we get as many of them out as possible. Omg pic.twitter.com/WLMjOsV8BU
— HippieChick (@DetHippieChick) August 17, 2021
Afghanistan: ಅಫ್ಘಾನಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ, ಕಾಬೂಲ್ ಏರ್‌ಪೋರ್ಟ್ ಬಳಿ ಫೈರಿಂಗ್, ವಿಮಾನಗಳ ಹಾರಾಟ ರದ್ದು
(Earthquake in Afghanistan Kabul safer in Taliban hands says Russia ambassador to Afghanistan)
Published On - 8:23 am, Tue, 17 August 21