ಪ್ರತೀ ಹುಡುಗಿಗೂ ತನ್ನ ಹುಡುಗ ಒಳ್ಳೆ ಹೈಟ್ ಇರಬೇಕು ಎಂಬ ಕನಸಿರುತ್ತದೆ. ಯುವತಿಯರ ಈ ಕನಸಿನಿಂದಾಗಿ 15 ವರ್ಷಗಳಿಂದ ಮದುವೆಯಾಗಲು ಒಂದೂ ಹುಡುಗಿ ಸಿಗದೆ ಜೀವನವೇ ಸಾಕು ಎಂದು ಕುಳಿತಿದ್ದ 3.7 ಅಡಿ ಎತ್ತರದ ಯುವಕನ ಜೀವನದಲ್ಲಿ ಇದೀಗಾ ಮತ್ತೆ ಮದುವೆಯ ಕನಸು ಚಿಗುರೊಡೆದಿದೆ. ಹೌದು 15 ವರ್ಷಗಳಿಂದ ಮದುವೆಯಾಗಲು ಹುಡುಗಿ ಸಿಗದೇ ಕಂಗಲಾಗಿದ್ದ 3.7 ಅಡಿ ಎತ್ತರದ ಯುವಕನಿಗೆ 4 ಅಡಿ ಎತ್ತರದ ಯುವತಿಯೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದೆ. ಈ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದಿದೆ.
ಬುಲಂದ್‌ಶಹರ್‌ನಲ್ಲಿ ನೆಲೆಸಿರುವ ಮೊಹಮ್ಮದ್ ಅರ್ಷದ್ ಅವರ ಎತ್ತರ ಕೇವಲ 3.7 ಅಡಿ. ಹಾಗಾಗಿ ಆತನನ್ನು ಮದುವೆಯಾಗಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಆದರೆ, ವಯಸ್ಸು ಹೆಚ್ಚುತ್ತಲೇ ಹೋಗಿದ್ದರಿಂದ ಮದುವೆಯಾಗುವ ಆಸೆಯನ್ನೇ ಬಿಟ್ಟಿದ್ದ. ಕೊನೆಗೂ 15 ವರ್ಷಗಳ ಹುಡುಕಾಟದ ನಂತರ ಅರ್ಷದ್ನ ಎತ್ತರವನ್ನು ಲೆಕ್ಕಿಸದೇ ಆತನಿಗಿಂತ ಉದ್ದವಿರುವ ಯುವತಿ ಜೀವನ ಸಂಗಾತಿಯಾಗಿದ್ದಾಳೆ.
ಇದನ್ನೂ ಓದಿ: ಭಿಕ್ಷಾಟನೆಯಿಂದಲೇ 45 ದಿನದಲ್ಲಿ 2.5ಲಕ್ಷ ಗಳಿಕೆ; ಹುಟ್ಟೂರಿನಲ್ಲಿ ಮನೆ,ಜಮೀನು ಖರೀದಿ
ಸಯಾನಾ ನಗರದ 35 ವರ್ಷದ ಮೊಹಮ್ಮದ್ ಅರ್ಷದ್ ಪೀಠೋಪಕರಣ ವ್ಯಾಪಾರ ಮಾಡುತ್ತಿದ್ದು, ಮದುವೆಯಾಗಲು ಹುಡುಗಿ ಸಿಗದೇ ಇರುವ ಕಾರಣ ಆತನನ್ನು ಅಪಹಾಸ್ಯ ಮಾಡಿದವರೇ ಹೆಚ್ಚು. ಆದರೆ,ಆತ ಯಾವತ್ತೂ ತಾಳ್ಮೆಗೆಡಲಿಲ್ಲ. ಸರಿಯಾದ ಜೀವನ ಸಂಗಾತಿಯನ್ನು ಹುಡುಕುವ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ನಾಲ್ಕು ತಿಂಗಳ ಹಿಂದೆ ಸಂಬಂಧಿಕರೊಬ್ಬರು 4 ಅಡಿ ಎತ್ತರದ ಹುಡುಗಿ ಸೋನಾ ಬಗ್ಗೆ ಹೇಳಿದ್ದರು. ನಂತರ ಅರ್ಷದ್ ಕುಟುಂಬಸ್ಥರು ತೆರಳಿ ಸೋನಾ ಮನೆಯವರ ಬಳಿ ಮಾತುಕತೆ ನಡೆಸಿದ್ದಾರೆ. ಅವರು ಅಂತಿಮವಾಗಿ ಫೆಬ್ರವರಿ 14 ರ ಬುಧವಾರದಂದು ಪ್ರೇಮಿಗಳ ದಿನದಂದು ಅರ್ಷದ್ ಮತ್ತು ಸೋನಾ ಅವರ ವಿವಾಹವಾಗಿದೆ. ಅರ್ಷದ್ ಗೆಳೆಯರು ನಗರದೆಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Thu, 15 February 24