ಕಚ್ಚಾ ಬಾದಾಮ್​ ಬಳಿಕ ವೈರಲ್​ ಆಗುತ್ತಿದೆ ಪೇರಳೆ ಹಣ್ಣಿನ ವ್ಯಾಪಾರಿಯ ಹಾಡು: ಇಲ್ಲಿದೆ ವಿಡಿಯೋ

ಬುಬನ್​ ಬಡ್ಯಾಕರ್​ ಹಾಡಿದ್ದ ಕಚ್ಚಾ ಬಾದಾಮ್​ ಹಾಡು ವೈರಲ್​ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅದರ ಬೆನ್ನಲ್ಲೆ ಈಗ ಪೇರಳೆ ಹಣ್ಣಿನ ಮಾರಾಟಗಾರರೊಬ್ಬರ ಹಾಡು ಸಖತ್​ ವೈರಲ್​ ಆಗಿದೆ. 

ಕಚ್ಚಾ ಬಾದಾಮ್​ ಬಳಿಕ ವೈರಲ್​ ಆಗುತ್ತಿದೆ ಪೇರಳೆ ಹಣ್ಣಿನ ವ್ಯಾಪಾರಿಯ ಹಾಡು: ಇಲ್ಲಿದೆ ವಿಡಿಯೋ
ಪೇರಳೆ ಹಣ್ನು ಮಾರಾಟಗಾರ
Updated By: Pavitra Bhat Jigalemane

Updated on: Mar 04, 2022 | 10:30 AM

ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಬುಬನ್​ ಬಡ್ಯಾಕರ್​ ಹಾಡಿದ್ದ ಕಚ್ಚಾ ಬಾದಾಮ್​ ಹಾಡು ವೈರಲ್​ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಅದರ ಬೆನ್ನಲ್ಲೆ ಈಗ ಪೇರಳೆ ಹಣ್ಣಿನ ಮಾರಾಟಗಾರರೊಬ್ಬರ ಹಾಡು ಸಖತ್​ ವೈರಲ್​ ಆಗಿದೆ.  ಜಿಂಗಲ್​ ರೀತಿಯ ಹಾಡು ಇದೀಗ ವೈರಲ್​ ಆಗಿದ್ದು ಪೇರಳೆ ಹಣ್ಣು ಕೊಳ್ಳುವಂತೆ ಜನರನ್ನು ತಮ್ಮ ಹಾಡಿನ ಮೂಲಕ ಆಕರ್ಷಿಸಿದ್ದಾರೆ. ‘ಯೇ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ, ಪಾಕಿ ಪಾಕಿ, ಮೀಠಿ ಮೀಠಿ, ಗದ್ದರ್ ಗದ್ದರ್, ತಾಜಾ ತಾಜಾ, ನಮಕ್ ಲಗಾ ಕೆ ಖಾಜ್ ಖಾಜಾ’ ಎನ್ನುವ ಸಾಲನ್ನು ಹೇಳುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.  ವೈರಲ್ ಆಗಿರುವ ಪೇರಳೆ ವ್ಯಾಪಾರಿಯ ಹಾಡು ಯುಟ್ಯೂಬ್​ನಲ್ಲಿ6 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

27 ಸೆಕೆಂಡಿನ ವಿಡಿಯೋದಲ್ಲಿ ಗಾಡಿಯ ಮೇಲೆ ರಾಶಿ ಪೇರಳೆ ಹಣ್ಣುಗಳನ್ನು ಹಾಕಿಕೊಂಡು ಕುಳಿತ ವೃದ್ಧ ಕುಳಿತಿರುತ್ತಾನೆ. ಪೇರಳೆ ಹಣ್ಣು ಕೊಳ್ಳುವಂತೆ ಹಾಡನ್ನು ಹೇಳಿದ್ದಾರೆ. ಸದ್ಯ ಈ ವಿಡಿಯೋ ಯುಟ್ಯೂಬ್​ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋ ಎಲ್ಲಿಯದ್ದು ಎಂದು ತಿಳಿದಿಲ್ಲ. ಆದರೆ ವೃದ್ಧನನ್ನು ಅಲ್ಲಿಯ ಜನ ದಾದಾಜಿ ಎಂದೇ ಕರೆಯುತ್ತಾರೆ. ವಿಡಿಯೋ ನೋಡಿದ ನೆಟ್ಟಿಗರು ಬೆಸ್ಟ್​ ಎಂದು ಕಾಮೆಂಟ್​ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಹಾಡಿಗೂ ನೆಟ್ಟಿಗರು ರೀಲ್ಸ್​ ಮಾಡುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಬುಬನ್​ ಬಡ್ಯಾಕರ್​ ಹಾಡಿದ್ದ ಕಚ್ಚಾ ಬಾದಾಮ್​ ಹಾಡು ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ವೈರಲ್​ ಆಗಿತ್ತು. ಬುಬನ್​ ಬಡ್ಯಾಕರ್​ ತಮ್ಮ ಹಾಡಿನ ಮೂಲಕ 13 ಲಕ್ಷ ಆದಾಯವನ್ನೂ ಗಳಿಸಿದ್ದರು. ಕಳೆದ ವಾರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:

ಕ್ಯಾನ್ಸರ್​ ಪೀಡಿತ 52 ವರ್ಷದ ತಾಯಿಗೆ ಮರು ಮದುವೆ ಮಾಡಿಸಿದ ಮಗ

Published On - 9:47 am, Fri, 4 March 22