ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’

ಉದ್ಯಮಿ ಆಕಾಶ್ ಮೆಹ್ತಾ ತಮ್ಮ ತಾಯಿಯ 60ನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಅದ್ದೂರಿಯಾಗಿ ಆಚರಿಸಿದ್ದಾರೆ. ಮಗನ ಈ ಅದ್ಭುತ ಆಯೋಜನೆ ಮತ್ತು ತಾಯಿಯ ಮೇಲಿನ ಪ್ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಕ್ತಿಗೀತೆಗಳು, ಮರುಭೂಮಿ ಸಫಾರಿ ಸೇರಿದಂತೆ ಅನೇಕ ವಿಚಾರಗಳನ್ನು ಒಳಗೊಂಡ ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದ್ದು, ಹಲವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ
ಸಾಂದರ್ಭಿಕ ಚಿತ್ರ
Edited By:

Updated on: Dec 08, 2025 | 10:13 AM

ಮಕ್ಕಳು ಅಮ್ಮನಿಗಾಗಿ ಏನ್​​​​ ಬೇಕಾದರೂ ಮಾಡುತ್ತಾರೆ. ಅದರಲ್ಲೂ ಗಂಡು ಮಕ್ಕಳಿಗೆ ಅಪ್ಪಗಿಂತ ಅಮ್ಮನ ಮೇಲೆ ಪ್ರೀತಿ ಹೆಚ್ಚು. ಇಲ್ಲೊಂದು ವೈರಲ್​​ ಆಗಿರುವ ವಿಡಿಯೋ ಅಮ್ಮ-ಮಗನ ಪ್ರೀತಿಗೆ ಸಾಕ್ಷಿಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋ ನೋಡಿ ನೆಟ್ಟಿಗರು ಕೂಡ ಭಾವನ್ಮಾಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಭಾರತ ಮೂಲದ ಉದ್ಯಮಿ ಆಕಾಶ್ ಮೆಹ್ತಾ (Akash Mehta) ಅವರು ತಮ್ಮ ತಾಯಿಯ ಹುಟ್ಟುಹಬ್ಬವನ್ನು ದುಬೈನಲ್ಲಿ ಭಾರೀ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅಮ್ಮನ ಹುಟ್ಟುಹಬ್ಬದ ಸಂಭ್ರಮ ಹೇಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಜತೆಗೆ ಇದು ಸೋಶಿಯಲ್​​ ಮೀಡಿಯಾದಲ್ಲಿ ಜನರ ಮೆಚ್ಚುಗೂ ಪಾತ್ರವಾಗಿದೆ. ವಿಡಿಯೋವನ್ನು ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 60ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿರುವ ಅಮ್ಮನಿಗೆ ಶುಭಾಶಯಗಳು, ನಿಮ್ಮ ಬಗ್ಗೆ ಹೇಳಲು ಪದಗಳೇ ಸಾಲುತ್ತಿಲ್ಲ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.

“ಅಮ್ಮ ನಿಮ್ಮ ಹುಟ್ಟುಹಬ್ಬದ ಈ ಆಚರಣೆ ಮದುವೆಯಂತೆ ಭಾಸವಾಗಿದೆ. ನೀವು ಪ್ರತಿದಿನ ನಿಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಗುತ್ತಾ ನೃತ್ಯ ಮಾಡುವುದನ್ನು ನೋಡುತ್ತಿದ್ದರೆ ಕಣ್ತುಂಬಿ ಬಂತು. ತುಂಬಾ ಖುಷಿಯಾಗುತ್ತಿದೆ ಅಮ್ಮ” ಎಂದು ಆಕಾಶ್ ಮೆಹ್ತಾ ಹೇಳಿದ್ದಾರೆ. ಅವರ ಅಮ್ಮ ಚೇತನಾ ಮೆಹ್ತಾ ಅವರು ಈ ಸಂಭ್ರಮಕ್ಕೆ ಅದ್ದೂರಿಯಾಗಿ ರೆಡಿಯಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ;

ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು?

ಭಾರತೀಯ-ಅಮೇರಿಕನ್ ಹಾಸ್ಯನಟ ಜರ್ನಾ ಗಾರ್ಗ್ ಅವರು ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಅಮ್ಮನಿಗೆ ಹುಟ್ಟುಹಬ್ಬ ಶುಭಾಶಯಗಳು, ಹೀಗೆ ಖುಷಿಯಾಗಿ ಇರಿ ಎಂದು ಕಮೆಂಟ್​ ಮಾಡಿದ್ದಾರೆ. ನಾನು ಕೂಡ ಈ ವಯಸ್ಸಿಗೆ ಬರುವಾಗ ಹೀಗೆ ಇರಬೇಕು ಎಂಬುದು ನನ್ನ ಆಸೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ಚಿಕ್ಕ ಹುಡುಗಿ ಯಾರು, ತುಂಬಾ ಕ್ಯೂಟ್​​ ಆಗಿ ಕಾಣುತ್ತಾರೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇದಕ್ಕೆ ಆಕಾಶ್ ಮೆಹ್ತಾ ಅದು ನನ್ನ ಅಮ್ಮ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಎಂತಹ ಅದ್ಭುತ ಆಚರಣೆ! ಅವರಿಗೆ ನಿಜವಾಗಿಯೂ 60 ವರ್ಷವೇ ಎಂದು ಅಚ್ಚರಿಯಿಂದ ಕೇಳಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ದಿನ ಮಗಳು ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ತಾಯಿ ಭಾವುಕ

ಆಕಾಶ್ ಮೆಹ್ತಾ ಯಾರು?

ಆಕಾಶ್ ಮೆಹ್ತಾ ಫೇಬಲ್ & ಮಾನೆ ಕಂಪನಿಯ ಸಿಇಒ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ತಜ್ಞರಾಗಿದ್ದಾರೆ. 2019 ರಲ್ಲಿ ಫೋರ್ಬ್ಸ್, ಯುರೋಪ್ ಮಾಧ್ಯಮ ಮತ್ತು ಮಾರ್ಕೆಟಿಂಗ್​​ನಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ತಮ್ಮ ಸಹೋದರಿ ನಿಕಿತಾ (ನಿಕಿ) ಮೆಹ್ತಾ ಅವರೊಂದಿಗೆ ಸೇರಿ ಒಂದು ಕಂಪನಿಯನ್ನು ಕೂಡ ಸ್ಥಾಪಿಸಿದರು. ಫೇಬಲ್ & ಮಾನೆ ಮಿಲಿಯನ್ ಡಾಲರ್ ಮೌಲ್ಯದ ಆಯುರ್ವೇದ ವೆಲ್ನೆಸ್ ಬ್ರ್ಯಾಂಡ್ ಆಗಿದೆ. ಇನ್ನು ಅವರ ತಾಯಿ ಚೇತನಾ ಮೆಹ್ತಾ ಅವರು, ಶಾಸ್ತ್ರೀಯವಾಗಿ ತರಬೇತಿ ಪಡೆದ ಭಾರತೀಯ ನರ್ತಕಿ ಹಾಗೂ ಪ್ರವಾಸೋದ್ಯಮ ಉದ್ಯಮದಲ್ಲೂ ಕೆಲಸ ಮಾಡಿದ್ದಾರೆ. ಚಿಕಿತ್ಸೆ ಮತ್ತು ಆಧ್ಯಾತ್ಮಿಕ ತರಬೇತಿಯನ್ನು ಕೂಡ ನೀಡುತ್ತಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ