ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್ ಕ್ರಿಯೆಟರ್
ಪಾಕಿಸ್ತಾನದ ಜನಪ್ರಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಪ್ಯಾರಿ ಮರ್ಯಮ್ ಅವರು 26ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ನಿಧನರಾಗಿದ್ದಾರೆ. ಅವರ ದಿಢೀರ್ ಸಾವು ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪತಿ ಅಹ್ಸಾನ್ ಅಲಿ ಅವರ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಮಕ್ಕಳ ಸಾವಿನ ಬಗ್ಗೆ ಹರಡಿದ ಸುಳ್ಳು ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಪಾಕಿಸ್ತಾನದ ಜನಪ್ರಿಯ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೆಟರ್ ಪ್ಯಾರಿ ಮರ್ಯಮ್ (Pari Maryam death) ಅವರು ಎರಡು ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅವರು 26ನೇ ವಯಸ್ಸಿನಲ್ಲಿ ನಿಧನರಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಿಯಾಸತ್ ಡೈಲಿ ವರದಿ ಮಾಡಿದೆ. ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಸ್ವಲ್ಪ ಸಮಯದ ನಂತರ ಗಂಭೀರ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮರಿಯಮ್ ಡಿಸೆಂಬರ್ 4 ಗುರುವಾರ ಲಾಹೋರ್‌ನಲ್ಲಿ ನಿಧನರಾಗಿದ್ದಾರೆ ಎಂದು ಅವರ ಪತಿ ಅಹ್ಸಾನ್ ಅಲಿ ಹೇಳಿದ್ದಾರೆ
ಪತಿ ಅಹ್ಸಾನ್ ಅಲಿ ಹೇಳಿದ್ದೇನು?
“ಅಲ್ಲಾ ನೀಡಿದ್ದನ್ನು ಮತ್ತೆ ಅವರಿಗೆ ಹಿಂತಿರುಗುತ್ತೇವೆ, ನನ್ನ ಪತ್ನಿ ಸಾವನ್ನಪ್ಪಿದ್ದಾರೆ. ಅಲ್ಲಾಹನು ಅವರನ್ನು ಕ್ಷಮಿಸಲಿ ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಂದು ಎಲ್ಲರೂ ಪ್ರಾರ್ಥಿಸಿ” ಎಂದು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅವರು ಹಂಚಿಕೊಂಡಿರುವ ಫೋಟೋದಲ್ಲಿ ಒಂದು ಫೋಟೋದಲ್ಲಿ ಅವರ ಪತ್ನಿ ಹಿಜಾಬ್ ಹಾಕಿರುವುದನ್ನು ನೋಡಬಹುದು, ಮತ್ತೊಂದು ಫೋಟೋದಲ್ಲಿ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವುದನ್ನು ಹಂಚಿಕೊಂಡಿದ್ದಾರೆ. ಇದರ ಜತೆಗೆ ಇನ್ಸ್ಟಾ ಸ್ಟೋರಿಯಲ್ಲಿ ಅವರ ಅವಳಿ ಮಕ್ಕಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದುಬೈನಲ್ಲಿ ಅಮ್ಮನ 60ನೇ ಹುಟ್ಟುಹಬ್ಬ: ‘ಇದು ನಿನ್ನ ಮದುವೆಯಂತೆ ಭಾಸವಾಯಿತು ಅಮ್ಮ’
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
View this post on Instagram
ಅಲ್ಹಮುದ್ಲಿಲ್ಲಾಹ್ ನನ್ನ ಎರಡು ಮಕ್ಕಳನ್ನು ರಕ್ಷಿಸುತ್ತಾರೆ ಎಂದು ಹೇಳಿದ್ದಾರೆ. ಯಾರೂ ಕೂಡ ಈ ಬಗ್ಗೆ ಸುಳ್ಳು ವದಂತಿ ಹರಡಬೇಡಿ. ಈ ಮಕ್ಕಳಿಗೆ ನೀವು ಹಾರೈಸಿ ಎಂದು ಹೇಳಿದ್ದಾರೆ. ಪ್ಯಾರಿ ಮರ್ಯಮ್ ಪಾಕಿಸ್ತಾನಿ ವ್ಲಾಗರ್ ಆಗಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಒಳಗೆ ಮತ್ತು ಹೊರಗೆ, ಭಾರತದಲ್ಲಿಯೂ ದೊಡ್ಡ ಅಭಿಮಾನಿಗಳನ್ನು ಕೂಡ ಇವರು ಹೊಂದಿದ್ದಾರೆ. ದಿ ಸಿಯಾಸತ್ ಡೈಲಿ ಪ್ರಕಾರ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ 1.4 ಲಕ್ಷ ಮತ್ತು ಟಿಕ್‌ಟಾಕ್‌ನಲ್ಲಿ ಸುಮಾರು ಎರಡು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು ಎಂದು ಹೇಳಿದೆ. ಇನ್ನು ಇವರ ಸಾವಿನ ನಂತರ ಅವರ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಸಾವಿಗೆ ಸಂತಾಪ ಕೂಡ ಸೂಚಿಸಲಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




