Viral: ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ ಈ ಸಮಸ್ಯೆಗಳೇ ಇರಲ್ಲ; ಅನಿವಾಸಿ ಭಾರತೀಯ ಹೀಗೆಂದಿದ್ದೇಕೆ?
ವಿದೇಶದಲ್ಲಿ ನೆಲೆಸಿರುವವರು ಭಾರತಕ್ಕೆ ಮರಳಿದಾಗ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಕಷ್ಟ ಪಡುತ್ತಾರೆ. ಅನಿವಾಸಿ ಭಾರತೀಯರೊಬ್ಬರು ಭಾರತಕ್ಕೆ ಹಿಂದಿರುಗಿದ ಬಳಿಕ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ. ಐರ್ಲೆಂಡ್‌ನಲ್ಲಿ ಎಂದಿಗೂ ಯೋಚಿಸದ ಸಮಸ್ಯೆಗಳ ಬಗ್ಗೆ ಇಲ್ಲಿ ಚಿಂತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವ್ಯಕ್ತಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ವಿದೇಶದಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ವ್ಯಕ್ತಿಗಳು ವರ್ಷಗಳು ಉರುಳಿದಂತೆ ತಮ್ಮ ದೇಶಕ್ಕೆ ಮರಳುವುದು ಸಹಜ. ಹೌದು, ಐರ್ಲೆಂಡ್‌ನಿಂದ (Ireland) ಭಾರತಕ್ಕೆ(India) ಮರಳಿದ ಬಳಿಕ ತಾನು ಎದುರಿಸಿದ ಹಲವಾರು ಸಮಸ್ಯೆಗಳ ಬಗ್ಗೆ ಕಾನ್ಪುರ ಮೂಲದ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ. ಕೋರ್ಸೆರಾದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ನಾವೀನ್ಯತೆ ತಂತ್ರಜ್ಞಾನ ವ್ಯವಸ್ಥಾಪಕ ಆಗಿರುವ ಆಕಾಶ್ ತಿವಾರಿ, ಐರ್ಲೆಂಡ್‌ನಲ್ಲಿ ಎಂದಿಗೂ ಯೋಚಿಸದ ಸಮಸ್ಯೆಗಳ ಬಗ್ಗೆ ಇಲ್ಲಿ ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ. ಮೂರು ಸಮಸ್ಯೆಗಳ ಪಟ್ಟಿ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಇಲ್ಲಿನ ಸಮಸ್ಯೆಗಳಿಗೆ ಹೊಂದಿಕೊಳ್ಳುವುದು ಅನಿರ್ವಾಯ ಎಂದು ಹೇಳಿದ್ದಾರೆ.
ಆಕಾಶ್ ತಿವಾರಿ (@akashtivari1007) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಭಾರತಕ್ಕೆ ಮರಳಿದ ಬಳಿಕ ನನ್ನ ಜೀವನದಲ್ಲಿ ಹಲವು ಸಮಸ್ಯೆಗಳನ್ನು ತಂದಿದೆ, ಐರ್ಲೆಂಡ್‌ನಲ್ಲಿ ನಾನು ಎಂದಿಗೂ ಈ ಬಗ್ಗೆ ಚಿಂತಿಸಬೇಕಾಗಿರಲಿಲ್ಲ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Moving back to India 🇮🇳 has brought so many issues in my life, that I never had to worry about in Ireland 🇮🇪
1. Electricity: I am in Kanpur, and on an average there’s a power cut for 4-5 hours everyday. We don’t have electricity even at the time of writing this. In Dublin, over…
— Akash Tiwari (@akashtiwari1007) December 6, 2025
ನಾನು ಕಾನ್ಪುರದಲ್ಲಿದ್ದೇನೆ. ಸರಾಸರಿ ಪ್ರತಿದಿನ 4-5 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುತ್ತದೆ.ಈ ಪೋಸ್ಟ್ ಮಾಡುವ ಸಮಯದಲ್ಲೂ ನಮಗೆ ವಿದ್ಯುತ್ ಇಲ್ಲ. ಡಬ್ಲಿನ್‌ನಲ್ಲಿ ನನ್ನ ಮೂರು ವರ್ಷಗಳ ವಾಸ್ತವ್ಯದಲ್ಲಿ, ನನ್ನ ಮೀಟರ್ ಬದಲಾಯಿಸಲು ಕೇವಲ ಒಂದು ಬಾರಿ ಮಾತ್ರ 15 ನಿಮಿಷಗಳ ಕಾಲ ವಿದ್ಯುತ್ ಕಡಿತಗೊಳಿಸಲಾಯಿತು. ಈ ಕಡಿತದ ಬಗ್ಗೆ 1 ತಿಂಗಳ ಮುಂಚಿತವಾಗಿ ನನಗೆ ತಿಳಿಸಲಾಯಿತು. ಇನ್ನು ಇಲ್ಲಿ ವಾಯು ಮಾಲಿನ್ಯ, ಸಂಚಾರ ದಟ್ಟಣೆ ಹಾಗೂ ಹಾರ್ನ್ ಶಬ್ದ. ಇವು ಮಾನವ ನಿರ್ಮಿತ ಕೃತಕವಾಗಿ ಸೃಷ್ಟಿಸಲಾದ ಸಮಸ್ಯೆಗಳು. ಇವುಗಳು ಮೊದಲ ಸ್ಥಾನದಲ್ಲಿ ಇರಬಾರದು. ಹೀಗಿದ್ದಾಗ ಜನರು ಜೀವನದ ಇತರ ಪ್ರಮುಖ ವಿಷಯಗಳತ್ತ ಗಮನ ಹರಿಸಬಹುದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಐದು ವರ್ಷಗಳ ಬಳಿಕ ಕೆನಾಡದಿಂದ ಭಾರತಕ್ಕೆ ಮರಳುವ ನಿರ್ಧಾರ; ಅಸಲಿ ಕಾರಣ ಬಿಚ್ಚಿಟ್ಟ ಅನಿವಾಸಿ ಭಾರತೀಯ
ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಭಾರತ ನಿಮ್ಮನ್ನು ಆಹ್ವಾನಿಸಿದೆಯೇ… ಅದು ನಿಮ್ಮ ಆಯ್ಕೆ ಎಂದು ಭಾವಿಸುತ್ತೇವೆ. ನೀವು ಇಲ್ಲಿ ಕಾಣುವ ಐರ್ಲೆಂಡ್‌ನಲ್ಲಿ ಕಾಣದ ಹಲವಾರು ವಿಷಯಗಳಿವೆ… ದಯವಿಟ್ಟು ಅದನ್ನೂ ಹೇಳಿ ಎಂದಿದ್ದಾರೆ. ಮತ್ತೊಬ್ಬರು, ಇಲ್ಲಿನ ಜೀವನ ಶೈಲಿಗೆ ಹೊಂದಿಕೊಳ್ಳಲು ಪ್ರಯತ್ನಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಭಾರತ ಸರ್ಕಾರವು ಹೆಚ್ಚು ಹೆಚ್ಚು ವಿದ್ಯುತ್ ಸ್ಥಾವರಗಳನ್ನು ಯಾವುದಕ್ಕಾಗಿ ಎಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Mon, 8 December 25




