AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ದುಡ್ಡಿಲ್ಲದೇ ಅಲೆಯುತ್ತಿದ್ದ ವ್ಯಕ್ತಿಗೆ ಬಸ್ ಟಿಕೆಟ್ ಮಾಡಿಸಿ ಊರು ಸೇರಿಸಿದ ಯುವಕ

ಈಗಿನ ಕಾಲದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸಿನ ವ್ಯಕ್ತಿಗಳು ಸಿಗುವುದೇ ಕಡಿಮೆ. ನಿಸ್ವಾರ್ಥ ಭಾವದಿಂದ ಸಹಾಯ ಮಾಡುವ ವ್ಯಕ್ತಿಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇಲ್ಲೊಬ್ಬ ಯುವಕನು ಊರಿಗೆ ಹೋಗಲು ದುಡ್ಡಿಲ್ಲದೇ ಅಲೆದಾಡುತ್ತಿದ್ದ ವ್ಯಕ್ತಿಗೆ ಬಸ್ ಟಿಕೆಟ್ ಮಾಡಿಸಿ ಊರು ಸೇರಿಸಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..

Video: ದುಡ್ಡಿಲ್ಲದೇ ಅಲೆಯುತ್ತಿದ್ದ ವ್ಯಕ್ತಿಗೆ ಬಸ್ ಟಿಕೆಟ್ ಮಾಡಿಸಿ ಊರು ಸೇರಿಸಿದ ಯುವಕ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Dec 09, 2025 | 11:23 AM

Share

ಬದುಕು (life) ಎಲ್ಲರದ್ದು ಒಂದೇ ರೀತಿ ಇರಲ್ಲ, ಬೇಕಾಬಿಟ್ಟಿ ದುಡ್ಡು ಖರ್ಚು ಮಾಡುವವರ ನಡುವೆ ಮೂರು ಹೊತ್ತಿನ ತುತ್ತಿಗಾಗಿ ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳನ್ನು ಕಂಡಾಗ ಕಣ್ಣಂಚಲಿ ನೀರು ಬರುತ್ತದೆ. ತಾನು ತನ್ನ ಊರಿಗೆ ಹೋಗಬೇಕು, ಆದರೆ ಬಸ್ ಟಿಕೆಟ್ ಮಾಡಿಸಲು ದುಡ್ಡಿಲ್ಲಎನ್ನುವ ವ್ಯಕ್ತಿಯ ಪಾಲಿಗೆ ಯುವಕನೊಬ್ಬ (young man) ದೇವರಾಗಿ ಬಂದಿದ್ದಾನೆ. ಬಸ್ ಟಿಕೆಟ್ ಮಾಡಿಸಿ ಬಸ್ಸು ಹತ್ತಿಸಿ ಅಪರಿಚಿತ ವ್ಯಕ್ತಿಯನ್ನು ಊರು ಸೇರಿಸಿದ್ದಾನೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ವ್ಯಕ್ತಿಯ ಒಳ್ಳೆತನವನ್ನು ಮೆಚ್ಚಿದ್ದಾರೆ.

ನವೀದ್ ಸ್ಟೋರಿ(naveedstory) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಯುವಕನ ಬಳಿ ಸಹಾಯಕ್ಕಾಗಿ ಅಂಗಲಾಚಿರುವುದನ್ನು ಕಾಣಬಹುದು. ಈ ಯುವಕನ ಬಳಿ ನನಗೆ ದುಡ್ಡು ಬೇಡ, ಬಸ್ಸು ಟಿಕೆಟ್ ಮಾಡಿಸಿ ಕೊಡಿ ನಾನು ಊರಿಗೆ ಹೋಗ್ತೇನೆ ಎಂದು ಕೇಳುತ್ತಿರುವುದನ್ನು ನೋಡಬಹುದು. ಈ ವ್ಯಕ್ತಿಗೆ ಸಹಾಯ ಮಾಡಲು ಮುಂದಾದ ಯುವಕನು ಹೋಟೆಲಿಗೆ ಕರೆದು ಕೊಂಡು ಹೋಗಿ ಹೊಟ್ಟೆ ತುಂಬಾ ತಿನ್ನಿಸಿ ಟಿಕೆಟ್ ಮಾಡಿಸಿ ಬಸ್ ಹತ್ತಿಸಿರುವುದನ್ನು ನೋಡಬಹುದು. ಬಸ್ ಹತ್ತಿದ ಬಳಿಕ ವ್ಯಕ್ತಿಯೂ ಕೈ ಮುಗಿದು ಯುವಕನಿಗೆ ಕೃತಜ್ಞತೆ ಸಲ್ಲಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ\

View this post on Instagram

A post shared by Naveed (@naveedstory)

ಇದನ್ನೂ ಓದಿ: ಇಳಿ ವಯಸ್ಸಿನಲ್ಲೂ ದುಡಿದು ತಿನ್ನುವ ಛಲ, ಅಜ್ಜಿಯ ಕೈರುಚಿಗೆ ಗ್ರಾಹಕರು ಫಿದಾ

ಈ ವಿಡಿಯೋ ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಿಮ್ಮನ್ನು ದೇವರು ಚೆನ್ನಾಗಿರಟ್ಟಿರಲಿ ಎಂದಿದ್ದಾರೆ. ಇನ್ನೊಬ್ಬರು, ಇಂತಹ ವ್ಯಕ್ತಿಗಳಿಗೆ ಸಪೋರ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ಮನಸ್ಸಿಗೆ ಸದಾ ಒಳ್ಳೆಯದಾಗ್ಲಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Mon, 8 December 25

ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಈ ರಸ್ತೆ ಬಂದ್ ಆಗಲಿದೆ
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಪೊಲೀಸರ ಮೇಲೆ ವಿಜಯಲಕ್ಷ್ಮಿ ದರ್ಶನ್ ಆರೋಪ: ಅಸಲಿ ವಿಷಯ ತಿಳಿಸಿದ ಕಮಿಷನರ್
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ನಿರಾಶ್ರಿತರ ಪ್ರಕರಣಕ್ಕೂ ಪಾಕಿಸ್ತಾನಕ್ಕೂ ಇದೆಯಾ ಲಿಂಕ್?
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ಕೋಗಿಲು ಲೇಔಟ್​​ ಸಂತ್ರಸ್ತರ ಸತ್ಯ ಬಿಚ್ಚಿಟ್ಟ ವಿಪಕ್ಷ ನಾಯಕ ಅಶೋಕ್​​
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?