AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ಮೃತದೇಹದ ಮುಂದೆ ಪ್ರತಿಜ್ಞೆ: 160 ಕೆಜಿಯಿಂದ 85 ಕೆಜಿಗೆ ತೂಕ ಇಳಿಸಿಕೊಂಡ ಯುವಕ

160 ಕೆಜಿಯಿಂದ 75 ಕೆಜಿಗೆ ಇಳಿದ ಸೋಭಿಕ್ ಸಾಹು ಅವರ ತೂಕ ಇಳಿಕೆ ಕಥೆ ಹಲವರಿಗೆ ಸ್ಫೂರ್ತಿ. ತಾಯಿಯ ಅಂತ್ಯಕ್ರಿಯೆಯ ನೋವಿನ ಕ್ಷಣದಲ್ಲಿ ಬದಲಾವಣೆಗೆ ಪ್ರತಿಜ್ಞೆ ಮಾಡಿದ ಅವರು, ನಿರಂತರ ವ್ಯಾಯಾಮ ಮತ್ತು ಪ್ರೋಟೀನ್ ಆಹಾರದಿಂದ 85 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅವರ ಈ ಅಸಾಮಾನ್ಯ ಸಾಧನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಮ್ಮನ ಮೃತದೇಹದ ಮುಂದೆ ಪ್ರತಿಜ್ಞೆ: 160 ಕೆಜಿಯಿಂದ 85 ಕೆಜಿಗೆ ತೂಕ ಇಳಿಸಿಕೊಂಡ ಯುವಕ
ವೈರಲ್​​ ಪೋಸ್ಟ್​​ (ಸೋಭಿಕ್ ಸಾಹು)
ಅಕ್ಷಯ್​ ಪಲ್ಲಮಜಲು​​
|

Updated on:Dec 08, 2025 | 12:25 PM

Share

ತೂಕ (Weight Loss Story) ಇಳಿಸಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದಕ್ಕೆ ಸತತ ಪ್ರಯತ್ನ ಬೇಕೇಬೇಕು. ಅದೊಂದು ರೀತಿಯ ತಪಸ್ಸು, ಆಹಾರದಲ್ಲಿ ಬದಲಾವಣೆ, ತಾಳ್ಮೆ, ಶಿಸ್ತು ಎಲ್ಲವನ್ನು ಪಾಲಿಸಬೇಕು. ಈ ಎಲ್ಲ ಪ್ರಯತ್ನದ ನಂತರವೂ ತಕ್ಷಣ ತೂಕ ಇಳಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಂದು ವೈರಲ್​​ ಆಗಿರುವ ವಿಡಿಯೋ ತೂಕ ಇಳಿಸಿಕೊಳ್ಳುವವರಿಗೆ ಸ್ಪೂರ್ತಿಯಾಗಿದೆ. ಒಂದು ಕಾಲದಲ್ಲಿ 160 ಕೆಜಿ ತೂಕವಿದ್ದ ಸೋಭಿಕ್ ಸಾಹು ಎಂಬ ಯುವಕ, ಇಂದು ವ್ಯಾಯಾಮ ಮತ್ತು ಪ್ರೋಟೀನ್ ಆಹಾರದಿಂದ 85 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇವರ ಸಾಹಸಕ್ಕೆ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

22 ವರ್ಷದ ಸೋಭಿಕ್ ಸಾಹು ಈ ಬಗ್ಗೆ ಇನ್ಸ್ಟಾಗ್ರಾಮ್​​ನಲ್ಲಿ ವಿಡಿಯೋವೊಂದು ಹಂಚಿಕೊಂಡು ಹೀಗೆ ವಿವರಿಸಿದ್ದಾರೆ. “ನನ್ನ ದೇಹಕ್ಕಿಂತ ಹೃದಯವೇ ಭಾರವಾಗಿತ್ತು. ಅನಾರೋಗ್ಯಕರ ಆಹಾರ ಪದ್ಧತಿ, ಅಧಿಕ ರಕ್ತದೊತ್ತಡ, ಟೈಪ್ 1 ಮಧುಮೇಹ, ಆಸ್ತಮಾ, ಸಂಧಿವಾತದಿಂದ ಬಳಲುತ್ತಿದ್ದೆ, ಇದು ನನ್ನ ಅತ್ಯಂತ ನೋವಿನ ಕ್ಷಣ, ತಾಯಿಯ ಅಂತ್ಯಕ್ರಿಯೆಯ ಸಮಯದಲ್ಲಿ ನನ್ನ ದೇಹದ ಗಾತ್ರದಿಂದ ಅಮ್ಮ ಎಲ್ಲ ಕಾರ್ಯವನ್ನು ಮಾಡಲು ಆಗಿರಲಿಲ್ಲ. ಈ ಸಮಯದಲ್ಲಿ ಪಿಪಿಇ ಸೂಟ್ ಕೂಡ ಧರಿಸಲಾಗುತ್ತಿರಲಿಲ್ಲ, ಅದು ತುಂಬಾ ಚಿಕ್ಕದಾಗಿತ್ತು, ತುಂಬಾ ಬಿಗಿಯಾಗಿತ್ತು. ಅದರೂ ಅಮ್ಮನ ಕಾರ್ಯದಲ್ಲಿ ಭಾಗಿಯಾಗಲು ಹಠ ಮಾಡಿದೆ. ಅಂದು ನಾನು ಅಮ್ಮನ ಮೃತದೇಹದ ಮುಂದೆ ಒಂದು ಪ್ರತಿಜ್ಞೆ ಮಾಡಿದೆ. ನಾನು ಹೀಗೆ ಇರುವುದಿಲ್ಲ ಖಂಡಿತ ಬದಲಾವಣೆ ಮಾಡಿಕೊಳ್ಳುತ್ತೇನೆ ಎಂದು. ಅಲ್ಲಿಂದ ಹಂತ ಹಂತವಾಗಿ ಎಲ್ಲವನ್ನು ಬದಲಾವಣೆ ಮಾಡಿಕೊಂಡೆ, ದಿನನಿತ್ಯ ದೇಹವನ್ನು ದಂಡಿಸಿದೆ, ಶ್ರಮಿಸಿದೆ. ಅದರ ಪ್ರತಿಫಲದಿಂದ ಇಂದು ನನ್ನ ದೇಹದ ತೂಕ 75 ಕೆ.ಜಿ. ಆಗಿದೆ ಎಂದು ಹೇಳಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

View this post on Instagram

Shared post on

ಇದನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ಈ ಹೋರಾಟ ನನ್ನ ತಾಯಿಯ ಗೌರವ, ಇದು ತೂಕ ಇಳಿಸುವ ಪ್ರಯತ್ನವಲ್ಲ. ಇದು ನನ್ನ ಪುನರ್ಜನ್ಮ ಎಂದು ಹೇಳಿದ್ದಾರೆ. ತೂಕ ಇಳಿಸಿಕೊಳ್ಳುವುದು ಒಂದು ಸಣ್ಣ ಪಯಣವಲ್ಲ, ಅದು ನನ್ನ ತಾಯಿ ನನಗೆ ಕಳಿಸಿದ ಪಾಠ. ನಾನು ಫಿಟ್ ಆಗಿರುವುದನ್ನು ನೋಡುವುದು ಅವರ ಕೊನೆಯ ಆಸೆ ಆಗಿತ್ತು. ಇಂದು ನಾನು 85 ಕೆಜಿ ಕಡಿಮೆ ಆಗಿದ್ದೇನೆ, 160 ಕೆಜಿಯಿಂದ ನನ್ನ ಪ್ರಯಾಣವನ್ನು ಪ್ರಾರಂಭಿಸಿ 75 ಕೆಜಿ ದೇಹದ ತೂಕಕ್ಕೆ ಇಳಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಪಾಕಿಸ್ತಾನದ ಖ್ಯಾತ ಕಂಟೆಂಟ್​ ಕ್ರಿಯೆಟರ್

ಇವರ ಈ ವಿಡಿಯೋ ನೋಡಿ ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಲವು ನೆಟ್ಟಿಗರು ತೀವ್ರವಾಗಿ ಭಾವುಕರಾಗಿ, ಪ್ರೀತಿ ಮತ್ತು ಮೆಚ್ಚುಗೆಯಿಂದ ಕಾಮೆಂಟ್‌ ಮಾಡಿದ್ದಾರೆ. ಒಬ್ಬ ಒಳ್ಳೆಯ ವ್ಯಕ್ತಿ ನಿರ್ಮಾಣ ಆಗುವ ಮೊದಲೇ ಆಕೆ ಹೋದಳು ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ಇದು ತುಂಬಾ ಸ್ಪೂರ್ತಿದಾಯಕ ವಿಚಾರ ಗೆಳೆಯ, ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಎಂದು ಮತ್ತೊಬ್ಬರು ಕಮೆಂಟ್​​​ ಮಾಡಿದ್ದಾರೆ. ಇದು ನಾನು ನೋಡಿದ ಅತ್ಯುತ್ತಮ ರೂಪಾಂತರಗಳಲ್ಲಿ ಒಂದಾಗಿದೆ. ತುಂಬಾ ಹೆಮ್ಮೆಯಾಗುತ್ತಿದೆ ಗೆಳೆಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:24 pm, Mon, 8 December 25

ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್
‘ಕ್ಷಣ ಕ್ಷಣಕ್ಕೂ ಕೊಡ್ತೀವಿ, ತಗೋತಾ ಇರ್ಬೇಕು’; ಗಿಲ್ಲಿಗೆ ಅಶ್ವಿನಿ ಚಾಲೆಂಜ್