“ಕ್ಷಮಿಸಿ, ನಾನು ಕೂಡ ಮನೆಗೆ ಹೋಗಬೇಕು” ಪ್ರಯಾಣಿಕರ ಬಳಿ ಕ್ಷಮೆ ಕೇಳಿದ ಇಂಡಿಗೋ ಪೈಲಟ್
ಇಂಡಿಗೋ ಏರ್‌ಲೈನ್ಸ್ ಇತ್ತೀಚೆಗೆ ವಿಮಾನ ವಿಳಂಬ, ಬ್ಯಾಗೇಜ್ ಸಮಸ್ಯೆಗಳಿಂದ ದೊಡ್ಡ ಬಿಕ್ಕಟ್ಟು ಎದುರಿಸುತ್ತಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ನಡುವೆ, ಪೈಲಟ್ ಪ್ರದೀಪ್ ಕೃಷ್ಣನ್ ಪ್ರಯಾಣಿಕರಿಗೆ ಕ್ಷಮೆ ಕೇಳಿ, ಅವರ ತಾಳ್ಮೆಗೆ ಧನ್ಯವಾದ ಅರ್ಪಿಸಿದ ವಿಡಿಯೋ ವೈರಲ್ ಆಗಿದೆ. ಇದು ಇಂಡಿಗೋ ಬಿಕ್ಕಟ್ಟಿನ ಮಧ್ಯೆಯೂ ಸಹಾನುಭೂತಿ ಮೂಡಿಸಿದೆ.

ಭಾರತದ ಅತಿದೊಡ್ಡ ಏರ್‌ಲೈನ್ಸ್ ಸಂಸ್ಥೆ ಆಗಿರುವ ಇಂಡಿಗೋ (IndiGo crisis) ಕೆಲವು ದಿನಗಳಿಂದ ವಿಮಾನಯಾನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದ ದೇಶದ ಅನೇಕ ವಿಮಾನಯಾನ ಪ್ರಯಾಣಿಕರು ತೊಂದರೆಯನ್ನು ಅನುಭವಿಸಿದ್ದರು. ವಿಮಾನ ನಿಲ್ದಾಣದಲ್ಲಿ ಜನರಿಂದ ತುಂಬಿ ಮಾರ್ಕೆಟ್ನಂತೆ ಆಗಿತ್ತು. ಕೆಲವರು ತಮ್ಮ ಬ್ಯಾಗ್ ಸಿಗದೇ ಒದ್ದಾಡಿದ್ದರು. ದಿನದಿಂದ ದಿನಕ್ಕೆ ಇಂಡಿಗೋ ವಿಮಾನಯಾನ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ಇದರ ನಡುವೆ ಇಂಡಿಗೋ ವಿಮಾನದ ಪೈಲಟ್ ಒಬ್ಬರ ವಿಡಿಯೋ ವೈರಲ್ ಆಗಿದೆ. ಇಂಡಿಗೋದ ಈ ಅವ್ಯವಸ್ಥೆ ನಡುವೆ ಈ ವಿಮಾನದ ಪೈಲಟ್ ಒಬ್ಬರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಪೈಲಟ್ ಪ್ರದೀಪ್ ಕೃಷ್ಣನ್ ಅವರು ವಿಮಾನದಲ್ಲಿದ್ದ ಪ್ರಯಾಣಿಕರ ಬಳಿ ಕ್ಷಮಿಸಿ ಎಂದು ಕೇಳಿದ್ದಾರೆ. ನಿಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇವೆ. ನೀವು ತಾಳ್ಮೆಯಿಂದ ನಮ್ಮ ಜತೆಗೆ ವರ್ತಿಸಿದ್ದು, ನಮಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.
ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. “ಕ್ಷಮಿಸಿ! ನಿಮ್ಮ ವಿಮಾನ ಪ್ರಯಾಣದಲ್ಲಿ ಹಲವು ಸಮಸ್ಯೆಗಳು ಆಗಿದೆ. ಅದನ್ನು ತಾಳ್ಮೆಯಿಂದು ಎದುರಿಸಿದ್ದೀರಾ, ನಾನು ನಿಮಗೆ ಭರವಸೆ ನೀಡುತ್ತೇನೆ. ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ. ನಿಮ್ಮ ಊರಿಗೆ ಸುರಕ್ಷಿತವಾಗಿ ತಲುಪಿಸುತ್ತೇವೆ. ನಾವು ಕೂಡ ಮನೆಗೆ ಹೋಗಲು ಬಯಸುತ್ತಿದ್ದೇವೆ. ಕಳೆದ ಕೆಲವು ದಿನಗಳಿಂದ ಬಹಳಷ್ಟು ಸಮಸ್ಯೆಗಳು ಆಗುತ್ತಿದೆ. ನಾವು ಯಾವುದೇ ಮುಷ್ಕರ ಮಾಡಿಲ್ಲ. ಈ ಬಗ್ಗೆ ನಮಗೂ ನೋವಿದೆ. ಈ ಹಿಂದೆ ಕೊಯಮತ್ತೂರಿಗೆ ನಮ್ಮ ವಿಮಾನ ತುಂಬಾ ತಡವಾಗಿ ಹೋಗಿತ್ತು. ಅದನ್ನು ನಾನು ವಿಡಿಯೋದಲ್ಲಿ ನೋಡಿದ್ದೇನೆ. ಆದರೆ ಕೊಯಮತ್ತೂರಿನ ಪ್ರಯಾಣಿಕರು ತುಂಬಾ ತಾಳ್ಮೆಯಿಂದ ವರ್ತಿಸಿದ್ದರು. ಈಗ ನಮ್ಮ ತಂಡ ಈ ಎಲ್ಲ ಬಿಕ್ಕಟಿನಿಂದ ಸುಧಾರಿಸಿಕೊಳ್ಳುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಮ್ಮನ ಮೃತದೇಹದ ಮುಂದೆ ಪ್ರತಿಜ್ಞೆ: 160 ಕೆಜಿಯಿಂದ 85 ಕೆಜಿಗೆ ತೂಕ ಇಳಿಸಿಕೊಂಡ ಯುವಕ
ವೈರಲ್ ವಿಡಿಯೋ :
View this post on Instagram
ಈ ಪೋಸ್ಟ್ ಬಗ್ಗೆ ನೆಟ್ಟಿಗರು ಹೇಳಿದ್ದೇನು?
ದಯೆಯಿಂದ, ತಾಳ್ಳೆಯಿಂದ, ಗೌರವದಿಂದ ನಡೆದುಕೊಳ್ಳುವುದೇ ನಿಜವಾದ ಮನುಷ್ಯತ್ವ ಎಂದು ಒಬ್ಬರು ಹೇಳಿದ್ದಾರೆ. ನೀವು ವಿಶ್ರಾಂತಿ ಪಡೆಯಿರಿ ಸರ್ ಎಂದು ಪೈಲಟ್ಗೆ ಮತ್ತೊಬ್ಬರು ಹೇಳಿದ್ದಾರೆ. ಇದೊಂದು ಒಳ್ಳೆಯ ಕೆಲಸ ಪ್ರಯಾಣಿಕರ ಜತೆಗೆ ಇಂತಹ ಬೆಂಬಲ ಸೂಚಿಸಿದಕ್ಕೆ ನಿಮಗೆ ಧನ್ಯವಾದಗಳು ಎಂದು ಮತ್ತೊಬ್ಬರು ಹೇಳಿದ್ದಾರೆ. ಜೀವನದಲ್ಲಿ ಇಂತಹ ಕಠಿಣ ಸಮಯ ಬರಲು ಯಾರೂ ಬಯಸುವುದಿಲ್ಲ, ವಿಮಾನಗಳು ಸಂಸ್ಥೆ, ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಆಗಿರುವ ಗೊಂದಲಗಳು ಅದಷ್ಟು ಬೇಗ ಪರಿಹಾರ ಆಗಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




