
ಅಮೆಜಾನ್ ಡೆಲಿವರಿ ವ್ಯಾನ್ನಿಂದ ಹೊರಗಿಳಿದ ಯುವತಿಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಮೆಜಾನ್ ಡೆಲಿವರಿ ಬಾಯ್ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಮೂಲತಃ ಟಿಕ್ ಟಾಕ್ನಲ್ಲಿ ಪೋಸ್ಟ್ ಮಾಡಲಾದ 11 ಸೆಕೆಂಡುಗಳ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 11.3 ಮಿಲಿಯನ್ ವೀಕ್ಷಣಿಗಳನ್ನು ಗಳಿಸಿಕೊಂಡಿದ್ದು, ವ್ಯಾನ್ನಿಂದ ಯುವತಿ ಇಳಿಯುತ್ತಿರುವುದು ರಹಸ್ಯವೆನಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು ಅಮೆಜಾನ್ ಡೆಲಿವರಿ ಬಾಯ್ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ವಿಡಿಯೊದಲ್ಲಿ ಗಮನಿಸುವಂತೆ ರಸ್ತೆ ಮಧ್ಯದಲ್ಲಿ ಅಮೆಜಾನ್ ಡೆಲಿವರಿ ವ್ಯಾನ್ ನಿಂತಿದೆ. ಡೆಲಿವರಿ ಬಾಯ್ ವ್ಯಾನ್ನ ಹಿಂಬದಿಯ ಬಾಗಿಲನ್ನು ತೆಗೆದುತ್ತಿದ್ದಂತೆಯೇ ಯುವತಿಯೊಬ್ಬಳು ಕೆಳಗಿಳಿದು ಮೊಬೈಲ್ ನೋಡುತ್ತಾ ಮುಂದೇ ಸಾಗಿದ್ದಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವಿಡಿಯೊ ಫುಲ್ ವೈರಲ್ ಆಗಿದೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಅಮೆಜಾನ್, ಚಾಲಕನು ಇನ್ನು ಮುಂದೆ ಕಂಪನಿಯೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಅಮೆಜಾನ್ ವಸ್ತು ವಿತರಣಾ ವ್ಯಾನ್ಗಳಲ್ಲಿ ಇತರನ್ನು ಕರೆದೊಯ್ಯುವಂತಿಲ್ಲ ಎಂದು ಕಂಪನಿ ಉತ್ತರಿಸಿದೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು, ನಿಗೂಢ ಮಹಿಳೆ ಮತ್ತು ಅವಳ್ಯಾಕೆ ವ್ಯಾನ್ನಲ್ಲಿದ್ದಳು? ಎಂದು ಪ್ರಶ್ನಿಸಿದ್ದಾರೆ. ಚಾಲಕನು ತನ್ನ ಸ್ನೇಹಿತೆಗೆ ಡ್ರಾಪ್ ನೀಡುತ್ತಿದ್ದಾನೆ ಎಂದು ಕೆಲವರು ಹೇಳಿದ್ದಾರೆ. ಕೆಲವರು ಚಾಲಕನ ಬಗ್ಗೆ ತಮಾಷೆ ಮಾಡಿ ನಕ್ಕಿದ್ದಾರೆ.
ಅಮೆಜಾನ್ ಡೆಲಿವರಿ ವ್ಯಾನ್ ಚಾಲಕರು ಸುದ್ದಿಯಲ್ಲಿರುವುದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆ ಸ್ನಾನ ಮಾಡುವುದನ್ನು ನೋಡಲು ಮಹಿಳೆಯಂತೆ ಉಡುಗೆ ತೊಟ್ಟು ಶೂ ಧರಿಸಿ, ಶೂಗಳಿಗೆ ಪೆನ್ ಕ್ಯಾಮರಾವನ್ನು ಜೋಡಿಸಿದ ಆರೋಪದ ಮೇಲೆ ಅಮೆಜಾನ್ ಚಾಲಕನನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಬಂಧಿಸಲಾಯಿತು. ಮತ್ತೊಂದು ವಿಡಿಯೊದಲ್ಲಿ ಅಮೆಜಾನ್ ಪಾರ್ಸಲ್ಗಳನ್ನು ವ್ಯಕ್ತಿ ಬಿಸಾಡಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಫುಲ್ ವೈರಲ್ ಆಗಿತ್ತು.
ಇದನ್ನೂ ಓದಿ:
Shocking News: ತಾನೇ ಮುಂದೆ ನಿಂತು ಹೆಂಡತಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಗಂಡ!
Shocking News: ಮಹಿಳೆಯ ಕಿವಿಯೊಳಗೆ ರಾತ್ರಿಯಿಡೀ ವಾಸವಿದ್ದ ಜೇಡರ ಹುಳು; ಅಪರೂಪದ ಕೇಸ್ ಕಂಡು ವೈದ್ಯರಿಗೇ ಶಾಕ್!
Published On - 1:43 pm, Tue, 2 November 21