Jeff Bezos: ಬಾಹ್ಯಾಕಾಶಕ್ಕೆ ಸೈಟ್​ ಸೀಯಿಂಗ್​ಗೆ ಹೊರಟಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್, ನೀವೂ ಜತೆಯಾಗಬಹುದು!

ಚಿಕ್ಕವನಿದ್ದಾಗ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಕನಸು ಕಂಡಿದ್ದೆ. ಆ ಕನಸು ಇಂದು ನನಸಾಗುತ್ತಿದೆ. ನನ್ನ ಸಹೋದರನ ಜತೆ ಇದೇ ಜುಲೈ 20ಕ್ಕೆ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದ್ದೇನೆ ಎಂದು ಸ್ವತಃ ಜೆಫ್ ಬಿಜೋಸ್ ಹಂಚಿಕೊಂಡಿದ್ದಾರೆ.

Jeff Bezos: ಬಾಹ್ಯಾಕಾಶಕ್ಕೆ ಸೈಟ್​ ಸೀಯಿಂಗ್​ಗೆ ಹೊರಟಿದ್ದಾರೆ ಅಮೆಜಾನ್ ಸಂಸ್ಥಾಪಕ  ಜೆಫ್ ಬಿಜೋಸ್, ನೀವೂ ಜತೆಯಾಗಬಹುದು!
ಜೆಫ್ ಬಿಜೊಸ್ (ಸಂಗ್ರಹ ಚಿತ್ರ)
Updated By: Digi Tech Desk

Updated on: Jun 08, 2021 | 9:11 AM

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಓರ್ವರಾದ  ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ಜುಲೈ 20ರಂದು ಸೈಟ್ ಸೀಯಿಂಗ್​ಗೆ ತೆರಳಲಿದ್ದಾರೆ. ಅರೇ! ಆತ ಸೈಟ್ ಸೀಯಿಂಗ್​ಗೆ ಹೋದರೆ ಅದರಲ್ಲೇನು ವಿಶೇಷ ಅಂದಿರಾ? ಹೌದು, ಅದರಲ್ಲೇ ಇದೆ ಗಮ್ಮತ್ತು. ಜೆಫ್ ಬಿಜೋಸ್ ಸೈಟ್ ಸೀಯಿಂಗ್​ಗೆ ಹೋಗುತ್ತಿರುವುದು ಯಾವುದೋ ಊರಿಗಲ್ಲ. ಬಾಹ್ಯಾಕಾಶಕ್ಕೆ! ಜೆಫ್ ಬಿಜೋಸ್ ಮತ್ತು ಅವರ ಸಹೋದರ ಇನ್ನೂ ಇಬ್ಬರು ಪ್ರಯಾಣಿಕರ ಜತೆ ಬಾಹ್ಯಾಕಾಶ ಯಾನ ಮಾಡಲಿದ್ದಾರೆ. ನ್ಯೂ ಶೆಫರ್ಡ್ ಎಂಬುದು ಬಾಹ್ಯಾಕಾಶ ಯಾನದ ವಾಹನವಾಗಿದ್ದು, ತನ್ನ ಮೊದಲ ಬಾಹ್ಯಾಕಾಶ ಪ್ರಯಾಣ ಬೆಳೆಸಲಿದೆ. ಅಂದಹಾಗೆ ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ನಡುವಿನ ಕಾಲ್ಪನಿಕ ಗಡಿಯಾದ ಕರ್ಮನ್ ರೇಖೆಯಲ್ಲಿ ಕಳೆಯುವ 4 ನಿಮಿಷವೂ ಒಳಗೊಂಡಂತೆ ಈ ಬಾಹ್ಯಾಕಾಶ ಪ್ರಯಾಣದ ಒಟ್ಟು ಅವಧಿ ಕೇವಲ 10 ನಿಮಿಷ ಮಾತ್ರ.

ಸುಮಾರು 100 ಮೈಲುಗಳಿಗಿಂತ ಹೆಚ್ಚು ದೂರ ಪ್ರಯಾಣ ಮಾಡಬಲ್ಲ ನ್ಯೂ ಶೆಫರ್ಡ್ ಬಾಹ್ಯಾಕಾಶ ಯಾನದ ವಾಹನವು ಆರು ಪ್ರಯಾಣಿಕರನ್ನು ಕರೆದೊಯ್ಯಬಹುದು. ಚಿಕ್ಕವನಿದ್ದಾಗ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಕನಸು ಕಂಡಿದ್ದೆ. ಆ ಕನಸು ಇಂದು ನನಸಾಗುತ್ತಿದೆ. ನನ್ನ ಸಹೋದರನ ಜತೆ ಇದೇ ಜುಲೈ 20ಕ್ಕೆ ಬಾಹ್ಯಾಕಾಶ ಯಾನ ಕೈಗೊಳ್ಳುತ್ತಿದ್ದೇನೆ ಎಂದು ಸ್ವತಃ ಜೆಫ್ ಬಿಜೋಸ್ ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶದಿಂದ ಭೂಮಿಯನ್ನು ವೀಕ್ಷಿಸುವುದು ಒಂದು ಅದಮ್ಯ ಅನುಭವವಾಗಲಿದೆ. ಏಕೆಂದರೆ ಅದು ನನ್ನ ಬಾಲ್ಯದ ಕನಸೂ ಹೌದು ಎಂಬುದು ಈ ಪ್ರವಾಸದ ಬಗ್ಗೆ ಅವರ ಒಟ್ಟಾರೆ ಅಭಿಪ್ರಾಯ. ನ್ಯೂ ಶೆಫರ್ಡ್ ವಾಹನದಲ್ಲಿ ಒಂದು ಸೀಟ್​ಗಾಗಿ 2.8 ಮಿಲಿಯನ್ ಡಾಲರ್​ ಹಣವನ್ನು ಬಿಡ್ ಮಾಡಿದೆಯಂತೆ. ಇನ್ನೂ ಬಿಡ್ ಮಾಡಲು ಅವಕಾಶ ಇದ್ದು, ಆನ್​ಲೈನ್ ಮೂಲಕ ನೀವೂ ಬಿಡ್ ಮಾಡಿ ಬಾಹ್ಯಾಕಾಶ ಪ್ರಯಾಣ ಮಾಡಬಹುದು. ಪ್ರಯತ್ನಿಸಿ!

ಇದನ್ನೂ ಓದಿ: PM Narendra Modi: ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ

Central Vista ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಸೆಂಟ್ರಲ್ ವಿಸ್ಟಾ ಯೋಜನೆಗೆ ₹20,000 ಕೋಟಿ?: ನಿಜ ಸಂಗತಿ ವಿವರಿಸಿದ ಕೇಂದ್ರ

Published On - 8:59 am, Tue, 8 June 21