
ಅಮೆರಿಕ, ಜುಲೈ 10: ದಿನನಿತ್ಯ ಗುರುತು ಪರಿಚಯವಿಲ್ಲದ ವ್ಯಕ್ತಿಗಳು ಎದುರಾಗುತ್ತಾರೆ. ಹೀಗೆ ಸಿಕ್ಕ ವ್ಯಕ್ತಿಗಳಲ್ಲಿ ಕೆಲವರು ನೋಡುವುದಕ್ಕೆ ಚಂದ ಇರುತ್ತಾರೆ. ಹೀಗಿರುವಾಗ ಮತ್ತೆ ಮತ್ತೆ ಅವರತ್ತ ಕಣ್ಣು ಹೋಗುವುದು ಸಹಜ ಕೂಡ. ಸುಂದರವಾದ ವ್ಯಕ್ತಿಗಳು ಕಂಡಾಗ ಎಷ್ಟು ಬ್ಯೂಟಿಫುಲ್ ಆಗಿದ್ದಾರೆಂದು ಮನಸ್ಸಿನಲ್ಲಿ ಹೇಳ್ತೇವೆ. ಆದರೆ ಕೆಲವರು ಒಂದು ಹೆಜ್ಜೆ ಮುಂದೆ ನೀವು ತುಂಬಾ ಸುಂದರವಾಗಿದ್ದೀರಾ ಎಂದು ಕಾಂಪ್ಲಿಮೆಂಟ್ (compliment) ಕೊಡ್ತಾರೆ. ಆದರೆ ಇಲ್ಲೊಬ್ಬ ಕೆಫೆ ಸಿಬ್ಬಂದಿ ಗ್ರಾಹಕನ ಪತ್ನಿಗೆ ಕಾಂಪ್ಲಿಮೆಂಟ್ ಕೊಡಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಕೆಫೆ ಸಿಬ್ಬಂದಿಯೂ ತನ್ನ ಪತ್ನಿಗೆ ಬ್ಯೂಟಿಫುಲ್ ಎಂದಿದ್ದಕ್ಕೆ ಪತಿಯೂ ಈತನ ಮೇಲೆ ಗರಂ ಆಗಿದ್ದು, ಜಗಳಕ್ಕೆ ಇಳಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ (social media) ಈ ವಿಡಿಯೋ ವೈರಲ್ ಆಗಿದೆ. ಈ ಘಟನೆಯೂ ಅಮೆರಿಕದ ಕನ್ಸಾಸ್ ನಲ್ಲಿ (Kansas of America) ನಡೆದಿದೆ ಎನ್ನಲಾಗಿದೆ.
the_shortreview ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಕೆಫೆ ಸಿಬ್ಬಂದಿಯೊಬ್ಬರು ಗ್ರಾಹಕನ ಪತ್ನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗನ್ನುತ್ತಿದ್ದಂತೆ ಗ್ರಾಹಕನು ವಿರುದ್ಧ ಗರಂ ಆಗಿದ್ದು ನೀವು ಏಕೆ ನನ್ನ ಹೆಂಡ್ತಿಗೆ ಬ್ಯೂಟಿಫುಲ್ ಎಂದು ಹೇಳಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಈ ವೇಳೆಯಲ್ಲಿ ಸಿಬ್ಬಂದಿ ಮಾತ್ರ ಏನು ಮಾತನಾಡದೇ ಸುಮ್ಮನೆ ನಿಂತುಕೊಂಡಿದ್ದು, ತಾನು ಹೀಗೆ ಮಾತನಾಡಿದ್ದಕ್ಕೆ ಕ್ಷಮಿಸಿ ಎಂದು ಕೇಳಿದ್ದಾನೆ. ಆದರೆ ಕೋಪಗೊಂಡ ವ್ಯಕ್ತಿಯೂ ತನ್ನ ಏರುಧ್ವನಿಯಲ್ಲಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ : Video : 7 ದಿನಕ್ಕಾಗುವಷ್ಟು ಅಡುಗೆಯನ್ನು ಒಂದೇ ದಿನ ಮಾಡಿದ ಮಹಿಳೆ, ಈಕೆ ಸೋಮಾರಿ ಎಂದ ಜನ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರೊಬ್ಬರು, ಈತನಿಗೆ ಪತಿಯನ್ನು ಯಾರಾದ್ರೂ ಹೊಗಳಿದ್ರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ ಎಂದಿದ್ದಾರೆ. ಇನ್ನೊಬ್ಬರು, ದಯವಿಟ್ಟು ಯಾರಾದ್ರೂ ಈತನನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈತನಿಗೆ ಖಂಡಿತ ಪತ್ನಿ ಡಿವೋರ್ಸ್ ನೀಡುತ್ತಾಳೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:22 pm, Thu, 10 July 25