Deep Sea: ನೀವು ನೀರಿನಾಳದೊಳಗೆ ಎಷ್ಟು ನಿಮಿಷಗಳಿರಬಹುದು? ಹೋಗಲಿ ಸುರಕ್ಷಾ ಸಾಧನಗಳನ್ನು ಧರಿಸಿಯೇ ಎಷ್ಟು ಗಂಟೆ ಇರಬಹುದು? ಅರ್ಧ ಗಂಟೆ, ಒಂದು ಗಂಟೆ? ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಅಮೆರಿಕದ ಡಾ. ಜೋಸೆಫ್ ಡಿಟುರಿ 74ದಿನಗಳ ಕಾಲ ನೀರಿನಾಳದೊಳಗಿದ್ದು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 100 ದಿನಗಳ ಕಾಲ ನೀರಿನಾಳದೊಳಗೆ ಇರಬೇಕು ಎಂದು ಈ ಮೊದಲು ಅವರು ಅಂದುಕೊಂಡಿದ್ದರು. ಆದರೆ ಸಾಧ್ಯವಾಗಿದ್ದು 74 ದಿನಗಳು. ಆದರೂ ಜೋಸೆಫ್ ಇಷ್ಟಕ್ಕೇ ಸುಮ್ಮನಾಗಿಲ್ಲ.
ಫ್ಲೋರಿಡಾದ ಕೀ ಲಾರ್ಗೊದಲ್ಲಿರುವ ಜಲಾವೃತ ಪ್ರದೇಶದ ಆಳದಲ್ಲಿ ಇವರು ವಾಸವಾಗಿದ್ದಾರೆ. ಅವರ ಈ ಸಾಹಸದ ವಿಡಿಯೋ ಮತ್ತು ಮಾಹಿತಿಯನ್ನು ಅವರ ಇನ್ಸ್ಟಾಗ್ರಾಂ ಪುಟದಲ್ಲಿ ನೋಡಬಹುದಾಗಿದೆ. ಅಲ್ಲದೆ ಈ ಮೇಲಿನ ವಿಡಿಯೋದಲ್ಲಿ ಅವರು ತಮ್ಮ ಈ ಸಾಹಸ ಸಂಶೋಧನೆಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : Viral Video : ‘ಮೂನ್ವಾಕ್’; ನೀರಿನಾಳದಲ್ಲಿ ತಲೆಕೆಳಗಾಗಿ ನಡೆಯುವ ಈ ಮನುಷ್ಯ
‘ನನ್ನ ಕುತೂಹಲ ಮನೋಭಾವವೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. 73 ದಿನಗಳ ಕಾಲ ನಾನು ನೀರಿನಾಳದಲ್ಲಿ ವಾಸಿಸಿದೆ. ಇನ್ನೊಂದು ದಿನ ಕಳೆದರೆ 74 ದಿನಗಳಾಗುತ್ತವೆ. ನನ್ನ ಗುರಿ, ಯುವಪೀಳಿಗೆಗೆ ಸ್ಫೂರ್ತಿಯಾಗಿರಬೇಕೆನ್ನುವುದು ಮಾತ್ರವಲ್ಲ. ಸಮುದ್ರದ ಆಳ, ಅಲ್ಲಿಯ ಪರಿಸರ ಮತ್ತು ಜೀವಿಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ಜಗತ್ತಿನ ವಿಜ್ಞಾನಿಗಳಿಗೆ ನನ್ನ ಈ ಸಾಹಸ ಮೈಲಿಗಲ್ಲಾಗಬೇಕು. ಈ ನನ್ನ ಯಾನ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಇನ್ನೂ 23 ದಿನಗಳು ಬಾಕಿ ಇವೆ.‘ ಎಂದಿದ್ದಾರೆ.
ಅನೇಕರು ಈ ವಿಡಿಯೋಗೆ ಪ್ರತಿಕ್ರಯಿಸಿದ್ಧಾರೆ. ಡಾಕ್ಟರ್ ನೀವು ಸಮುದ್ರದಾಳದಲ್ಲಿ ಉಣ್ಣಲು ತಿನ್ನಲು ಮತ್ತು ನೀರು ಕುಡಿಯಲು ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ ಎಂದು ಹಲವಾರು ಜನ ಕೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಜೋಸೆಫ್, ಯೂ ಟ್ಯೂಬ್ನಲ್ಲಿ ನನ್ನ ಚಾನೆಲ್ ನೋಡಿ, ಅದರಲ್ಲಿ ನಿಮಗೆ ಬೇಕಾದ ಎಲ್ಲ ಮಾಹಿತಿಯೂ ಇದೆ ಎಂದಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:05 pm, Thu, 18 May 23