Viral Video: ಅಮೆರಿಕ: ‘ಅಂತ್ಯಕ್ರಿಯೆ’ ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ

|

Updated on: Sep 29, 2023 | 3:52 PM

Funeral Theme : ಮಕ್ಕಳುರಹಿತ ಜೀವನಕ್ಕೆ ವಿದಾಯ ಹೇಳಲು 'ಅಂತ್ಯಕ್ರಿಯೆ' ಥೀಮ್​ನಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದೆ. 23ನೇ ವಯಸ್ಸಿನಲ್ಲಿ ನನ್ನ ಬದುಕು ಗಂಭೀರವಾಗಿ ತಿರುವನ್ನು ಪಡೆದುಕೊಂಡಿದೆ. ಇನ್ನು ಈ ಥೀಮ್​ ಅನ್ನು ಕೆಲವರು ವಿರೋಧಿಸಿದ್ದೀರಿ. ಆದರೆ ಇದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ' ಎಂದು 23 ವರ್ಷದ ಚೆರಿಡಾನ್​ ಹೇಳಿದ್ಧಾಳೆ.

Viral Video: ಅಮೆರಿಕ: ಅಂತ್ಯಕ್ರಿಯೆ ಪರಿಕಲ್ಪನೆಯಡಿ ಪ್ರೆಗ್ನೆನ್ಸಿ ಶೂಟ್ ಮಾಡಿಸಿಕೊಂಡ ಮಹಿಳೆ
ಅಮೆರಿಕದ ಚೆರಿಲಾನ್ ಲಾಗ್ಸಡಾನ್ ಅಂತ್ಯಕ್ರಿಯೆ ಥೀಮ್​ನಡಿ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ.
Follow us on

America: ಬದುಕಿನ ಒಂದೊಂದು ಸಂಭ್ರಮವನ್ನೂ ದಾಖಲಾಗಿಸಲು ಕಾರಣಗಳನ್ನು ಹುಡುಕುವ ಕಾಲವಿದು. ಏನೇ ಮಾಡಿದರೂ ಅದು ವಿಶಿಷ್ಟವಾಗಿರಬೇಕು, ಈತನಕ ಇದನ್ನು ಯಾರೂ ಮಾಡಿರಬಾರದು ಎಂಬ ಆಸೆಯಲ್ಲಿ ಕೆಲವೊಮ್ಮೆ ಆಲೋಚನೆಗಳು ಸಾಮಾನ್ಯವಾಗಿ ಎಲ್ಲರಲ್ಲಿಯೂ ಇರುತ್ತವೆ. ಆಲೋಚನೆಗಳನ್ನು ತಡೆಯಬಹುದು, ಆದರೆ ಅವು ಕಾರ್ಯಗತವಾದರೆ? ಆದರೆ ಏನು, ಇಡೀ ಜಗತ್ತೇ ಹೀಗೆ ಅವರೆಡೆ ತಿರುಗಿ ನೋಡುತ್ತದೆ. ಅಮೆರಿಕದ ಈ ಮಹಿಳೆ ಪ್ರೆಗ್ನೆನ್ಸಿ ಫೋಟೋಶೂಟ್​ಗಾಗಿ (Pregnancy Photoshoot) ಆಯ್ಕೆ ಮಾಡಿಕೊಂಡ ಥೀಮ್ ‘ಅಂತ್ಯಕ್ರಿಯೆ’ (Funeral-Themed). 23 ವರ್ಷದ ಚೆರಿಲಾನ್  ಲಾಗ್ಸಡಾನ್​ ‘ಕಿಡ್ ಫ್ರೀ ಲೈಫ್​’ಗೆ ಹೀಗೆ ವಿದಾಯ ಹೇಳಿದ್ದಾಳೆ. ಕಪ್ಪು ಗೌನ್​ ಮತ್ತು ಮುಖಪರದೆ ಧರಿಸಿ ತನ್ನ ಗರ್ಭಧಾರಣೆಯ ವಿಷಯವನ್ನು ಘೋಷಿಸಿದ್ದಾಳೆ.

ಇದನ್ನೂ ಓದಿ : Viral Video: ‘ಒಂದು ಕಾಲು ಕಳೆದುಕೊಂಡ ನನ್ನೊಂದಿಗೆ ವರ್ಷಾ ಕಲ್ಲಿನಂತೆ ನಿಂತಳು’ 

ಕೆಂಟುಕಿಯ ಚೆರಿಡಾನ್, ‘ಮಕ್ಕಳುರಹಿತ ಜೀವನಕ್ಕೆ ವಿದಾಯ. 23ನೇ ವಯಸ್ಸಿನಲ್ಲಿ ನನ್ನ ಬದುಕು ಗಂಭೀರವಾಗಿ ತಿರುವನ್ನು ಪಡೆದುಕೊಂಡಿದೆ. ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಲು ಉತ್ಸುಕಳಾಗಿದ್ದೇನೆ.’ ಎಂಬ ಕ್ಯಾಪ್ಷನ್​ನಡಿ ತನ್ನ ಫೇಸ್​ಬುಕ್ ಖಾತೆಯಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಂತ್ಯಕ್ರಿಯೆ ಥೀಮಿನಡಿ ಪ್ರೆಗ್ನೆನ್ಸಿ ಫೋಟೋ ಶೂಟ್​

ಅನೇಕರು ಈಕೆಯನ್ನು ಅಭಿನಂದಿಸಿ ಮುಂದಿನ ಪ್ರಯಾಣಕ್ಕೆ ಶುಭ ಕೋರಿದ್ದಾರೆ. ಈ ಪರಿಕಲ್ಪನೆ ತುಂಬಾ ಮುದ್ಧಾಗಿದೆ ಮತ್ತು  ಉಲ್ಲಾಸದಾಯಕವಾಗಿದೆ. ಅಮ್ಮನ ಜಗತ್ತಿಗೆ ಸ್ವಾಗತ ಎಂದಿದ್ದಾರೆ ಅನೇಕರು. ನನ್ನ ಈ ಆಶಯವನ್ನು ಮತ್ತು ಥೀಮ್​ ಅನ್ನು ವಿರೋಧಿಸಿ ಅನೇಕರು ಅಸಂಬದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರೆಲ್ಲರಿಗೂ ಪ್ರತಿಕ್ರಿಯಿಸಲು ಸಮಯವಿಲ್ಲ. ಇದನ್ನು ಆದಷ್ಟು ಲಘುವಾಗಿ ಪರಿಗಣಿಸಿ ಎಂದಿದ್ದಾಳೆ ಚೆರಿಡಾನ್​.

ಇದನ್ನೂ ಓದಿ : Viral Video: ಹುಲಿಗೆ ನೆಗಡಿಯಾಗಿದೆ; ಸೀನುವಾಗಲೂ ಇದು ಎಷ್ಟು ಮುದ್ದು ಎಂದ ನೆಟ್ಟಿಗರು

ಅಕ್ಟೋಬರ್ 8 ರಂದು ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುವ ಮಗುವಿನ ಲಿಂಗ ಬಹಿರಂಗಪಡಿಸುವಿಕೆಯನ್ನು (Gender Revealing Party) ಆಚರಿಸುವುದಾಗಿ ಆಕೆ ತಿಳಿಸಿದ್ದಾಳೆ. ಇಷ್ಟೇ ಅಲ್ಲ ಈಕೆ ಶೀಘ್ರದಲ್ಲೇ ಕೆಂಟುಕಿ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿಯನ್ನೂ ಪಡೆಯಲಿದ್ಧಾಳೆ. 15,000 ಜನರು ಈ ಪೋಸ್ಟ್​ಗೆ ಲೈಕ್ ಮಾಡಿದ್ದು 12,000 ಜನರು ಇದನ್ನು ಹಂಚಿಕೊಂಡಿದ್ದಾರೆ. 104 ಜನರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:46 pm, Fri, 29 September 23