ಅದೆಷ್ಟೋ ಜನರ ಪ್ರತಿಭೆಯ ವೇದಿಕೆಯಾಗಿ ಸಾಮಾಜಿಕ ಜಾಲತಾಣವಿದೆ. ಅದರಲ್ಲಿಯೂ ಈ ಕೊವಿಡ್ ಸಾಂಕ್ರಾಮಿಕದ ಸಮಯದಲ್ಲಿ ಸಾಮಾಜಿಕ ಜಾಲತಾಣ ಸಹಾಯಕ ವೇದಿಕೆಯಾಗಿತ್ತು ಎಂದರೆ ತಪ್ಪಾಗಲಾರದು. ತಮ್ಮ ಕಷ್ಟಗಳನ್ನು ಜತೆಗೆ ಬೇಕಾದ ಸಹಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಜನರು ಹೇಳಿಕೊಂಡರು. ಇದೀಗ ಅಮೃತ ಸರದ 80 ವರ್ಷದ ಮಹಿಳೆಗೆ ಸಹಾಯ ಮಾಡಲು ನೆಟ್ಟಿಗರು ಕೇಳಿಕೊಳ್ಳುತ್ತಿದ್ದಾರೆ. ಕಷ್ಟದ ಸಂದರ್ಭದಲ್ಲಿಯೂ ಛಲ ಬಿಡದೆ 80 ವರ್ಷದಲ್ಲಿಯೂ ವೃದ್ಧೆ ಜ್ಯೂಸ್ ಅಂಗಡಿ ತೆರೆದಿದ್ದಾರೆ. ಆದರೆ ಸಾಕಷ್ಟು ಹಣ ಸಿಗುತ್ತಿಲ್ಲ. ಹಾಗಿರುವಾಗ ವೃದ್ಧೆಗೆ ಸಹಾಯ ಮಾಡಲು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಕ ಒಂದಾಗಿದ್ದಾರೆ.
ಕಳೆದ ವರ್ಷ ಇಂತಹ ಅದೆಷ್ಟೋ ಜನರಿಗೆ ಸಹಾಯ ಮಾಡಲು ನೆಟ್ಟಿಗರು ಒಗ್ಗೂಡಿದ್ದರು. ಕಷ್ಟದ ಪರಿಸ್ಥಿತಿಯಲ್ಲಿ ಇಂಟರ್ನೆಟ್ ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ 80 ವರ್ಷದ ವೃದ್ಧೆ ಜ್ಯೂಸ್ ತಯಾರಿಸುತ್ತಿರುವುದನ್ನು ನೋಡಿರಬಹುದು.
ಆರಿಫ್ ಷಾ ಎಂಬ ಪರ್ತಕರ್ತ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಜನರು ಹೆಚ್ಚಾಗಿ ಅವರ ಜ್ಯೂಸ್ ಅಂಗಡಿಗೆ ಬಾರದ ಕಾರಣ ದುಡಿಮೆಗೆ ಕಷ್ಟವಾಗುತ್ತಿದೆ. ಹಾಗಾಗಿ ಅಮೃತಸರಕ್ಕೆ ಎಂದಾದರು ತೆರಳಿದರೆ ಅಥವಾ ನೀವು ಅಮೃತಸರದಲ್ಲಿ ವಾಸಿಸುತ್ತಿದ್ದರೆ ಇವರ ಜ್ಯೂಸ್ ಅಂಗಡಿಗೆ ತೆರಳಿ ಜ್ಯೂಸ್ ಸವಿಯುವ ಮೂಲಕ ಸಹಾಯ ಮಾಡಬಹುದು.
This 80 year old woman runs a stall in Amritsar. She is working hard in her old age to feed herself. She’s struggling to have customers from sometime. Her stall is located at Rani Da Bagh, near Uppal Neuro Hospital. Please visit her stall, help her so that she can earn some money pic.twitter.com/RTTTakRT9q
— Aarif Shah (@aarifshaah) July 28, 2021
ಪತ್ರಕರ್ತ ಷಾ ಅವರು ಅಜ್ಜಿರ ಜ್ಯೂಸ್ ಸ್ಟಾಲ್ನ ಜಾಗವನ್ನು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆಯೇ, ಯಾವ ರೀತಿಯಲ್ಲಿ ಅವರಿಗೆ ಸಹಾಯ ಮಾಡಬಹುದು ಎಂದು ನೆಟ್ಟಿಗರು ಕೇಳಿದ್ದಾರೆ. ಇನ್ನು ಕೆಲವರು ಗೂಗಲ್ ಮ್ಯಾಪ್ನಲ್ಲಿ ನಿಖರವಾದ ಸ್ಥಳವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ನಗರದಲ್ಲಿ ವಾಸಿಸುವ ಜನರು ವೃದ್ಧೆಗೆ ಸಹಾಯ ಮಾಡಬಹುದು.
May Allah bless her ..
I’m in tears..
Wish her a more relaxed life..
— KhUrR@M? (@Syed_Khurram) July 28, 2021
ಅಮೃತಸರಕ್ಕೆ ಭೇಟಿ ನೀಡುವ ಪ್ರವಾಸಿಗರು ವೃದ್ಧೆಯನ್ನು ಭೇಟಿ ಮಾಡಿ, ಅವರನ್ನು ಬೆಂಬಲಿಸೋಣ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಯಸ್ಸಾದವರು ತುಂಬಾ ಕಷ್ಟಪಡುತ್ತಿದ್ದಾರೆ. ಈ ಸಮಯದಲ್ಲಿ ಅವರು ದುಡಿಯುವುದನ್ನು ಬಿಟ್ಟು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು. ಈ ವಿಡಿಯೋ ಮನಕಲಕುವಂತಿದೆ ಎಂದು ಇನ್ನೋರ್ವರು ಹೇಳಿದ್ದಾರೆ. ನಾವು ಒಗ್ಗೂಡಿ ಅವರಿಗೆ ಸಹಾಯ ಮಾಡೋಣ. ಅಮೃತಸರಕ್ಕೆ ಭೇಟಿ ನೀಡಿದಾಗ ನಾವು ಅವರನ್ನು ಭೇಟಿ ಮಾಡುತ್ತೇವೆ ಎಂದು ಇನ್ನುಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
?? No words.
— Dilliwali (@puretaurean) July 28, 2021
Friends who often travel to #Amritsar please visit her for the exceptional juice she makes. I have personally not tried it but have heard of it from a friend. Lets support her #VocalForLocal https://t.co/0Nd3gqcCIt
— Darasing Khurana (@darasingkhurana) July 29, 2021
ಇದನ್ನೂ ಓದಿ:
Viral Video : ಅಜ್ಜಿ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆದ್ರು, ಮೊಮ್ಮಕ್ಕಳು ಹೆಜ್ಜೆ ಹಾಕಿದ್ರು