ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗಾಗಲೇ ಬಹಳ ವೈರಲ್ ಆಗಿದೆ. ಪ್ರಾಣಿ ಪ್ರಿಯರ ಮನಸೆಳೆಯುತ್ತಿರುವ ಈ ವಿಡಿಯೊದಲ್ಲಿ ಬೆಕ್ಕಿನ ತುಂಟಾಟವನ್ನು ಎಲ್ಲರೂ ಸಕ್ಕತ್ ಎಂಜಾಯ್ ಮಾಡುತ್ತಿದ್ದಾರೆ. ನೆಟ್ಟಿಗರ ವಿಧವಿಧವಾದ ಕಾಮೆಂಟನ್ನು ನೀಡಿದ್ದು ಒಬ್ಬರು, ‘ಬಹುಶಃ ಈ ಬೆಕ್ಕು ನಾಯಿಯ ವರ್ತನೆಯ ಕುರಿತಂತೆ ಪಿ.ಎಚ್ ಡಿ ಅಧ್ಯಯನ ಮಾಡುತ್ತಿರಬಹುದು ಎಂದು ಕಾಲೆಳೆದಿದ್ದಾರೆ.
ವಿಡಿಯೊ ನೋಡಿ:
ವಿಡಿಯೊ ನೋಡಿದ ನೆಟ್ಟಿಗರು ನಾಯಿಯ ತಾಳ್ಮೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ‘ಆ ನಾಯಿಗೆ ಭಯಂಕರ ತಾಳ್ಮೆಯಿದೆ’ ಎಂದು ಒಬ್ಬರು ಹೇಳಿದ್ದರೆ, ಮತ್ತೋರ್ವರು, ‘ಇರಬಹುದು, ಆದರೆ ಅವರೀರ್ವರೂ ಗೆಳೆಯರಿರಬೇಕು. ಆದ್ದರಿಂದಲೇ ನಾಯಿ ಸುಮ್ಮನಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಇದು ನಮ್ಮ ಬಾಲ್ಯದ ಸಹೋದರ, ಸಹೋದರಿಯರನ್ನು ನೆನಪಿಸುತ್ತದೆ. ಏ ಸುಮ್ಮನಿರು ಎಂದರೂ ತೊಂದರೆ ಕೊಡುತ್ತಿದ್ದ ಅಣ್ಣ ತಮ್ಮಂದಿರಂತೆ ಈ ನಾಯಿ ಬೆಕ್ಕುಗಳು ಆಟವಾಡುತ್ತಿವೆ’ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ವಿಡಿಯೊ ನೋಡಿದವರಿಗೆ ಖಂಡಿತವಾಗಿಯೂ ‘ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ’ ಗಾದೆ ನೆನಪಾಗಿರಬಹುದು. ಅಂತೆಯೇ ಇಲ್ಲಿ ಬೆಕ್ಕಿಗೆ ಆಟವಾಗಿದೆ; ಸುಮ್ಮನೆ ಮಲಗಿರುವ ನಾಯಿಗೆ ಸಂಕಟವಾಗುತ್ತಿದೆ. ಆದರೆ ಇಬ್ಬರೂ ದೋಸ್ತರಲ್ಲವೇ? ಹಾಗಾಗಿ ಸಹಿಸಿಕೊಂಡು ನಾಯಿ ಸುಮ್ಮನುಳಿಯಿತೋ ಏನೋ.
ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ಹೊಸ ಫ್ರೆಂಡ್ ಸ್ಪೈಕ್ ಜೊತೆ ಆಟವಾಡುತ್ತಿರುವ ವಿಡಿಯೋ ನೋಡಿ
ಇದನ್ನೂ ಓದಿ: South Africa: 2021ರಲ್ಲಿ ಇದುವರೆಗೆ 249 ಖಡ್ಗಮೃಗಗಳು ಹತ್ಯೆಗೀಡಾದ ಆಘಾತಕಾರಿ ಅಂಶ ಬಯಲು!
(A cat tests dog’s patience and see what happens next)