ಗುಹಾವಟಿಯಲ್ಲಿ ಭಾವನಾ ಕಶ್ಯಪ್ ನಿಂತಿದ್ದರು. ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಸಭ್ಯವರ್ತನೆ ತೋರಿದ್ದಾನೆ. ನನಗೆ ಅಡ್ರೆಸ್ ಕುರಿತಾದ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಂತೆಯೇ ಮಹಿಳೆಯ ಸ್ತನ ಭಾಗವನ್ನು ಹಿಡಿದ್ದಾನೆ. ಮಹಿಳೆಯೊಂದಿಗೆ ಅಸಭ್ಯದಿಂದ ವರ್ತಿಸಿದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ವ್ಯಕ್ತಿಯು ತಪ್ಪಿಸಿಕೊಳ್ಳಲು ನೋಡುತ್ತಿದ್ದಂತೆ, ಮಹಿಳೆ ಆತನನ್ನು ತಡೆ ಹಿಡಿದು ಸ್ಕೂಟರ್ನ ಹಿಂಭಾಗವನ್ನು ಗಟ್ಟಿಯಾಗಿ ಎಳೆದು ಹಿಡಿದು ನಿಂತಿದ್ದಾಳೆ. ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಆತನ ಸ್ಕೂಟರ್ಅನ್ನು ಎಳೆದು ತಂದು ಹತ್ತಿರದ ಚರಂಡಿಗೆ ಎಸೆದಿದ್ದಾಳೆ. ನಡೆದ ಎಲ್ಲಾ ಘಟನೆಯನ್ನು ಮಹಿಳೆ ಫೇಸ್ಬುಕ್ನಲ್ಲಿ ವಿವರಿಸಿದ್ದಾಳೆ.
ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆಯೇ, ಕೂಡಲೇ ಅಸ್ಸಾಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ವ್ಯಕ್ತಿಯ ಹೆಸರು ಮಧುಸನ ರಾಜಕುಮಾರ್. ಫೊಟೋದ ಜತೆಗೆ ಕೆಲವು ವಿಡಿಯೋಗಳನ್ನು ಮಹಿಳೆ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾಳೆ.
ಭಾವನಾ ಕಶ್ಯಪ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಕೋಪಗೊಂಡಿದ್ದಾರೆ. ಏತನ್ಮಧ್ಯೆ, ಮಹಿಳೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ನಿಮ್ಮನ್ನು ನೋಡಿ ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಓರ್ವರು ಹೇಳಿದ್ದಾರೆ.
ಇದನ್ನೂ ಓದಿ:
ವಿಧವಾ ವೇತನ ಕೇಳಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಆರೋಪ; ಗ್ರೇಡ್ 2 ತಹಶೀಲ್ದಾರ್ಗೆ ಬಿತ್ತು ಗೂಸಾ
ಅಸಭ್ಯ ವರ್ತನೆ ತೋರಿದ ಮ್ಯಾನೇಜರ್ಗೆ ಕಚೇರಿಯಲ್ಲೇ ಬಾರಿಸಿದ ಮಹಿಳೆ; ವಿಡಿಯೋ ವೈರಲ್