AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸಭ್ಯ ವರ್ತನೆ ತೋರಿದ ಮ್ಯಾನೇಜರ್​ಗೆ ಕಚೇರಿಯಲ್ಲೇ ಬಾರಿಸಿದ ಮಹಿಳೆ; ವಿಡಿಯೋ ವೈರಲ್

14 ನಿಮಿಷಗಳ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ. ಹಾಗಿದ್ದರೆ ತಮ್ಮ​ ಕಚೇರಿ ಮ್ಯಾನೇಜರ್​ಗೆ ಮಹಿಳೆ ಹೊಡೆದ ಕಾರಣ ಏನಾಗಿರಬಹುದು?

ಅಸಭ್ಯ ವರ್ತನೆ ತೋರಿದ ಮ್ಯಾನೇಜರ್​ಗೆ ಕಚೇರಿಯಲ್ಲೇ ಬಾರಿಸಿದ ಮಹಿಳೆ; ವಿಡಿಯೋ ವೈರಲ್
ಮಾಬ್​ ಹಿಡಿದು ತನ್ನ ಕಚೇರಿ ಮ್ಯಾನೇಜರ್​ಗೆ ಮಹಿಳೆ ಹೊಡೆಯುತ್ತಿರುವ ವಿಡಿಯೋ ವೈರಲ್​
shruti hegde
|

Updated on: Apr 15, 2021 | 2:21 PM

Share

ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಯಾವ ವಿಡಿಯೋ ವೈರಲ್​ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಒಳ್ಳೆಯ ಕೆಲಸಗಳು ಸುದ್ದಿಯಾದರೆ, ಹೆಚ್ಚಿನ ಬಾರಿ ಮಾಡಬಾರದ ಕೆಲಸ ಮಾಡಿ ಸಿಕ್ಕಿಹಾಕಿಕೊಂಡವರೇ ದೊಡ್ಡ ಸದ್ದು ಮಾಡುತ್ತಾರೆ. ಇದೀಗ 14 ನಿಮಿಷಗಳ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ. ಆ ವಿಡಿಯೋದಲ್ಲಿರುವ ಮಹಿಳೆ ಮಾಡಿದ ಕೆಲಸಕ್ಕೆ ಜನರು ಹೊಗಳಿದ್ದಾರೆ. ತನಗಾದ ನೋವಿಗೆ ಮತ್ತು ತನ್ನ ಜೊತೆಗೆ ಕೆಲಸ ಮಾಡುವ ಇತರ ಮಹಿಳೆಯರ ನೋವಿಗೆ ಧ್ವನಿ ಆದ ಮಹಿಳೆಯ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಚೀನಾದಲ್ಲಿ ಮಹಿಳೆಯೊಬ್ಬರು ತನ್ನ ಕಚೇರಿಯ ಮ್ಯಾನೇಜರ್​ಗೆ ಮಾಬ್​ನಿಂದ(ನೆಲ ಸ್ವಚ್ಛಗೊಳಿಸುವ ಸಾಧನ) ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಮಹಿಳೆ ಮಾಡಿರುವ ಕೆಲಸಕ್ಕೆ ಇದೀಗ ಸಾಕಷ್ಟು ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ. ಅಷ್ಟಕ್ಕೂ ಈ ಮಹಿಳೆ ಮಾಬ್​ನಿಂದ ಹೊಡೆಯಲು ಕಾರಣ ಏನಿರಬಹುದು ಎಂಬುದನ್ನು ನೀವು ಕೇಳಿದರೆ ನಿಜಕ್ಕೂ ಕೋಪಗೊಳ್ಳುತ್ತೀರಿ. ಏನಿರಬಹುದು ಅವರಿಬ್ಬರ ನಡುವಿನ ಅಂತಹ ಕಲಹ?

ಚೀನಾದ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಆಕೆಯ ಕಚೇರಿ ಮ್ಯಾನೇಜರ್​ ಅಸಭ್ಯ ಸಂದೇಶವನ್ನು ಕಳುಹಿಸುತ್ತಿದ್ದ. ಈ ಕಾರಣಕ್ಕಾಗಿ ಮಹಿಳೆ ಮೊದಲಿಗೆ ಬಾತ್​ರೂಮ್​ನಲ್ಲಿ ತುಂಬಿಟ್ಟಿದ್ದ ಟಬ್​ನಿಂದ​ ನೀರನ್ನು ತೆಗೆದು ಆತನ ಮುಖಕ್ಕೆ ಎರಚುತ್ತಾಳೆ. ನಂತರ ಬಂದು ಮಾಬ್​ ಹಿಡಿದು ಮ್ಯಾನೇಜರ್​ಗೆ ಹೊಡೆಯುತ್ತಾಳೆ. ಇದಷ್ಟೂ ಸಂಗತಿಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ಜೊತೆಗೆ ಮ್ಯಾನೇಜರ್​ ಕಳುಹಿಸಿದ ಅಸಭ್ಯ ಸಂದೇಶವನ್ನು ವಿಡಿಯೋದಲ್ಲಿ ಆಕೆ ಹೇಳಿದ್ದಾಳೆ.

ಅಷ್ಟೇ ಅಲ್ಲ, ಮ್ಯಾನೇಜರ್​ ಟೇಬಲ್​ ಮೇಲಿದ್ದ ಅಷ್ಟೂ ಪುಸ್ತಕದ ರಾಶಿಯನ್ನು ಸಿಟ್ಟಿನಿಂದ ಬಿಸಾಡುತ್ತಾಳೆ. ಮಾಬ್​ ಹಿಡಿದು ಹೊಡೆಯುತ್ತಿರುವ ದೃಶ್ಯವನ್ನು ಮತ್ತೊಂದು ಮಹಿಳೆ ಸೆರೆ ಹಿಡಿಯುವುದನ್ನು ಕಂಡ ಮ್ಯಾನೇಜರ್​ ತಲೆ ತಗ್ಗಿಸಿ ಮುಖ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಾನೆ ಮತ್ತು ಕ್ಷಮೆಯಾಚಿಸುತ್ತಾನೆ. ನಾನು ಜೋಕ್​ಗೆ ಕಳುಹಿಸಿರುವ ಸಂದೇಶ ಎಂದು ಮ್ಯಾನೇಜರ್​ ಸಮರ್ಥಿಸಿಕೊಳ್ಳಲು ಹೋದಾಗ, ಪಕ್ಕದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ಮಹಿಳೆ ಇದು ತಮಾಷೆಯಾ? ಜೋಕ್​ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾಳೆ. ಇದು ನಿಮ್ಮ ಕೆಟ್ಟ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಕಚೇರಿಯ ಸಿಬ್ಬಂದಿಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಎಂದು ಮಹಿಳೆ ಕೋಪದಿಂದ ವಾರ್ನಿಂಗ್​ ಮಾಡಿರುವ ದೃಶ್ಯ ಸೆರೆಯಾಗಿದೆ.

ಹಲವಾರು ಜನರಿಗೆ ಇವರು ಕರೆ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಕಚೇರಿಯ ಹೆಣ್ಣು ಮಕ್ಕಳಿಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಹೇಳಿರುವುದನ್ನು ನೋಡಿದ ನೆಟ್ಟಿಗರು ಮಹಿಳೆ ಮಾಡಿದ ಕೆಲಸದ ಕುರಿತಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ