ಹೆಂಡತಿಗೆ ನನ್ನ ಮೇಲೆ ಯಾವಾಗಲೂ ಅನುಮಾನ. ಬೇರೆ ಯಾವ ಮಹಿಳೆಯೊಂದಿಗೆ ಮಾತನಾಡಿದರೂ ಕೂಡ ಆ ದಿನ ಮನೆ ರಣರಂಗವಾಗಿ ಬಿಡುತ್ತದೆ ಎಂದು ಹೆದರುವ ಪುರುಷರೇ ಹೆಚ್ಚು. ಯಾಕೆಂದರೆ ಒಂದು ಹೆಣ್ಣಿಗೆ ತನ್ನ ಪತಿ ತನಗೆ ಮಾತ್ರ ಸೀಮಿತ, ಆದ್ದರಿಂದ ಆಕೆಯ ಅತಿಯಾದ ಪ್ರೀತಿ ಕೆಲವೊಮ್ಮೆ ಅಸೂಯೆ ಹಾಗೂ ಅನುಮಾನವನ್ನುಂಟು ಮಾಡುತ್ತದೆ. ಆದರೆ ಅಮೇರಿಕಾದ ಮೋನಿಕಾ ಹಲ್ಟ್ ಎಂಬ ಮಹಿಳೆ ತನ್ನ ಪತಿಯನ್ನು ಪ್ರತೀ ದಿನ ಸಂತೋಷವಾಗಿಟ್ಟುಕೊಳ್ಳಲು ತಾನು ಬ್ಯೂಸಿಯಾಗಿರುವ ಸಮಯದಲ್ಲಿ ಬೇರೆ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡಿದ್ದಾಳೆ. ತನ್ನ ಪತಿಯನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ನಂಬುತ್ತಾಳೆ ಈಕೆ. ತನಗೆ ಬಿಡುವಿಲ್ಲದ ಕಾರಣ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಲು ಕಳುಹಿಸಿದ ನಂತರ ಅವಳು ತನ್ನ ಪತಿಗೆ ಬೇಕಾಗುವಂತಹ ಅಡುಗೆ ಮಾಡಿ, ಮನೆಯನ್ನು ಸ್ವಚ್ಛಗೊಳಿಸುತ್ತಾಳೆ.
ಅಮೆರಿಕಾದ ಸುದ್ದಿ ಸಂಸ್ಥೆಯಾದ ನ್ಯೂಯಾರ್ಕ್ ಪೋಸ್ಟ್‌ನ ಸಂದರ್ಶನವೊಂದರಲ್ಲಿ, ತನ್ನ ಪತಿ ಜಾನ್ ಅವರನ್ನು ಸಂತೋಷಪಡಿಸುವುದು ಹೆಂಡತಿಯಾಗಿ ತನ್ನ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ನಮ್ಮ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಆಕೆ ಹೇಳಿದ್ದಾಳೆ.
ಇದನ್ನೂ ಓದಿ: 76% ಅಂಗವೈಕಲ್ಯ ಹೊಂದಿರುವ ವ್ಯಕ್ತಿ ಮ್ಯಾರಾಥಾನ್ ಪೂರ್ಣಗೊಳಿಸಿದ್ದಾರೆ; ಇದು ವಿಶ್ವದಲ್ಲೇ ಮೊದಲು!
ತಾನು ಗೃಹಿಣಿಯಾಗಿದ್ದು, ತನ್ನ ಮನೆಯ ಜವಾಬ್ದಾರಿಯನ್ನು ಜೊತೆಗೆ ಅಡುಗೆ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ ತನ್ನ ಪತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ, ಆಗ ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಇದಲ್ಲದೆ, ತನ್ನ ಪತಿ ಬೇರೆ ಮಹಿಳೆಯೊಂದಿಗೆ ಸಮಯ ಕಳೆಯಲು ಹೋಗುವಾಗ ಯಾವ ರೀತಿ ಬಟ್ಟೆಗಳನ್ನು ಧರಿಸಬೇಕು ಎಂದು ನಿರ್ಧರಿಸುವುದು ಕೂಡ ನಾನೇ ಎಂದು ಹೇಳಿಕೊಂಡಿದ್ದಾಳೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:06 pm, Tue, 28 March 23