Video: ಬಾಯಿಯಿಂದ ಗಾಳಿ ಹೊರಹಾಕುವುದರಲ್ಲೂ ಗಿನ್ನಿಸ್ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯಾದ ವ್ಯಕ್ತಿ; ಇವರು ತೇಗುವ ಶಬ್ದಕ್ಕೆ ಭಯವಾಗದೆ ಇರದು !
ನೆವಿಲ್ಲೆ ಈ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದು ಅವರ ಪತ್ನಿಯಂತೆ. ಗಟ್ಟಿಯಾಗಿ, ಹೆಚ್ಚಿನ ಶಬ್ದವನ್ನು ಹೊಂದಿ ತೇಗುವುದನ್ನು ಕಲಿಯಲು 5ವರ್ಷ ಅವರು ನಿರಂತರ ಅಭ್ಯಾಸ ಮಾಡಿದ್ದಾರಂತೆ.
ಈ ಜನ ಯಾವ್ಯಾವ ವಿಚಾರದಲ್ಲೆಲ್ಲ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಲು ಮುಂದಾಗುತ್ತಾರೆ ನೋಡಿ..! ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬ ಭಯಂಕರ ಶಬ್ದದೊಂದಿಗೆ ತೇಗುವ (Burped) ಮೂಲಕ 10 ವರ್ಷಗಳ ಗಿನ್ನಿಸ್ ದಾಖಲೆ ಮುರಿದು, ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಅಂದಹಾಗೆ ಇವರ ಹೆಸರು ನೆವಿಲ್ಲೆ ಶಾರ್ಪ್ ಎಂದಾಗಿದ್ದು, ಡಾರ್ವಿನ್ ನಿವಾಸಿಯಾಗಿದ್ದಾರೆ. ಇವರು ತೇಗುವಾಗ ಅಂದರೆ ಬಾಯಿಯ ಮೂಲಕ ಗಾಳಿಯನ್ನು ಹೊರಹಾಕುವಾಗ ಬಂದ ಶಬ್ದದ ತೀವ್ರತೆ 112.4 ಡೆಸಿಬಲ್ಗಳಷ್ಟಿತ್ತು. ಇದು ವಿದ್ಯುತ್ ಡ್ರಿಲ್ಲರ್ ಉಂಟು ಮಾಡುವ ಗದ್ದಲಕ್ಕಿಂತಲೂ ಜಾಸ್ತಿ ಎಂದು ಹೇಳಲಾಗಿದೆ.
ಅತ್ಯಂತ ಜೋರಾದ ಶಬ್ದದೊಂದಿಗೆ ತೇಗಿದ ಗಿನ್ನಿಸ್ ದಾಖಲೆ ಕಳೆದ 11 ವರ್ಷಗಳಿಂದ ಎಲಿಸಾ ಕಾಗ್ನೋನಿ ಎಂಬುವರ ಹೆಸರಲ್ಲಿತ್ತು. 2009ರ ಜೂನ್ 16ರಂದು ಇಟಲಿಯ ರೆಗ್ಗಿಯೋಲೋದಲ್ಲಿ ನಡೆದ ಹಾರ್ಡ್ರಾಕ್ ಬಿಯರ್ ಉತ್ಸವದ ನಿಮಿತ್ತ ನಡೆದ ರುಟ್ಟೋಸೌಂಡ್ ಸ್ಪರ್ಧೆಯಲ್ಲಿ ಎಲಿಸಾ 107.0 ಡೆಸಿಬಲ್ಗಳಷ್ಟು ಶಬ್ದದ ತೀವ್ರತೆ ಹೊಂದಿರುವಂತೆ ತೇಗಿದ್ದರು. ಆದರೆ ಈ ದಾಖಲೆಯನ್ನೀಗ ನೆವಿಲ್ಲೆ ಶಾರ್ಪ್ ಮುರಿದಿದ್ದಾರೆ. ಈ ಬಗ್ಗೆ ವಿಶ್ವ ಗಿನ್ನಿಸ್ ದಾಖಲೆ ಟ್ವಿಟರ್ ಪೇಜ್ ಕೂಡ ಪೋಸ್ಟ್ ಮಾಡಿದೆ.
ಇನ್ನು ನೆವಿಲ್ಲೆ ಈ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದು ಅವರ ಪತ್ನಿಯಂತೆ. ಗಟ್ಟಿಯಾಗಿ, ಹೆಚ್ಚಿನ ಶಬ್ದವನ್ನು ಹೊಂದಿ ತೇಗುವುದನ್ನು ಕಲಿಯಲು ಸುಮಾರು 5ವರ್ಷಗಳ ಕಾಲ ಅವರು ನಿರಂತರ ಅಭ್ಯಾಸ ಮಾಡಿದ್ದಾರೆ ಎಂದೂ ಹೇಳಲಾಗಿದೆ. ನಾನು ಆರು ವರ್ಷದವನಿದ್ದಾಗ ತೇಗುವುದು ಹೇಗೆಂದು ನನ್ನ ಅಕ್ಕ ಸ್ಯಾಂಡಿ ಹಂಟ್ರಿಂದ ಕಲಿತೆ. ನಂತರದ ದಿನಗಳಲ್ಲಿ ಹೀಗೆ ತೇಗುವುದನ್ನೂ ಕೌಶಲಯುಕ್ತವಾಗಿ ಮಾಡುತ್ತಿದ್ದೆ. ಅದೇ ಈಗ ಈ ಸಾಧನೆಗೆ ಕಾರಣವಾಯಿತು ಎಂದು ನೆವಿಲ್ಲೆ ಹೇಳಿಕೊಂಡಿದ್ದಾರೆ.
NEW: The record for the loudest burp has been beaten for the first time in over 10 years ? pic.twitter.com/b9rqVBog7T
— Guinness World Records (@GWR) November 30, 2021
ಇದನ್ನು ಓದಿ: ತಾಯಿ ಆಗುತ್ತಿದ್ದಾರೆ ನಟಿ ಅಮೂಲ್ಯ; ವಿಶೇಷ ಫೋಟೋ ಮೂಲಕವೇ ಗುಡ್ ನ್ಯೂಸ್ ನೀಡಿದ ದಂಪತಿ