ಈ ಸಾವು ಅನ್ನೋದು ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ ಅನ್ನೋ ಮಾತೊಂದಿದೆ. ಅದರಲ್ಲೂ ಕೋವಿಡ್ ಬಳಿಕ ಹೃದಯಾಘಾತಗಳ ಪ್ರಕರಣಗಳು ಹೆಚ್ಚುತ್ತಿದ್ದು, ಮಕ್ಕಳು, ಯುವಕರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನದವರು ಈ ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಅಕ್ಕನ ಮದುವೆ ಸಂಭ್ರಮದಲ್ಲಿದ್ದ 18 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟದ್ದಳು. ಇದೀಗ ಅಂತಹದ್ದೇ ಘಟನೆಯೊಂದು ಸಂಭವಿಸಿದ್ದು, ಮುಸ್ಲಿಂ ವ್ಯಕ್ತಿಯೊಬ್ಬರು ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ ವೇಳೆಯಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದ್ದು, ಇಲ್ಲಿನ ಮುರಾದ್ ನಗರದ ಮಸೀದಿಯೊಂದರಲ್ಲಿ ನಮಾಜ್ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ನೆಲದ ಮೇಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಆಘಾತಕಾರಿ ದೃಶ್ಯ ಮಸೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
लोकेशन : गाजियाबाद ,उत्तरप्रदेश
नमाज अदा करते समय दिल का दौरा पड़ने से एक बुजुर्ग की मौत हो गई। मुरादनगर मस्जिद के अंदर हुई हाजी हनीफ की अचानक मौत सीसीटीवी कैमरे में कैद हो गई। pic.twitter.com/GDjJnDIHwu
— The Muslim (@TheMuslim786) May 2, 2024
ಈ ವಿಡಿಯೋವನ್ನು @TheMuslim786 ಎಂಬ ಹಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ನಮಾಜ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ, ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ:ಬಿರು ಬೇಸಿಗೆಯಿಂದ ಪಾರಾಗಲು ಆಟೋ ಚಾಲಕನ ಮಸ್ತ್ ಐಡಿಯಾ; ವೈರಲ್ ಆಯ್ತು ವಿಡಿಯೋ
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮಸೀದಿಯಲ್ಲಿ ಕುಳಿತು ನಮಾಜ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ನಮಾಜ್ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆ ವ್ಯಕ್ತಿ ಅಲ್ಲೇ ಕುಸಿದು ಬೀಳುತ್ತಾರೆ. ಈ ದೃಶ್ಯವನ್ನು ನೋಡಿದ ಇತರರು ಆ ತಕ್ಷಣ ಅವರ ಬಳಿ ಓಡಿ ಬರುತ್ತಾರೆ. ಆದರೆ ಅಷ್ಟರಲ್ಲಿ ಆ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ದೃಶ್ಯವನ್ನು ಕಂಡು ಇತ್ತೀಚಿಗಂತೂ ಈ ಹೃದಯಾಘಾತ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ