80 ವರ್ಷದ ವೃದ್ಧೆಯೊಬ್ಬರು ತನ್ನ ಸಂಪೂರ್ಣ ಆಸ್ತಿ ಅಂದರೆ 45 ಕೋಟಿಗಳಷ್ಟು ಬೆಲೆ ಬಾಳುವ ಆಸ್ತಿಯನ್ನು ತನ್ನ ಕೇರ್‌ಟೇಕರ್ ಹೆಸರಿಗೆ ಬರೆದಿರುವ ಘಟನೆ ಇಟಲಿಯಲ್ಲಿ ನಡೆದಿದೆ. ವೃದ್ಧೆಯನ್ನು ನೋಡಿಕೊಳ್ಳುವ ವ್ಯಕ್ತಿಯ ಹೆಸರಿಗೆ ಬರೆದಿರುವುದನ್ನು ಕಂಡು ಆಕೆಯ ಸಂಬಂಧಿಕರು ಬೆಚ್ಚಿಬಿದ್ದಿದ್ದಾರೆ. ಆಡಿಟಿ ಸೆಂಟ್ರಲ್ ಎಂಬ ವೆಬ್‌ಸೈಟ್‌ನ ವರದಿಯ ಪ್ರಕಾರ, ಮಹಿಳೆಗೆ ನೇರ ಉತ್ತರಾಧಿಕಾರಿ ಇರಲಿಲ್ಲ, ಆದ್ದರಿಂದ ತನ್ನ ಸಂಪೂರ್ಣ ಆಸ್ತಿ 5.4 ಮಿಲಿಯನ್ ಡಾಲರ್ ಅಂದರೆ ಸುಮಾರು 45 ಕೋಟಿಗಳನ್ನು ಅಲ್ಬೇನಿಯಾ ನಿವಾಸಿಯಾಗಿದ್ದ ತನ್ನ ಕೇರ್‌ಟೇಕರ್ ಹೆಸರಿಗೆ ಬರೆದಿದ್ದಾರೆ.
ವರದಿಗಳ ಪ್ರಕಾರ, ಮರಿಯಾ ಎಂಬ ಹೆಸರಿನ ಈ ಮಹಿಳೆಯು ಇಟಲಿಯ ಟ್ರೆಂಟೊ ಪ್ರಾಂತ್ಯದ ಮಾರಿಯಾ ಮಾಲ್ಫಟ್ಟಿ ಎಂಬ ಪಟ್ಟಣವಾದ ರೋವೆರೆಟೊದ ಅತ್ಯಂತ ಶ್ರೀಮಂತ ಕುಟುಂಬದ ಸದಸ್ಯೆ. ಈಕೆ ಹಲವಾರು ಅಪಾರ್ಟ್‌ಮೆಂಟ್‌ಗಳು, ನಗರದ ಮಧ್ಯಭಾಗದಲ್ಲಿರುವ ಐತಿಹಾಸಿಕ ಕಟ್ಟಡ ಮತ್ತು ಲಕ್ಷಾಂತರ ಬ್ಯಾಂಕ್ ಖಾತೆಗಳನ್ನು ಒಳಗೊಂಡಂತೆ ಹಲವಾರು ಅಮೂಲ್ಯ ಆಸ್ತಿಗಳನ್ನು ಹೊಂದಿದ್ದರು. ಮಕ್ಕಳು ಪತಿ ಯಾರೂ ಇಲ್ಲದೇ ಇರುವ ಈ ಮಹಿಳೆ ತನ್ನನ್ನು ನೋಡಿಕೊಳ್ಳಲು ಕೇರ್‌ಟೇಕರ್ ಅನ್ನು ಇಟ್ಟುಕೊಂಡಿದ್ದಳು. ಆದರೆ ಕಳೆದ ನವೆಂಬರ್ನಲ್ಲಿ ಅಂದರೆ ತನ್ನ 80 ನೇ ವಯಸ್ಸಿನಲ್ಲಿ ನಿಧನಳಾಗಿದ್ದಳು.
ಮಹಿಳೆ ಮದುವೆಯಾಗದ ಕಾರಣ, ಆಕೆಯ ಆಸ್ತಿಗೆ ನೇರ ವಾರಸುದಾರರಿಲ್ಲ, ಆದರೆ ಆಕೆಯ ಸಂಬಂಧಿಕರಲ್ಲಿ ಹಲವಾರು ಸೋದರಳಿಯರು ಇದ್ದುದ್ದರಿಂದ ತಮ್ಮ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಬಹುದು ಎಂಬುದು ಅವರು ನಂಬಿದ್ದರು. ಆದರೆ ಈ ಮಹಿಳೆ ತನ್ನ ಕೆಲಸದಾಳುವಿಕೆ ಸಂಪೂರ್ಣ ಆಸ್ತಿಯನ್ನು ಬರೆದಿರುವುದು ಕುಟುಂಬಸ್ಥರಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ನಾನು ಸುಂದರವಾಗಿದ್ದೇನೆ, ಎಲ್ಲಾ ಹುಡುಗಿಯರು ನನ್ನನ್ನು ಬಯಸುತ್ತಾರೆ; 20 ವರ್ಷದ ಹುಡುಗನಿಗೆ ವಿಚಿತ್ರ ಕಾಯಿಲೆ
ಆದರೆ ಮಹಿಳೆಯ ಸೋದರಳಿಯರಿಗೆ ಈ ವಿಷಯ ತಿಳಿದಾಗ ವಕೀಲರನ್ನು ಸಂಪರ್ಕಿಸಿ ಮರಿಯಾಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೇಸು ದಾಖಲಿಸಿ, ವಯೋಸಹಜವಾಗಿ ಮರಿಯಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಎಂದು ಹೇಳಿ ಹೋಗಿದ್ದು, ಕೇರ್ ಟೇಕರ್ ಲಾಭ ಮಾಡಿಕೊಂಡಿದ್ದಾನೆ. ವೃದ್ಧೆಯಿಂದ ಬಲವಂತವಾಗಿ ಆತ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿದ್ದಾನೆ ಎಂದು ಕುಟುಂಬಸ್ಥರು ಕೇಸು ದಾಖಲಿಸಿದ್ದಾರೆ. ಸದ್ಯ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಮರಿಯಾ ಅವರ ಸೋದರಳಿಯರ ಹೇಳಿಕೆಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಯುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ