ಸೇನೆ ಸೇರುವ ಮಹದಾಸೆ ಹೊತ್ತ ಓಡುವ ಹುಡುಗನನ್ನು ನೋಡಿ ಅವನು ‘ಆತ್ಮನಿರ್ಭರ್’​ ಎಂದ ಆನಂದ್​ ಮಹೀಂದ್ರಾ

ಭಾರತೀಯ ಸೇನೆ ಸೇರುವ ಮಹದಾಸೆ ಹೊತ್ತ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಉದ್ಯಮಿ ಆನಂದ್​ ಮಹೀಂದ್ರಾ ನಿಜಕ್ಕೂ ಸ್ಪೂರ್ತಿದಾಯಕ ಎಂದು ಟ್ವೀಟ್​ ಮಾಡಿದ್ದಾರೆ,

ಸೇನೆ ಸೇರುವ ಮಹದಾಸೆ ಹೊತ್ತ ಓಡುವ ಹುಡುಗನನ್ನು ನೋಡಿ ಅವನು ಆತ್ಮನಿರ್ಭರ್​ ಎಂದ ಆನಂದ್​ ಮಹೀಂದ್ರಾ
ಆನಂದ್​ ಮಹೀಂದ್ರಾ
Edited By:

Updated on: Mar 21, 2022 | 5:02 PM

ಪ್ರದೀಪ್​ ಮೆಹ್ರಾ (Pradeep Mehra) ಎನ್ನುವ ಬಾಲಕ ಬ್ಯಾಗ್​ ಹಾಕಿಕೊಂಡು ರಾತ್ರಿ ರಸ್ತೆ ಮಧ್ಯೆ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಹುಡುಗ ಓಡುತ್ತ ಹೋಗುವ ವಿಡಿಯೋವನ್ನು ಸಿನಿಮಾ ನಿರ್ಮಾಪಕ, ಲೇಖಕ ವಿನೋದ್​ ಕಪ್ರಿ (Vinod Kapri) ತಮ್ಮ ಟ್ವಿಟರ್​​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿನೋದ್​ ಕಪ್ರಿ ಕಾರಿನಲ್ಲಿ ಕುಳಿತೇ, ಓಡುತ್ತಿದ್ದ ಹುಡುಗನ ಜತೆ ಸಾಗುತ್ತ ಆತನನ್ನು ಸಂದರ್ಶಿಸಿದ್ದಾರೆ.  ಈ ರೀತಿ ಓಡಲು ಕಾರಣವೇನೆಂದು ಕೇಳಿದಾಗ ಆತ ನಾನು ಸೇನೆಯನ್ನು ಸೇರಬೇಕು. ನನಗೆ ಹಗಲಿಗೆ, ಬೆಳಗ್ಗೆ ಓಡಲು ಸಮಯ ಸಿಗುವುದಿಲ್ಲ. ಹೀಗಾಗಿ ಕೆಲಸ ಮುಗಿಸಿ ಮಧ್ಯರಾತ್ರಿ ಓಡಿಯೇ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿ ವಿನೋದ್​ ಕಪ್ರಿ ಕೂಡ ದಂಗಾಗಿದ್ದಾರೆ. ಇದೀಗ ಈ ಬಾಲಕನಿಗೆ ಸಹಾಯ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಆನಂದ್​ ಮಹೀಂದ್ರಾ (Anand Mahindra) ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಉದ್ಯಮಿ ಆನಂದ್​ ಮಹೀಂದ್ರಾ ಅವರು ವಿಡಿಯೋವನ್ನು ಹಂಚಿಕೊಂಡು ನಿಜಕ್ಕೂ ಸ್ಪೂರ್ತಿದಾಯಕ. ಇದರಲ್ಲಿ  ಸೋಮವಾರದ ಪ್ರೇರಣೆಯಿದೆ ಯುವಕ ತುಂಬಾ ಸ್ವತಂತ್ರ ವ್ಯಕ್ತಿ, ಅಲ್ಲದೆ ಕಾರಿನಲ್ಲಿ ಬನ್ನಿ ಎನ್ನುವ ಆಫರ್​ಅನ್ನು ತಿರಸ್ಕರಿಸಿದ್ದಾನೆ. ಅವನಿಗೆ ಸಹಾಯ ಅಗತ್ಯವಿಲ್ಲ. ಅವನು ಆತ್ಮನಿರ್ಭರ್​ ವ್ಯಕ್ತಿ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ನಿರ್ಮಾಪಕ ವಿನೋದ್​ ಕಪ್ರಿ ಮಧ್ಯರಾತ್ರಿಯ ಸುಮಾರಿಗೆ ನೋಯ್ಡಾ ರಸ್ತೆಯಲ್ಲಿ ಓಡುತ್ತಿರುವ ಬಾಲಕನನ್ನು ಕರೆದು ಮಾತನಾಡಿಸಿದ್ದಾರೆ. ಕಾರಿನಲ್ಲಿ ಹೋಗುವ ಪ್ರಸ್ತಾಪವನ್ನು ಬಾಲಕ ನಿರಾಕರಿಸಿದ್ದು, ಓಡುತ್ತಲೇ ಮಾತನಾಡಿದ್ದಾನೆ. ಇಲ್ಲಿಯವರೆಗೆ, ವೀಡಿಯೊವನ್ನು 6.3 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ವಿಡಿಯೋ ವೈರಲ್  ಆಗುತ್ತಿದ್ದಂತೆ ಬಾಲಕನಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.

ಇದನ್ನೂ ಓದಿ:

Video: ರಾತ್ರಿ ಕೆಲಸ ಮುಗಿಯುತ್ತಿದ್ದಂತೆ 10 ಕಿಮೀ ಓಡಿಕೊಂಡೇ ಹೋಗಿ ಮನೆ ಸೇರುವ ಯುವಕ; ಕಾರಣ ಕೇಳಿ ಸೆಲ್ಯೂಟ್​​ ಹೊಡೆದ ನೆಟ್ಟಿಗರು

Published On - 5:01 pm, Mon, 21 March 22