Anand Mahindra: ಎಸಿ ನೀರು ಹೀಗೆ ಬಳಸಿ… ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರ

|

Updated on: Mar 18, 2024 | 11:08 AM

Video of how to reuse AC water: ಬೆಂಗಳೂರಿನಲ್ಲಿ ಜಲಕ್ಷಾಮ ಪರಿಸ್ಥಿತಿ ಇದೆ. ಜನರು ಹನಿ ಹನಿ ನೀರಿಗೂ ತತ್ವಾರ ಅನುಭವಿಸುತ್ತಿದ್ದಾರೆ. ನೀರು ಮಿತ ಬಳಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಸಲಹೆಗಳು ಕೇಳಿಬರುತ್ತಿವೆ. ಮಹೀಂದ್ರ ಗ್ರೂಪ್ ಛೇರ್ಮನ್ ಆನಂದ್ ಮಹೀಂದ್ರ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎಸಿಯಿಂದ ಹೊರಬರುವ ನೀರನ್ನು ಯಾವುದಕ್ಕೆಲ್ಲಾ ಬಳಸಬಹುದು ಎಂಬುದನ್ನು ತಿಳಿಸಿದ್ದಾರೆ.

Anand Mahindra: ಎಸಿ ನೀರು ಹೀಗೆ ಬಳಸಿ... ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರ
ಆನಂದ್ ಮಹೀಂದ್ರ
Follow us on

ಬೆಂಗಳೂರು, ಜನವರಿ 18: ಈ ಬಾರಿ ಬೇಸಿಗೆಯ ಬೇಗೆ ಹಿಂದೆಂದಿಗಿಂತಲೂ ತೀವ್ರ ಮಟ್ಟದಲ್ಲಿ ಇರುತ್ತದೆ ಎನ್ನುವ ಸೂಚನೆಯಂತೂ ಇದೆ. ಹತ್ತು ವರ್ಷಕ್ಕೆ ಮುನ್ನಾವರೆಗೂ ಎಸಿ ಸಿಟಿ ಎಂದು ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ಬೇಸಿಗೆಯ ಬಿಸಿಗೆ ಒಳಗಿಹೋಗುತ್ತಿದೆ. ನೀರಿಗಾಗಿ ಹಾಹಾಕಾರ ಎದ್ದಿದೆ. ಅಕ್ಷರಶಃ ಜಲಕ್ಷಾಮ (water crisis) ಎದುರಿಸುತ್ತಿದೆ. ಹನಿ ಹನಿ ನೀರೂ ಎಷ್ಟು ಮುಖ್ಯ ಎಂದು ಮನಸಿಗೆ ನಾಟಿಸುವ ಕ್ಲಿಷ್ಟಕರ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಇದೆ. ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಲಹೆಗಳು ಹರಿದಾಡುತ್ತಿವೆ. ಈ ಮಧ್ಯೆ ಉದ್ಯಮಿ ಆನಂದ್ ಮಹೀಂದ್ರ ಅವರು ಎಸಿ ತ್ಯಾಜ್ಯ ನೀರನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವ ಒಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಏನಿದೆ ಈ ಕ್ಲಿಪ್​ನಲ್ಲಿ?

ಎಸಿಯಿಂದ ಹೊರಬರುವ ನೀರನ್ನು ಸಂಗ್ರಹಿಸಿ ಮನೆ ಒರೆಸಲು, ಗಿಡಗಳಿಗೆ ಹಾಕಲು, ಟಾಯ್ಲೆಟ್ ಫ್ಲಶ್ ಮಾಡಲು, ಕಾರ್ ತೊಳೆಯಲು ಬಳಸಬಹುದು. ಆ ಎಸಿ ನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಈ ವಿಡಿಯೋ ತಿಳಿಸುತ್ತದೆ.

ಆನಂದ್ ಮಹೀಂದ್ರ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋ

ಇದನ್ನೂ ಓದಿ: ಅಬ್ಬಬ್ಬಾ! ಪಾತ್ರೆ ತೊಳೆಯುವುದರಲ್ಲಿ ನಿಮ್ಮನ್ನೇ ಮೀರಿಸುತಿದೆ ಈ ಕೋತಿ

ಎಸಿ ಕಂಡೆನ್ಸರ್​ನಿಂದ ಒಂದು ಸಣ್ಣ ಪೈಪ್ ಅನ್ನು ಗೋಡೆಗೆ ತಾಕಿದಂತಿರುವ ದೊಡ್ಡ ಪೈಪ್​ಗೆ (ಮಳೆ ನೀರು ಹೋಗಲು ಬಿಡುವ ಗಾತ್ರದ ಪೈಪ್) ಕನೆಕ್ಟ್ ಮಾಡಬಹುದು. ಈ ದೊಡ್ಡ ಪೈಪ್​ನ ಕೊನೆಯಲ್ಲಿ ಒಂದು ನಲ್ಲಿಯನ್ನು ಫಿಟ್ ಮಾಡಬಹುದು. ಈ ರೀತಿಯಲ್ಲಿ ಎಸಿಯಿಂದ ಹೊರಬರುವ ನೀರನ್ನು ಕೆಳಗೆ ಟ್ಯಾಪ್ ಮೂಲಕ ಯಾವುದಾದರೂ ಪಾತ್ರೆಗಳಿಗೆ ಹಿಡಿದಿಟ್ಟುಕೊಳ್ಳಬಹುದು. ಅಥವಾ ಎಸಿ ಕಂಡೆನ್ಸರ್​ನಿಂದ ಸಣ್ಣ ಪೈಪ್ ಮೂಲಕ ನೇರವಾಗಿ ಯಾವುದಾದರೂ ದೊಡ್ಡ ಡ್ರಮ್​ಗೆ ಬಂದು ಬೀಳುವಂತೆಯೂ ಮಾಡಬಹುದು.

ಆನಂದ್ ಮಹೀಂದ್ರ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ದೇಶಾದ್ಯಂತ ಪ್ರಯೋಗಿಸಬಹುದು ಎಂದಿದ್ದಾರೆ. ನೀರು ಆಸ್ತಿ, ಅದನ್ನು ಸುರಕ್ಷಿತವಾಗಿ ಸಂಗ್ರಹಿಸುವುದು ಅವಶ್ಯಕ. ಈ ಮಾತನ್ನು ಎಲ್ಲರೂ ಹಂಚಿಕೊಳ್ಳಿ ಎಂದು ಸಂದೇಶ ನೀಡಿದ್ದಾರೆ.

ಎಸಿಯಿಂದ ಹೊರಬರುವ ನೀರು ಸಂಸ್ಕರಿತ ನೀರಾಗಿರುತ್ತದೆ. ಹೀಗಾಗಿ, ಅದು ಅಸುರಕ್ಷಿತವೇನಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ