Monday Motivation: 7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಬೆಂಗಳೂರಿನ ಸ್ವಾಮಿ ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ

| Updated By: ಸಾಧು ಶ್ರೀನಾಥ್​

Updated on: Oct 03, 2022 | 12:09 PM

Anand Mahindra: ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು ಶತಾಯುಷಿ ಯೋಧನ ಹುಟ್ಟುಹಬ್ಬ ಆಚರಣೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು ಷರಾ ಬರೆದಿದ್ದಾರೆ.

Monday Motivation: 7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಬೆಂಗಳೂರಿನ ಸ್ವಾಮಿ  ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ
7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಮೇಜರ್ ಸ್ವಾಮಿ ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ
Follow us on

ಅವರು ಬರೋಬ್ಬರಿ ಏಳು ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್ (Drill Instructor)​ ಆಗಿದ್ದವರು. ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು ವೀಲ್​ ಚೇರಿನಲ್ಲಿ ಬಂದಿದ್ದರು. ಆದರೆ ತಾವು ಎದೆಯಾಳದಿಂದ ಪ್ರೀತಿಸುವ ಯೋಧರನ್ನು ಕಂಡವರೆ ಆ ಯೋಧರ ಎದುರು ಎದೆಯುಬ್ಬಿಸಿ ಜೈ ಹಿಂದ್​ ಎಂದು ಅದೇ ಗತ್ತು ಗಾಂಭೀರ್ಯದಿಂದ ಸೆಲ್ಯೂಟ್​ ಹೊಡೆದರು. ಹಾಗೆ ಎದೆಸೆಟೆಸಿ ಸೆಲ್ಯೂಟ್​ ಹೊಡೆದವರು ಮಾಜಿ ಯೋಧ, ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತ ಗೋವಿಂದ ಸ್ವಾಮಿ ಅವರು (VSM Govinda Swami)

ಹೌದು ಮೇಜರ್ ಸ್ವಾಮಿ ಅವರ 100ನೇ ಹುಟ್ಟುಹಬ್ಬವನ್ನು ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ (National Defence Academy) ಔಪಚಾರಿಕವಾಗಿ ಆಚರಿಸಿದೆ. ಅವರು ವೀಲ್​ ಚೇರಿನಲ್ಲಿ ಬಂದು ಗೌರವ ವಂದನೆ ಸ್ವೀಕರಿಸಲು ನಡುಗುವ ದೇಹವನ್ನು ಆರ್ಮಿ ಪೊಸಿಷನ್ ನಲ್ಲಿ ನಿಲ್ಲಿಸಿ, ಸೆಲ್ಯೂಟ್​ ಹೊಡೆದಾಗ ಎಂತಹವರ ಎದೆಯಲ್ಲೇ ಆಗಲಿ ದೇಶಭಕ್ತಿಯ ಕಿಚ್ಚು ಹಬ್ಬುವುದು ಖಚಿತ. ಹಾಗಿತ್ತು ಅವರ ಗಾರ್ಡ್​​ ಆಫ್​ ಆನರ್!

ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು (Anand Mahindra) ಶತಾಯುಷಿ ಯೋಧನ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು (#MondayMotivation) ಷರಾ ಬರೆದಿದ್ದಾರೆ. ನಿಮಗೂ ಇದು ಮಂಡೆ ಮೋಟಿವೇಶನ್​ ಆಗಬಹುದು ವಿಡಿಯೋ ನೋಡಿ.

Anand Mahindra ಟ್ವೀಟ್ ಸಾರಾಂಶ ಹೀಗಿದೆ:

“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation

ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನ MEG ಕೇಂದ್ರದಲ್ಲಿ! ಅದರ ವಿಶೇಷತೆ ಏನು ಗೊತ್ತಾ!?

ಈ ಕಾರ್ಯಕ್ರಮ ಆಯೋಜಿಸಿದ್ದ ಮೆಡ್ರಾಸ್​ ಎಂಜಿನಿಯರಿಂಗ್ ಗ್ರೂಪ್ (MEG – Madras Sappers Bangalore) ಮತ್ತು ಭಾರತೀಯ ಸೇನೆಯ (ಸದರನ್ ಕಮಾಂಡ್ -Southern Command Indian Army) ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬೆಂಗಳೂರಿನಲ್ಲಿರುವ MEG ಕೇಂದ್ರದಲ್ಲಿ! Madras Sappers ವಿಭಾಗದವರ 242ನೇ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಗಮನಾರ್ಹವೆಂದರೆ ಗೌರವಾನ್ವಿತ ಕ್ಯಾಪ್ಟನ್ ಗೋವಿಂದ ಸ್ವಾಮಿ ಅವರ ಪ್ರತಿಮೆಯನ್ನು ಬೆಂಗಳೂರಿನ MEG ಕೇಂದ್ರದಲ್ಲಿ ಇದೇ ವೇಳೆ ಸ್ಥಾಪಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಇನ್ನು ಅನಾವರಣ ಮಾಡಿದ್ದು ಸ್ವತಃ ಗೋವಿಂದ ಸ್ವಾಮಿ ಅವರೇ.