ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹ ಪೂರ್ವ ಸಮಾರಂಭದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಮಾರ್ಚ್ 2024 ರಲ್ಲಿ ಪ್ರಾರಂಭವಾಗಲಿದೆ. ಅನಂತ್ ಮತ್ತು ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಮಾರ್ಚ್ 1 ರಿಂದ ಮಾರ್ಚ್ 3ರ ವರೆಗೆ ನಡೆಯಲಿದೆ. ಇದೀಗಾ ವಿವಾಹ ಪೂರ್ವ ಸಮಾರಂಭದ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ವಿಭಿನ್ನತೆಯ ಜೊತೆಗೆ ಕಾರ್ಡ್‌ನಲ್ಲಿ ಮುಖೇಶ್ ಮತ್ತು ನೀತಾ ಅವರ ಕೈಬರಹದ ಸಂದೇಶವೂ ಕೂಡ ಇದೆ. ಮದುವೆಗೆ ಮುಂಚಿನ ಕಾರ್ಯಕ್ರಮ ಎಲ್ಲೆಲ್ಲಿ ನಡೆಯುತ್ತದೆ ಎಂಬುದನ್ನೂ ಈ ಮದುವೆಯ ಪತ್ರಿಕೆಯಲ್ಲ ನಮೂದಿಸಲಾಗಿದೆ.
ಮುಕೇಶ್ ಅಂಬಾನಿ ಅವರ ತವರೂರಾದ ಗುಜರಾತ್‌ನ ಜಾಮ್‌ನಗರಕ್ಕೆ ಪ್ರಯಾಣಿಸುವ ಮೂಲಕ ಅನಂತ್ ಅಂಬಾನಿಯವರ ಹೊಸ ಜೀವನದ ಹೊಸ ಅಧ್ಯಾಯದ ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಆಮಂತ್ರಣ ಪ್ರತಿಕೆಯಲ್ಲಿ ಬರೆಯಲಾಗಿದೆ. ಇದಲ್ಲದೇ ವಿವಾಹ ಪೂರ್ವ ಸಂಭ್ರಮಗಳು ಮಾರ್ಚ್ 1, 2024 ರಂದು ಪ್ರಾರಂಭವಾಗಲಿದ್ದು, ಮಾರ್ಚ್ 3, 2024 ರವರೆಗೆ ಜಾಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ನಡೆಯಲಿದೆ.
ಇದನ್ನು ಓದಿ: ರಷ್ಯಾದ ಹಸುಗಳ ಕಣ್ಣಿಗೆ ವಿಆರ್ ಗ್ಲಾಸ್; ಹಾಲು ನೀಡುವ ಸಾಮರ್ಥ್ಯದಲ್ಲಿ ಶೇ. 40ರಷ್ಟು ಹೆಚ್ಚಳ
ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಕಿರಿಯ ಸೊಸೆಯಾಗಿ ಪ್ರವೇಶಿಸಲಿರುವ ರಾಧಿಕಾ ಕೈಗಾರಿಕೋದ್ಯಮಿಗಳಾದ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ. ರಾಧಿಕಾ ಮರ್ಚೆಂಟ್ ಅವರ ತಂದೆ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ಆಗಿದ್ದಾರೆ ಮತ್ತು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ