
ಅನಂತಪುರ, ಜನವರಿ 12: ಡೆಲಿವರಿ ಏಜೆಂಟ್(Delivery Agent) ಒಬ್ಬರು ಚಲಿಸುತ್ತಿರುವ ರೈಲಿನಿಂದ ಕೆಳಗೆ ಹಾರಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಹಾರ ಡೆಲಿವರಿ ಮಾಡುತ್ತಿದ್ದಂತೆ ರೈಲು ಹೊರಟೇ ಬಿಟ್ಟಿತ್ತು. ಕೂಡಲೇ ಸ್ವಿಗ್ಗಿ ಡೆಲಿವರಿ ಬಾಯ್ ರೈಲಿನಿಂದ ಕೆಳಗೆ ಹಾರಿದ್ದಾರೆ.
ವೀಡಿಯೊದಲ್ಲಿ ಸೆರೆಯಾದ ಈ ಘಟನೆಯು ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ರೈಲು ಚಲಿಸಲು ಪ್ರಾರಂಭಿಸಿದಾಗ 1 ನೇ ಎಸಿ ಕೋಚ್‌ನಲ್ಲಿರುವ ಪ್ರಯಾಣಿಕರಿಗೆ ಆಹಾರವನ್ನು ಕೊಟ್ಟು ನಂತರ ಏಜೆಂಟ್ ಪ್ರಶಾಂತಿ ಎಕ್ಸ್‌ಪ್ರೆಸ್ (18464)ಯಿಂದ ಇಳಿಯಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ರೈಲು ನಿಲ್ದಾಣದಲ್ಲಿ ಕೇವಲ 1-2 ನಿಮಿಷಗಳ ಕಾಲ ನಿಂತಿತ್ತು.
ಪ್ರಯಾಣಿಕರಿಗೆ ಆಹಾರ ಕೊಟ್ಟು ಹೊರಡಬೇಕು ಅನ್ನುವಷ್ಟರಲ್ಲಿ ರೈಲು ಹೊರಟೇ ಬಿಟ್ಟಿತ್ತು. ರೈಲಿನಿಂದ ಇಳಿಯಲು ಕೆಲವೇ ಕೆಲವು ಸಮಯ ಇತ್ತು. ಕೂಡಲೆ ರೈಲಿನಿಂದ ಹಾರಿ ಕೆಳಗೆ ಬಿದ್ದಿದ್ದಾರೆ. ಬಳಿಕ ಎದ್ದು ನಡೆದುಕೊಂಡು ಹೋಗಿದ್ದಾರೆ.ರೈಲುಗಳಲ್ಲಿ ವಿತರಣಾ ಏಜೆಂಟ್‌ಗಳಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಮತ್ತಷ್ಟು ಓದಿ: Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಸ್ವಿಗ್ಗಿ ಕೂಡ ಪ್ರತಿಕ್ರಿಯಿಸಿ, ಏಜೆಂಟ್ ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ಗಾಯಗಳಾಗಿಲ್ಲ ಎಂದು ದೃಢಪಡಿಸಿದೆ, ಸುರಕ್ಷತೆಯು ಅವರ ಪ್ರಮುಖ ಆದ್ಯತೆಯಾಗಿದೆ ಮತ್ತು ಪ್ರೋಟೋಕಾಲ್‌ಗಳಲ್ಲಿ ಚಲಿಸುವ ರೈಲುಗಳನ್ನು ಹತ್ತುವುದು ಅಥವಾ ಇಳಿಯುವಂತಿಲ್ಲ ಎಂದು ಹೇಳಿದೆ.
ವಿಡಿಯೋ
ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಗ್ರಾಹಕರು ತಮ್ಮ ಆಹಾರವನ್ನು ರೈಲಿನ ಬಾಗಿಲು, ಪ್ಲಾಟ್‌ಫಾರ್ಮ್‌ನಿಂದ ಪಡೆದುಕೊಳ್ಳಲು ಸ್ಪಷ್ಟವಾಗಿ ತಿಳಿಸಬೇಕು. ಡೆಲಿವರಿ ಏಜೆಂಟ್ ಚಲಿಸುವ ಅಥವಾ ಕಿಕ್ಕಿರಿದ ರೈಲುಗಳ ಒಳಗೆ ಪ್ರತ್ಯೇಕ ಆಸನಗಳಿಗೆ ಆಹಾರವನ್ನು ತಲುಪಿಸಲು ಒತ್ತಾಯಿಸಬಾರದು ಎಂದು ನೆಟ್ಟಿಗರೊಬ್ಬರು ಸಲಹೆ ನೀಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ