Video: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು.
ಪುಣೆ, ಜನವರಿ 08: ಬಾಲ್ಕನಿಯಲ್ಲಿ ಸಿಲುಕಿದ್ದ ಇಬ್ಬರನ್ನು ಬ್ಲಿಂಕಿಟ್ ಡೆಲಿವರಿ ಏಜೆಂಟ್ ರಕ್ಷಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬ್ಲಿಂಕ್ ಇಟ್ಗೆ ಆರ್ಡರ್ ನೋಟಿಫಿಕೇಷನ್ ಬಂದಿತ್ತು, ಡೆಲಿವರಿ ಏಜೆಂಟ್ ಒಬ್ಬರು ಅದನ್ನು ಡೆಲಿವರಿ ಮಾಡಬೇಕೆಂದು ಬಂದಾಗ ಅಚ್ಚರಿಯೊಂದು ಕಾದಿತ್ತು. ಇಬ್ಬರು ಸ್ನೇಹಿತರು ಬಾಲ್ಕನಿಯಲ್ಲಿ ಲಾಕ್ ಆಗಿದ್ದರು, ಒಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಅವರು ಗಾಬರಿಗೊಳ್ಳಲಿಲ್ಲ ಬದಲಾಗಿ, ಬ್ಲಿಂಕ್ ಇಟ್ನಲ್ಲಿ ಏನಾದರೂ ಆರ್ಡರ್ ಮಾಡುವ ನಿರ್ಧಾರ ಮಾಡಿದರು. ಡೆಲಿವರಿ ಮಾಡಲು ಬಂದವರ ಬಳಿ ಸಹಾಯ ಕೇಳುವುದು ಅವರ ಪ್ಲ್ಯಾನ್ ಆಗಿತ್ತು. ಮಲಗಿದ್ದ ಪೋಷಕರಿಗೆ ಡಿಸ್ಟರ್ಬ್ ಆಗದಂತೆ ಮುಖ್ಯ ಬಾಗಿಲನ್ನು ತೆರೆಯುವುದು ಹೇಗೆ ಎಂಬುದನ್ನು ಸೂಚಿಸಿದರು. ಈ ಘಟನೆಯನ್ನು ಪುಣೆ ನಿವಾಸಿ ಮಿಹಿರ್ ಗಹುಕರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

