ಮಾರ್ಕ್ಸ್ ಕೊಡದಿದ್ದರೆ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ; ಮೌಲ್ಯ ಮಾಪಕರಿಗೆ ವಿದ್ಯಾರ್ಥಿ ಬ್ಲ್ಯಾಕ್​​​ಮೇಲ್​   

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2024 | 10:33 AM

ʼಪರೀಕ್ಷೆಯಲ್ಲಿ ನನಗೆ ಉತ್ತಮ ಮಾರ್ಕ್ಸ್ ಕೊಡದಿದ್ದರೆ ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿʼ ಅಂತ ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ಬೆದರಿಕೆ ಹಾಕಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್ ಆಗುತ್ತಿದೆ.

ಮಾರ್ಕ್ಸ್ ಕೊಡದಿದ್ದರೆ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿ; ಮೌಲ್ಯ ಮಾಪಕರಿಗೆ ವಿದ್ಯಾರ್ಥಿ ಬ್ಲ್ಯಾಕ್​​​ಮೇಲ್​   
ಸಾಂದರ್ಭಿಕ ಚಿತ್ರ
Follow us on

ಪರೀಕ್ಷೆ ನಡೆದ ಬಳಿಕ ಉತ್ತರ ಪತ್ರಿಕೆಗಳ ಮೌಲ್ಯ ಮಾಪನದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬರೆದಿರುವ ಕೆಲವು ತರ್ಲೆ ಉತ್ತರಗಳು, ಹೇಗಾದರೂ ಮಾಡಿ ನನ್ನನ್ನು ಪಾಸ್ ಮಾಡಿ ಎಂದು ಮೌಲ್ಯ ಮಾಪಕರಿಗೆ ಮನವಿ ಮಾಡುವಂತಹ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅದೇ ರೀತಿಯ ಸುದ್ದಿಯೊಂದು ವೈರಲ್ ಆಗಿದ್ದು, ವಿದ್ಯಾರ್ಥಿಯೊಬ್ಬ ʼನನನೆ ಉತ್ತಮ ಅಂಕ ನೀಡದಿದ್ದರೆ   ನನ್ನ ತಾತನಿಗೆ ಹೇಳಿ ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿʼ ಅಂತ ಬೆದರಿಕೆ ಹಾಕಿದ್ದಾರೆ.

ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದ್ದು, ಇತ್ತೀಚಿಗಷ್ಟೇ ಇಲ್ಲಿನ  10 ನೇ ತರಗತಿ ಬೋರ್ಡ್ ಪರೀಕ್ಷೆ ನಡೆದಿದ್ದು ಇದೀಗ  ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಆರಂಭವಾಗಿದೆ. ಇಲ್ಲಿನ ಬಾಪಟ್ಲ ಮುನ್ಸಿಪಲ್ ಹೈಸ್ಕೂಲ್ ನಲ್ಲಿಯೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಪೇಪರ್ ತಿದ್ದುವ ವೇಳೆ ಶಿಕ್ಷಕರೊಬ್ಬರು ಉತ್ತರ ಪತ್ರಿಕೆಯಲ್ಲಿನ ಉತ್ತರವನ್ನು ಕಂಡು ಶಾಕ್ ಆಗಿದೆ.  ಹೌದು ತೆಲುಗು ಪರೀಕ್ಷೆಗೆ ಸಂಬಂಧಿಸಿದಂತೆ  ರಾಮಾಯಣದದ ಮಹತ್ವವನ್ನು ವಿವರಿಸಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

ಇದನ್ನೂ ಓದಿ: ‘ಮೊಮೊಸ್​​ ಅಂಗಡಿಗೆ ಹೆಲ್ಪರ್​​ ಬೇಕಾಗಿದ್ದಾರೆ, ತಿಂಗಳಿಗೆ 25 ಸಾವಿರ ರೂ. ಸಂಬಳ’; ಜಾಹೀರಾತು ಪೋಸ್ಟ್​​ ವೈರಲ್​​

ಈ ಪ್ರಶ್ನೆಗೆ ಒಬ್ಬ ವಿದ್ಯಾರ್ಥಿ ಸರಿಯಾದ ಉತ್ತರವನ್ನು ಬರೆಯದೆ, ತಾನು ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದ ʼಉತ್ತಮ ಅಂಕ ನೀಡದಿದ್ದರೆ  ನನ್ನ ಅಜ್ಜನಿಗೆ ಹೇಳಿ  ನಿಮ್ಮ ಮೇಲೆ ವಾಮಾಚಾರ ಮಾಡ್ತೀನಿʼ ಅಂತ ಬೆದರಿಕೆ ಹಾಕಿದ್ದಾನೆ.  ಇದನ್ನು ನೋಡಿದ ಕೂಡಲೇ ತಬ್ಬಿಬ್ಬಾದ ಮೌಲ್ಯಮಾಪಕರು  ಕೂಡಲೇ ಉತ್ತರ ಪತ್ರಿಕೆಯನ್ನು ಉನ್ನತಾಧಿಕಾರಿಗಳಿಗೆ  ತೋರಿಸಿದರು.  ಆ ವಿದ್ಯಾರ್ಥಿ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದು 100 ಕ್ಕೆ 70 ಅಂಕ ಪಡೆದಿದ್ದಾನೆ.  ಉತ್ತರ ಪತ್ರಿಕೆಯಲ್ಲಿ ಉತ್ತರ ಬಿಟ್ಟು ಬೇರೆ ಏನನ್ನು ಬರೆಯಬಾರದು ಎಂಬ ನಿಯಮಗಳಿದ್ದರೂ ವಾಮಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ ಆ ವಿದ್ಯಾರ್ಥಿಯ ಹಾಲ್ ಟಿಕೆಟ್ ಆಧರಿಸಿ  ವಿದ್ಯಾರ್ಥಿಯ ಹೆಸರು ಮತ್ತು ವಿವರಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಗಳು ಹೇಳಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ